Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ (Mekedatu Padayatra( ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಬೆಂಗಳೂರಿನಲ್ಲಿ ಎರಡನೇ ದಿನ ಪಾದಯಾತ್ರೆ ನಡೆಯುತ್ತಿದ್ದು, ಕೆಲವು ಭಾಗಗಳಲ್ಲಿ ಹೆಚ್ಚು ಟ್ರಾಫಿಕ್ (Traffi) ಉಂಟಾಗಲಿದೆ. ಹಾಗಾಗಿ ವಾಹನ ಸವಾರರು ಮಾರ್ಗ ಬದಲಿಸೋದು ಉತ್ತಮ.

First published:

  • 18

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಇಂದು ಬಿಟಿಎಂ ಲೇಔಟ್ ನಿಂದ ಇಂದಿನ ಪಾದಯಾತ್ರೆ ಮುಂದುವರಿಯಲಿದ್ದು, ಸಂಜೆ ಅರಮನೆ ಮೈದಾನ ತಲುಪಲಿದೆ. ಪಾದಯಾತ್ರೆ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಯುಂಟಾಗಲಿದೆ.

    MORE
    GALLERIES

  • 28

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಮಾರುತಿ ನಗರ, ಫೋರಂ ಮಾಲ್, ಮಕಾ ಮಸ್ದೀದ್, ಗುರುನಾನಕ್ ಮಂದಿರ, ತಿರುವಳ್ಳುರ್ ಪ್ರತಿಮೆ, ಮೇಕ್ರಿ ಸರ್ಕಲ್ ಮೂಲಕ ಅರಮನೆ ಮೈದಾನವನ್ನು ಕಾಂಗ್ರೆಸ್ ನಾಯಕರು ತಲುಪಲಿದ್ದಾರೆ. ಈ ಮಾರ್ಗದಲ್ಲಿ ವಾಹನ ಸಂಚಾರದಲ್ಲಿ ದಟ್ಟಣೆ ಉಂಟಾಗಲಿದೆ.

    MORE
    GALLERIES

  • 38

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ನಾಳೆ ಮಧ್ಯಾಹ್ನ 3 ಗಂಟೆಗೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ನ್ಯಾಶನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆ ಅಂತ್ಯಗೊಳ್ಳಲಿದೆ.

    MORE
    GALLERIES

  • 48

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.

    MORE
    GALLERIES

  • 58

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಕಾಂಗ್ರೆಸ್ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ವಾಹನ ಸವಾರರು ಸಂಚರಿಸದಿರುವುದು ಸೂಕ್ತವಾಗಿದೆ.  ಬೆಳಗ್ಗೆ 10 ಗಂಟೆಗೆ ಬಿಟಿಎಂ ಲೇಔಟಿನ ಅದ್ವೈತ್ ಪೆಟ್ರೋಲ್ ಬಂಕ್ ಬಳಿ ಪಾದಯಾತ್ರೆ ಆರಂಭವಾಗಲಿದೆ.

    MORE
    GALLERIES

  • 68

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಮಾರುತಿನಗರ, ಹೊಸೂರು ಮುಖ್ಯ ರಸ್ತೆ, ಫೋರಂ ಮಾಲ್, ಪಾಸ್ ಪೋರ್ಟ್ ಕಚೇರಿ, ಇನ್ ಫೆಂಟ್ ಜೀಸಸ್ ರಸ್ತೆ, ಮಖಾ ಮಸ್ಜೀದ್, ಜಸ್ಮಾದೇವಿ ಭವನ, ಹಾಸ್ ಮಾಟ್ ಆಸ್ಪತ್ರೆ, ಟ್ರಿನಿಟಿ ವೃತ್ತ, ಗುರುನಾನಕ್ ಮಂದಿರ, ತಿರುವಳ್ಳುವರ್ ಪ್ರತಿಮೆ, ಕೋಲ್ಸ್ ಪಾರ್ಕ್, ನಂದಿದುರ್ಗ ರಸ್ತೆ, ಜೆಸಿ ನಗರ ಪೊಲೀಸ್ ಠಾಣೆ, ಮುನಿರೆಡ್ಡಿ ಪಾಳ್ಯ ಮಾರ್ಗವಾಗಿ ಟಿವಿ ಟವರ್, ಮೆಕ್ರಿ ರಸ್ತೆ ಮೂಲಕ ಅರಮನೆ ಮೈದಾನ ತಲುಪಲಿದೆ.

    MORE
    GALLERIES

  • 78

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದ್ದ, ಮೊದಲ ಹಂತ ಕೊರೊನಾದಿಂದ ಸ್ಥಗಿತಗೊಂಡಿತ್ತು. ಕೊರೊನಾ ಪ್ರಮಾಣ ತಗ್ಗಿದ ಬಳಿಕ ಕಾಂಗ್ರೆಸ್ ಪಾದಯಾತ್ರೆ ಮುಂದುವರಿಸಿದೆ.

    MORE
    GALLERIES

  • 88

    Traffic Alert: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ; ಬೆಂಗಳೂರಿನ ಈ ಭಾಗದಲ್ಲಿ ಹೆಚ್ಚಾಗಲಿದೆ ಟ್ರಾಫಿಕ್

    ಇನ್ನೂ ಕಾಂಗ್ರೆಸ್ ಮತಕ್ಕಾಗಿ ಪಾದಯಾತ್ರೆ ಮಾಡುತ್ತಿದೆ. ಇದೊಂದು ವಿವಿಐಪಿ ಪಾದಯಾತ್ರೆ ಎಂದು ಬಿಜೆಪಿ ಟೀಕಿಸಿದೆ.

    MORE
    GALLERIES