Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

ನಮ್ಮ ರಾಜ್ಯದಲ್ಲಿ ಶತ್ರು ದೇಶಗಳ ಒಟ್ಟು 24 ಆಸ್ತಿಗಳಿವೆ. ಅವುಗಳಲ್ಲಿ 12 ಆಸ್ತಿಗಳು ಬೆಂಗಳೂರು ಜಿಲ್ಲಾಡಳಿತದ ವ್ಯಾಪ್ತಿಯಲ್ಲೇ ಇವೆ. ಈ ಪೈಕಿ 6 ಆಸ್ತಿಗಳು ಶತ್ರು ದೇಶಗಳ ಪ್ರಜೆಗಳ ಹೆಸರಲ್ಲಿವೆ.

First published:

  • 17

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ನಮ್ಮ ಕರ್ನಾಟಕದಲ್ಲಿ ಅದರಲ್ಲೂ, ಬೆಂಗಳೂರಿನಲ್ಲಿ ಭಾರತದ ಶತ್ರು ದೇಶಕ್ಕೆ ಸೇರಿದ ಆಸ್ತಿಗಳಿವೆ ಎಂದರೆ ನೀವು ನಂಬುತ್ತೀರಾ? ಆದರೆ ನಂಬಲೇಬೇಕು, ಯಾಕಂದ್ರೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಲ್ಲಿ ಈ ವಿಚಾರ ಬಹಿರಂಗಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ಬೆಂಗಳೂರಿನಲ್ಲಿ ಇರುವ ಭಾರತದ ಶತ್ರು ದೇಶಗಳ 6 ಆಸ್ತಿಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಗುರುತಿಸಿದೆ. ಅಲ್ಲದೇ ಬೆಂಗಳೂರು ನಗರ ಜಿಲ್ಲಾಡಳಿತದ ಮೂಲಕ ಶತ್ರು ದೇಶಗಳ ಆಸ್ತಿಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ಶತ್ರು ದೇಶಗಳ ಆಸ್ತಿ ಎಂದರೆ ಶತ್ರು ದೇಶಗಳ ಪ್ರಜೆಗಳ ಆಸ್ತಿಯೂ ಹೌದು. ನಮ್ಮ ರಾಜ್ಯದಲ್ಲಿ ಶತ್ರು ದೇಶಗಳ ಒಟ್ಟು 24 ಆಸ್ತಿಗಳಿವೆ. ಅವುಗಳಲ್ಲಿ 12 ಆಸ್ತಿಗಳು ಬೆಂಗಳೂರು ಜಿಲ್ಲಾಡಳಿತದ ವ್ಯಾಪ್ತಿಯಲ್ಲೇ ಇವೆ. ಈ ಪೈಕಿ 6 ಆಸ್ತಿಗಳು ಶತ್ರು ದೇಶಗಳ ಪ್ರಜೆಗಳ ಹೆಸರಲ್ಲಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ಈ 6 ಆಸ್ತಿಗಳ ಪೈಕಿ 5 ಆಸ್ತಿಗಳು ಪಾಕಿಸ್ತಾನದ ಪ್ರಜೆಗಳ ಹೆಸರಲ್ಲಿವೆ. ಒಂದು ಆಸ್ತಿ ಚೀನಾ ದೇಶದ ಪ್ರಜೆಯ ಹೆಸರಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ಈ 6 ಆಸ್ತಿಗಳನ್ನು ಮಾರಾಟ ಮಾಡಲು ಇದೀಗ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇ-ಹರಾಜಿನ ಮೂಲಕ ಆಸ್ತಿ ಮಾರಾಟ ಮಾಡಿ ಮಾರುಕಟ್ಟೆ ಮೌಲ್ಯದ ಹಣವನ್ನು ಸರ್ಕಾರಿ ಬೊಕ್ಕಸಕ್ಕೆ ಸೇರಿಸಲು ನಿರ್ಣಯಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ಸದ್ಯ ಬೆಂಗಳೂರಿನಲ್ಲಿರುವ 6 ಶತ್ರು ದೇಶಗಳ ಆಸ್ತಿಗಳ ಮೌಲ್ಯ 500 ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಹೀಗಾಗಿ ಕಡಿಮೆ ಎಂದರೂ ಈ 6 ಆಸ್ತಿಗಳ ಮಾರಾಟದಿಂದ ಕೇಂದ್ರ ಸರ್ಕಾರದ ಖಜಾನೆಗೆ 500 ಕೋಟಿ ರೂ.ವಂತೂ ದೊರೆಯಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru: ಬೆಂಗಳೂರಲ್ಲಿದೆ ಪಾಕ್, ಚೀನಾದ 500 ಕೋಟಿ ಮೌಲ್ಯದ ಆಸ್ತಿ!

    ಅಲ್ಲದೇ, ಇಡೀ ದೇಶದಲ್ಲಿ 12 ಸಾವಿರಕ್ಕೂ ಹೆಚ್ಚು ಆಸ್ತಿಗಳು ಶತ್ರು ದೇಶದ್ದಾಗಿದೆ. ಈ ಎಲ್ಲವಕ್ಕೂ ಒಂದು ಗತಿ ಕಾಣಿಸಲು ಇದಿಗ ಕೇಂದ್ರ ಸರ್ಕಾರ ಮುಂದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES