Bengaluru: ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಕಳ್ಳನಾದ ತಂದೆ; ಐಷಾರಾಮಿ ಜೀವನಕ್ಕೆ ಮನೆಗಳ್ಳತನ ವೃತ್ತಿ
ಎಲ್ಲಾ ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಬಡತನದ ಅರಿವು ಆಗದಿರಲಿ ಎಂದು ಕಷ್ಟಪಟ್ಟು ದುಡಿಯುತ್ತಾರೆ. ತಮ್ಮ ಬಾಲ್ಯದಲ್ಲಿ ಸಿಗದ ಸೌಲಭ್ಯಗಳು ಮಕ್ಕಳಿಗೆ ಸಿಗುವಂತೆ ಮಾಡಲು ಹಗಲು ರಾತ್ರಿ ಎನ್ನದೇ ದುಡಿಯುವ ಪೋಷಕರಿದ್ದಾರೆ. ಆದ್ರೆ ಇಲ್ಲೋರ್ವ ತಂದೆ ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ.
ಬೆಂಗಳೂರಿನ ವೈಟ್ ಫೀಲ್ಡ್ ಮತ್ತು ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಗ್ಯಾಂಗ್ ಆಕ್ಟಿವ್ ಆಗಿತ್ತು. ಈ ಗ್ಯಾಂಗ್ ಬೆಳ್ಳಂದೂರು ಪೊಲೀಸರ ಬಲೆಗೆ ಬಿದ್ದಿದೆ.
2/ 8
ಸಂತೋಷ್, ಮೋಹನ್, ಸಾವಿತ್ರಿ, ಹಾಗೂ ರೇಣುಕಾ ಬಂಧಿತ ಆರೋಪಿಗಳು. ಸದ್ಯ ಪೊಲೀಸರು ಬಂಧಿತರಿಂದ 25 ಲಕ್ಷ ಮೌಲ್ಯದ 510 ಗ್ರಾಂ ಚಿನ್ನ ಹಾಗೂ 500 ಗ್ರಾಂ ಬೆಳ್ಳಿ ವಶಕ್ಕೆ ಪಡೆದುಕೊಂಡಿದ್ದಾರೆ.
3/ 8
ಬಂಧಿತ ಆರೋಪಿಗಳು ಗೋಲ್ಡ್ ಕಂಪನಿಗಳು, ಜ್ಯುವೆಲ್ಲರಿ ಹಾಗೂ ಪಾನ್ ಬ್ರೋಕರ್ ಶಾಪ್ ಗಳಲ್ಲಿ ಕದ್ದ ಆಭರಣಗಳ ವಿಲೇವಾರಿ ಮಾಡುತ್ತಿದ್ದರು. ಈ ಆರೋಪಿಗಳ ಬಂಧನದಿಂದ 7 ಪ್ರಕರಣಗಳು ಪತ್ತೆಯಾಗಿವೆ.
4/ 8
ವೈಟ್ ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದವು. ಸದ್ಯ ಬೆಳ್ಳಂದೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
5/ 8
ನಾಲ್ವರಲ್ಲಿ ಓರ್ವನಾಗಿರುವ ಸಂತೋಷ್ ಕೋಲಾರ ಮೂಲದವನು. ಈತನಿಗೆ ಇಬ್ಬರು ಮಕ್ಕಳು. ಮಕ್ಕಳಿಗೆ ಬಡತನದ ಅರಿವಾಗದೆಂತೆ ನೋಡಿಕೊಳ್ಳಲು ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
6/ 8
ಮಕ್ಕಳ ಐಷಾರಾಮಿ ಜೀವನಕ್ಕೆ ಮನೆಗಳ್ಳತನವನ್ನೇ ಸಂತೋಷ್ ವೃತ್ತಿ ಮಾಡಿಕೊಂಡಿದ್ದನು. ರಾತ್ರಿ ಊಟ ಮುಗಿಸಿಕೊಂಡು ಏರಿಯಾದಲ್ಲಿ ಬೀಟ್ ಹಾಕುತಿದ್ದನು.
7/ 8
ರಾತ್ರಿ 9 ಗಂಟೆಗೆ ಯಾವ ಮನೆಯಲ್ಲಿ ಲೈಟ್ ಆಫ್ ಆಗಿದೆ ಎಂದು ಹುಡುಕಿ ಕಳ್ಳತನಕ್ಕೆ ಮುಂದಾಗುತ್ತಿದ್ದನು. ಬಳಿಕ ಮನೆಯಲ್ಲಿ ಯಾರು ಇಲ್ಲದಿರೋದನ್ನ ಮನಗಂಡು ಕಳ್ಳತನ ಮಾಡುತ್ತಿದ್ದನು. ಬೆಳಗಿನ ಜಾವ ಪೊಲೀಸ್ ಬೀಟ್ ಮುಗಿಯುತ್ತಿದ್ದಂತೆ ಆ ಮನೆಯಿಂದ ಕದ್ದ ಮಾಲು ಸಮೇತ ಎಸ್ಕೇಪ್ ಆಗುತ್ತಿದ್ದನು.
8/ 8
ಕದ್ದ ಚಿನ್ನಾಭರಣವನ್ನು ಸಂಬಂಧಿಗಳಾದ ಮೋಹನ್ ಹಾಗೂ ಸಾವಿತ್ರಿ ಮೂಲಕ ಮಾರಾಟ ಮಾಡಿಸುತ್ತಿದ್ದನು. ಚಿನ್ನಾಭರಣ ಮಾರಾಟದಿಂದ ಬಂದ ಹಣದಲ್ಲಿ ಮಕ್ಕಳಿಗೆ ಐಷಾರಾಮಿ ಜೀವನದ ಬದುಕು ತೋರಿಸುತಿದ್ದನು.
First published:
18