ಬೆಂಗಳೂರಿನಲ್ಲಿ ಮೋದಿ ಎಂಬ ಹೆಸರಿನ ಮಸೀದಿಯೊಂದಿದೆ! ಸದ್ಯ ಈ ಹೆಸರಿನ ಮಸೀದಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿಕರ ಚರ್ಚೆಯಾಗುತ್ತಿದೆ.
2/ 9
ಮೋದಿ ಮಸೀದಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ನಿರ್ಮಿಸಿದ ಮಸೀದಿಯೇ ಎಂದು ಹಲವರು ಮೇಲ್ನೋಟಕ್ಕೆ ಭಾವಿಸಬಹುದು. ಆದರೆ ಇದು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ನಿರ್ಮಿಸಿದ ಮಸೀದಿ ಅಲ್ಲ.
3/ 9
ಬೆಂಗಳೂರಿನ ಟಾಸ್ಕರ್ ಟೌನ್ನಲ್ಲಿರುವ ಮೋದಿ ಮಸೀದಿ ಭವ್ಯ ವಾಸ್ತುಶಿಲ್ಪದಿಂದಲೂ ಖ್ಯಾತಿ ಪಡೆದಿದೆ.
4/ 9
ಈ ಮಸೀದಿಯು ಸುಮಾರು 170 ವರ್ಷಗಳಷ್ಟು ಹಳೆಯದು. ಪ್ರಧಾನಿ ಮೋದಿ ಮತ್ತು ಈ ಮಸೀದಿ ನಡುವೆ ಯಾವುದೇ ಸಂಬಂಧವಿಲ್ಲ.
5/ 9
ಟಾಸ್ಕರ್ ಟೌನ್ನಲ್ಲಿರುವ ಈ ಮಸೀದಿಯನ್ನು ಹೊರತುಪಡಿಸಿ, ಬೆಂಗಳೂರಿನಲ್ಲಿ ಮೋದಿ ಮಸೀದಿ ಎಂದು ಕರೆಯಲ್ಪಡುವ ಎರಡು ಮಸೀದಿಗಳಿವೆ.
6/ 9
1849 ರ ಸುಮಾರಿಗೆ ಟಾಸ್ಕರ್ ಟೌನ್ ಅನ್ನು ಮಿಲಿಟರಿ ಮತ್ತು ಸಿವಿಲ್ ಸ್ಟೇಷನ್ ಎಂದು ಕರೆಯಲಾಗುತ್ತಿತ್ತು. ಅಲ್ಲಿ ಶ್ರೀಮಂತ ವ್ಯಾಪಾರಿ ಮೋದಿ ಅಬ್ದುಲ್ ಗಫೂರ್ ವಾಸಿಸುತ್ತಿದ್ದರು. ಅವರು ಈ ಪ್ರದೇಶದಲ್ಲಿ ಮಸೀದಿಯ ಅಗತ್ಯವನ್ನು ಅರಿತು 1849 ರಲ್ಲಿ ಹೊಸ ಮಸೀದಿ ನಿರ್ಮಿಸಿದ್ದಾರೆ.
7/ 9
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಸಮಯದಲ್ಲೇ ಈ ನವೀಕರಿಸಿದ ಮಸೀದಿಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು.
8/ 9
ಇಂಡೋ-ಇಸ್ಲಾಮಿಕ್ ಆರ್ಕಿಟೆಕ್ಚರ್ನಲ್ಲಿ 30,000 ಚದರ ಅಡಿ ವಿಸ್ತೀರ್ಣದ ಮಸೀದಿಯನ್ನು ನಿರ್ಮಿಸಲಾಗಿದೆ.