Bengaluru Crime: ಓಮಿಕ್ರಾನ್ಗೆ ಹೊಸ ಲಸಿಕೆ ಹಾಕ್ತಿವಿ ಅಂತ ಮನೆಗೆ ನುಗ್ಗಿದವರು ಮಾಡಿದ್ದೇ ಬೇರೆ!
Bengaluru Robbery Case: ಕೊರೊನಾ 2 ಅಲೆಗಳ ಕರಾಳತೆ ಕಳಚಿ ಜನಜೀವನ ಹಿಂದಿನ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಕೊರೊನಾದ ಹೊಸ ರೂಪಾಂತರ ಓಮಿಕ್ರಾನ್ (Covid variant Omicron) ವಿಶ್ವದ ನೆಮ್ಮದಿ ಕೆಡಿಸಿದೆ. ಕೋವಿಡ್ ಲಸಿಕೆ ಪಡೆದಿರುವವರೂ ಓಮಿಕ್ರಾನ್ ಗೆ ಹೆದರುತ್ತಿದ್ದಾರೆ. ಆದರೆ ಬೆಂಗಳೂರಿನ ಖದೀಮರು ಮಾತ್ರ ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಕೈ ಚಳಕ ತೋರಿದ್ದಾರೆ.
ಹೊಸ ಓಮಿಕ್ರಾನ್ ಕೋವಿಡ್ ರೂಪಾಂತರಕ್ಕೆ ಹೊಸ ಲಸಿಕೆ ಬಂದಿದೆ. ಓಮಿಕ್ರಾನ್ ವ್ಯಾಕ್ಸಿನ್ ಕೊಡೋಕೆ ಬಂದಿದ್ದೇವೆ ಎಂದು ದುಷ್ಕರ್ಮಿಗಳು ಯಶವಂತಪುರದಲ್ಲಿರುವ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣಗಳನ್ನು ದೋಚಿದ್ದಾರೆ. (ಪ್ರಾತಿನಿಧಿಕ ಚಿತ್ರ)
2/ 6
ಮೊದಲು ಮೂವರು ದರೋಡೆಕೋರರು ಕಾರಿನಲ್ಲಿ ಬಂದಿದ್ದಾರೆ. ಆರೋಪಿಗಳಲ್ಲಿ ಒಬ್ಬರು ಹ್ಯಾಂಡ್ ಗ್ಲೌಸ್ ಧರಿಸಿ ವ್ಯಾಕ್ಸಿನೇಷನ್ ಕರ್ತವ್ಯದಲ್ಲಿರುವ ವೈದ್ಯಕೀಯ ಸಿಬ್ಬಂದಿಯಂತೆ ಮನೆಯೊಳಗೆ ಹೋಗಿದ್ದಾನೆ. (ಸಾಂದರ್ಭಿಕ ಚಿತ್ರ)
3/ 6
ಮನೆ ಮಾಲೀಕ ಸಂಪತ್ ಸಿಂಗ್ ಅವರ ಪತ್ನಿ ಪಿಸ್ತಾ ದೇವಿ ಮತ್ತು ಸೊಸೆ ರಕ್ಷಾ ಅವರೊಂದಿಗೆ ಕೋವಿಡ್-19 ವ್ಯಾಕ್ಸಿನೇಷನ್ ಕುರಿತು ವಿಚಾರಿಸಿದ್ದಾರೆ. ಹೊಸ ಕೋವಿಡ್ ರೂಪಾಂತರ 'ಓಮಿಕ್ರಾನ್' ಗಾಗಿ ಲಸಿಕೆ ನೀಡಲು ಬಂದಿದ್ದೇವೆ ಎಂದು ಮನೆಯಲ್ಲಿದ್ದ ಹೆಂಗಸರನ್ನು ನಂಬಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 6
ಪಿಸ್ತಾ ದೇವಿ ಪತಿಗೆ ಕರೆ ಮಾಡಲು ಯತ್ನಿಸಿದಾಗ ಆರೋಪಿಗಳು ಅವರ ಹಣೆಗೆ ಪಿಸ್ತೂಲ್ ಇಟ್ಟು ಬೆದರಿಸಿದ್ದಾರೆ. ಇತರ ಇಬ್ಬರು ಆರೋಪಿಗಳು ಹೆಂಗಸರನ್ನು ಕೋಣೆಗೆ ನೂಕಿ ಬೀಗ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ 50 ಗ್ರಾಂ ಚಿನ್ನಾಭರಣ ದೋಚಿದ್ದಾರೆ. (ಸಾಂದರ್ಭಿಕ ಚಿತ್ರ)
5/ 6
ದರೋಡೆಕೋರರು ಮನೆಯಲ್ಲಿದ್ದಾಗಲೇ ಪಿಸ್ತಾ ದೇವಿ ಅವರ ಹಿರಿಯ ಮಗ ವಿಕ್ರಮ್ ಸಿಂಗ್ ಮನೆಗೆ ಬಂದಿದ್ದಾರೆ. ಚಾಲಾಕಿ ಆರೋಪಿಗಳು ಅವರನ್ನು ಲಸಿಕೆ ಹಾಕಿಸಿಕೊಂಡಿದ್ದೀರಾ ಎಂದು ಕೇಳಿದ್ದಾರೆ. ಎರಡೂ ಡೋಸ್ ಸಿಕ್ಕಿದೆ ಎಂದು ಹೇಳಿದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)
6/ 6
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನನಗರದಲ್ಲಿರುವ ಸಂಪತ್ ಸಿಂಗ್ ಅವರ ನಿವಾಸದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. (ಸಾಂದರ್ಭಿಕ ಚಿತ್ರ)
First published:
16