ನೀವು ಮದುವೆಯಾಗುವ ಹಂಬಲದಲ್ಲಿದ್ದೀರಾ? ವಧು-ವರರ ನಿಕ್ಕಿಯೂ ಆಗಿದೆಯೇ? ನಿಮಗೊಂದು ಸುವರ್ಣಾವಕಾಶ ಇಲ್ಲಿದೆ.
2/ 8
ಬೆಂಗಳೂರಿನ ಬಂಟರ ಸಂಘದ ವಿವಾಹ ವೇದಿಕೆ ಹಮ್ಮಿಕೊಂಡಿರುವ ಕಂಕಣ ಭಾಗ್ಯ ಯೋಜನೆಯಡಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದೆ. (ಸಾಂದರ್ಭಿಕ ಚಿತ್ರ)
3/ 8
ಬಂಟ ಸಮಾಜದ ಬಡ ಕುಟುಂಬಗಳ ವಧು-ವರರು ಉಚಿತ ಕಂಕಣ ಭಾಗ್ಯ ಯೋಜನೆಯಡಿ ಮದುವೆಯಾಗಬಹುದಾಗಿದೆ.
4/ 8
ಬಂಟ ಸಮುದಾಯದ ಪದ್ಧತಿಯಂತೆ ಬೆಂಗಳೂರು ಬಂಟರ ಸಂಘದ ವತಿಯಿಂದ ಮದುವೆ ಮಾಡಲಾಗುವುದು. ಹೀಗಾಗಿ ಅಗತ್ಯವುಳ್ಳವರು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಸಾಮೂಹಿಕ ಮದುವೆ ಯೋಜನೆಯಡಿ ನೋಂದಣಿ ಮಾಡಿಕೊಂಡ ವಧು-ವರರು ಮತ್ತು ಒಟ್ಟು 16 ಜನರಿಗೆ ಬೆಂಗಳೂರಿಗೆ ಬಂದು ಹೋಗಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದಾಗಿ ಘೋಷಿಸಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
ವಧುವಿಗೆ ಕರಿಮಣಿ, ಸೀರೆ, ವಧುವಿನ ಅಲಂಕಾರ ಮತ್ತು ವರನಿಗೆ ಮದುವೆಯ ಉಡುಗೆ ಕೊಡಲಾಗುವುದು. ವಧು-ವರರಿಗೆ ಮತ್ತು ಅವರ ಸಂಬಂಧಿಕರಿಗೆ ಊಟ, ಉಳಿದುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಲಾಗಿದೆ.
7/ 8
ಪೂಜೆ, ಮಂಟಪ, ಛತ್ರ, ಹೂವಿನ ಅಲಂಕಾರ, ವಾದ್ಯ ಮತ್ತು ಮದುವೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಸಂಘ ತಿಳಿಸಿದೆ.
8/ 8
ಈ ಉಚಿತ ಸಾಮೂಹಿಕ ಮದುವೆ ಯೋಜನೆಗೆ ನೋಂದಣಿ ಮಾಡಿಕೊಳ್ಳಬಯಸುವವರು 9901885998 ಅಥವಾ 9741910925 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. (ಸಾಂದರ್ಭಿಕ ಚಿತ್ರ)