Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಕಾಯುವ ಸಮಯದಲ್ಲಿ ಇಳಿಕೆ ಆಗಲಿದೆ. ನಮ್ಮ ಮೆಟ್ರೋದಲ್ಲಿ ಇಷ್ಟು ದಿನ ಇದ್ದ ಕಾಯುವ ಸಮಯವನ್ನು ಇಳಿಕೆ ಮಾಡಲಾಗಿದ್ದು, ಈ ಬಗ್ಗೆ ಇಲ್ಲಿದೆ ಮಾಹಿತಿ.

First published:

  • 17

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    ಬೆಂಗಳೂರಿನಲ್ಲಿ ಪ್ರತಿನಿತ್ಯ ಆಫೀಸ್​, ಕಾಲೇಜು ಎಂದೆಲ್ಲಾ ಹೋಗುವವರ ಪಾಲಿಗೆ ಮೆಟ್ರೋ ವರದಾನವಾಗಿದೆ ಎಂದರೆ ಅನುಮಾನವಿಲ್ಲ. ಯಾವುದೇ ಟ್ರಾಫಿಕ್ ಸಮಸ್ಯೆ ಇಲ್ಲದೇ, ಸುಲಭವಾಗಿ ಹಾಗೂ ಬೇಗನೆ ನಿರ್ದಿಷ್ಟ ಸ್ಥಳಕ್ಕೆ ತಲುಪಬಹುದು. ಹಾಗಾಗಿ ಬಹುತೇಕ ಜನರು ಮೆಟ್ರೋ ಅವಲಂಭಿಸಿದ್ದಾರೆ.

    MORE
    GALLERIES

  • 27

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    ಸದ್ಯ ಮೆಟ್ರೋ ಪ್ರಯಾಣಿಕರಿಗೆ ಸಿಗುತ್ತಿರುವ ಸಿಹಿ ಸುದ್ದಿ ಏನೆಂದರೆ ರೈಲಿಗಾಗಿ ಕಾಯುವ ಸಮಯ 3 ರಿಂದ 3.5 ನಿಮಿಷಗಳ ವರೆಗೆ ಇಳಿಕೆ ಆಗುತ್ತದೆ. ಇದಕ್ಕೆ ಕಾರಣ ಹೊಸ 36 ರೈಲು ಸೆಟ್​ಗಳನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಪಡೆದಿರುವುದು.

    MORE
    GALLERIES

  • 37

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    ಸದ್ಯದ ಮಾಹಿತಿ ಪ್ರಕಾರ ಕೋಲ್ಕತ್ತಾ ಮೂಲದ Titagarh Wagon Limited ಹಾಗೂ CRRC ಕಾರ್ಪೋರೇಷನ್​ ಪಾಲುದಾರಿಕೆಯಲ್ಲಿ 36 ಹೊಸ ರೈಲು ಸೆಟ್​ಗಳು ಲಭಿಸಲಿದ್ದು, ಈ ಕಾರಣದಿಂದ ಗ್ರೀನ್ ಹಾಗೂ ಪರ್ಪಲ್ ಲೈನ್​ ಗಳಲ್ಲಿ ಪ್ರಯಾಣಿಕರಿಗೆ ಕಾಯುವ ಸಮಯ ಇನ್ನೂ ಕಡಿಮೆ ಆಗಲಿದೆ.

    MORE
    GALLERIES

  • 47

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    Titagarh Wagon Limited ಕಂಪನಿಯು ಬಹುತೇಕ ರೈಲು ಸೆಟ್​ಗಳನ್ನು ಪೂರೈಸಲಿದ್ದು, CRRC ಕೇವಲ 2 ಸೆಟ್​ ಪೂರೈಸಲಿದೆ. ಈ 2 ಸೆಟ್​ ಅನ್ನು ಪರೀಕ್ಷಾರ್ಥವಾಗಿ ಬಳಸಲಾಗುತ್ತದೆ. ಮೂಲಗಳ ಪ್ರಕಾರ ಮೊದಲ ಸೆಟ್​ ಅನ್ನು ಆಗಸ್ಟ್ ಅಂತ್ಯದಲ್ಲಿ​ ಹಾಗೂ 2ನೇ ಸೆಟ್​ ಅನ್ನು ಸೆಪ್ಟೆಂಬರ್ ಆರಂಭದಲ್ಲಿ ಕಳುಹಿಸಲಾಗುತ್ತದೆ.

    MORE
    GALLERIES

  • 57

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    ಸುಮಾರು 216 ಕೋಚ್​ಗಳ ಈ ಸೆಟ್​ ಗೆ 1,578 ಕೋಟಿ ರೂ.ಗಳ ಒಪ್ಪಂದವನ್ನು ಡಿಸೆಂಬರ್ 2019 ರಲ್ಲಿ ಸಹಿ ಹಾಕಿದ್ದು, ಇನ್ನು ಈ ಸೆಟ್​ಗಳಲ್ಲಿ 21 ಡಿಸೈನ್​ ಟೂ ಗೋ ಕೋಚ್​ ಗಳನ್ನು ಹೊಂದಿರುತ್ತದೆ. ಇವುಗಳನ್ನು ಸರ್ಕ್ಯೂಟ್‌ಗಳ ಮೂಲಕ ಟ್ರ್ಯಾಕ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

    MORE
    GALLERIES

  • 67

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    ಕಂಪನಿ ತಿಳಿಸಿರುವಂತೆ ಮೊದಲ ಮಾದರಿಯ DTG ರೈಲು ಸೆಟ್ ಅನ್ನು ನವೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ನಂತರ ಅದನ್ನು ಪ್ರಾಯೋಗಿಕವಾಗಿ ಕೆಲ ದಿನಗಳ ಕಾಲ ರನ್ ಮಾಡಿಸಲಾಗುತ್ತದೆ. ಇನ್ನು ಉಳಿದ ರೈಲು ಸೆಟ್​ಗಳನ್ನು ಕೋಲ್ಕತ್ತಾ ಮೂಲಕದ TWL ಕಂಪನಿ 2024ರ ಮಾರ್ಚ್ ನಂತರ ಪೂರೈಸುತ್ತದೆ.

    MORE
    GALLERIES

  • 77

    Namma Metro: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​

    ನಂತರ ಪ್ರತಿ ತಿಂಗಳು 2 ಸೆಟ್​ ಒದಗಿಸಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ. ಈ ಹೊಸ ರೈಲು ಸೆಟ್​ಗಳ ಕಾರಣದಿಂದ 5 ನಿಮಿಷವಿದ್ದು ಮೆಟ್ರೋ ಕಾಯುವಿಕೆ ಸಮಯ 3 ನಿಮಿಷಕ್ಕೆ ಇಳಿಕೆಯಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ

    MORE
    GALLERIES