Mango Mela: ಒಂದು ಬದಿಯಲ್ಲಿ ವಿಭಿನ್ನ ರೀತಿಯ ಮಾವಿನ ಹಣ್ಣುಗಳು, ಮತ್ತೊಂದು ಬದಿಯಲ್ಲಿ ಘಮ್ ಎನ್ನುವ ಹಲಸಿನ ಹಣ್ಣುಗಳು. ನಿಮಗೆ ಯಾವುದು ಬೇಕೋ ಅದನ್ನು ಖರೀದಿ ಮಾಡಬಹುದು. ಈ ಅವಕಾಶ ಸಿಗುವುದು ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಮಾವಿನ ಮೇಳದಲ್ಲಿ. ಈ ಮೇಳದಲ್ಲಿ ಯಾವೆಲ್ಲ ಬಗೆಯ ಹಣ್ಣುಗಳಿದೆ ಹಾಗೂ ಬೆಲೆಗಳೆಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ
ಹಣ್ಣುಗಳ ರಾಜನೆಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅದರ ರುಚಿ ಚಪ್ಪರಿಸಿದವರೇ ಹೆಚ್ಚು. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗುವ ಈ ಹಣ್ಣು ಎಂದರೆ ಸಾಕು ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ತಳಿಯ ಮಾವು ಹುಡುಕಲು ಪರದಾಡಬೇಕಾಗುತ್ತದೆ. ಆದರೆ ಈ ಮಾವಿನ ಮೇಳದ ಕಾರಣದಿಂದ ಒಂದೇ ಸೂರಿನಡಿ ಎಲ್ಲವೂ ಸಿಗುತ್ತದೆ.
2/ 9
ಸಸ್ಯಕಾಶಿ ಲಾಲ್ಬಾಗ್ನಲ್ಲಿ ಪ್ರತಿವರ್ಷದಂತೆ ಈ ವರ್ಷ ಸಹ ಮಾವು ಹಾಗೂ ಹಲಸಿನ ಮೇಳ ಆರಂಭವಾಗಿದ್ದು, ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ತೋಟಾಗಾರಿಕೆ ಇಲಾಖೆ ಈ ಮೇಳವನ್ನು ಆಯೋಜಿಸುತ್ತದೆ. ವೆರೈಟಿ ಮಾವು ಹಾಗೂ ಹಲಸಿನ ಹಣ್ಣುಕೊಳ್ಳಲು ಜನರು ಮುಗಿ ಬೀಳುತ್ತಿದ್ದಾರೆ.
3/ 9
ನಿನ್ನೆಯಿಂದ ಅಂದರೆ ಮೇ 26ರಿಂದ ಈ ಮೇಳ ಆರಂಭವಾಗಿದ್ದು, ಜೂನ್ 4ರ ತನಕ ಇರುತ್ತದೆ. ಇನ್ನು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಈ ಮೇಳ ಇರಲಿದ್ದು, 10 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಗ್ರಾಹಕರು ತಮ್ಮಿಷ್ಟದ ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ.
4/ 9
ರಾಜ್ಯದ ನಾನಾ ಕಡೆಯಿಂದ ರೈತರು ತಾವು ಬೆಳೆದಿರುವ ಮಾವು ಹಲಸಿನ ಹಣ್ಣನ್ನು ಇಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಇನ್ನು ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗದಿ ಮಾಡಿರುತ್ತದೆ.
5/ 9
ಅಕಾಲಿಕ ಮಳೆ ಮತ್ತು ಬಿಸಿಗಾಳಿಯಿಂದ ರಾಜ್ಯದಲ್ಲಿ ಮಾವಿನ ಇಳುವರಿ ಕಡಿಮೆಯಾಗಿತ್ತು, ಹಾಗಾಗಿ ಈ ಮಳೆ ಮಾವಿನ ಮೇಳ ನಡೆಯುವುದೇ ಅನುಮಾನ ಎನ್ನಲಾಗುತ್ತಿತ್ತು. ಆದರೆ ಸದ್ಯ ಮೇಳ ಆರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಡಿಕೆ ಪೂರೈಸುವುದು ಕಷ್ಟವಾಗುತ್ತದೆ ಎಂದು ಹಾಪ್‌ಕಾಮ್ಸ್, ಅಧಿಕಾರಿಗಳು ತಿಳಿಸಿದ್ದಾರೆ.
6/ 9
ರಸ್ಪುರಿ, ಬಾದಾಮಿ, ಮತ್ತು ಅಲ್ಫೋನ್ಸೋ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಮಲ್ಲಿಕಾ, ಬಂಗನಪಲ್ಲಿ ಮತ್ತು ಸಿಂಧೂರ ಹಣ್ಣು ಹೆಚ್ಚಾಗಿ ಸಿಗುತ್ತಿದೆ. ಇನ್ನು ಈ ಮೇಳದಲ್ಲಿ ಲಭ್ಯವಿರುವ ಪ್ರತಿಯೊಂದು ಹಣ್ಣನ್ನು ಸಹ ನಗರದ ಪ್ರತಿಯೊಂದು ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7/ 9
ಇನ್ನು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಇಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣು ಮೇಳದಲ್ಲಿ ಸಿಗಲಿದ್ದು, ವಿವಿಧ ದರಗಳನ್ನು ನಿಗಧಿ ಮಾಡಿದೆ.
8/ 9
ಈ ಬಾರಿ ಮೇಳದಲ್ಲಿ ಮಾವಿನ ಹಣ್ಣು ಕೆಜಿಗೆ ₹32 ರಿಂದ ಸಹ ಲಭ್ಯವಿದ್ದು ₹215 ವರೆಗೆ ಹಣ್ಣುಗಳ ಬೆಲೆ ಇರುತ್ತದೆ. ಇನ್ನು ಇಲ್ಲಿ ಹಲಸಿನ ಹಣ್ಣು ಕೆಜಿಗೆ ₹25 ರೂ ನಿಗದಿಯಾಗಿದ್ದು, ಹಲಸಿನ ಹಣ್ಣಿನಲ್ಲಿ ಸಹ ಹಲವಾರು ರೀತಿಯ ವಿಧಗಳು ಇಲ್ಲಿ ನಿಮಗೆ ಸಿಗುತ್ತದೆ.
9/ 9
ಇನ್ನು ಮೇಳದಲ್ಲಿ ಹಣ್ಣುಗಳಾದ ಇಮಾಮ್ ಪಸಂದ್ - 149, ಮಲ್ಲಿಕಾ - 108, ಬಾದಾಮಿ - 132, ಸಕ್ಕರೆ ಗುತ್ತಿ - 122, ಸಿಂಧೂರ - 52, ರಸ್ಪುರಿ - 112, ದಶೆರಿ - 126, ಕಲಾಪಡ- 139, ಮಲ್ಗೋವಾ - 144, ತೋತಾಪುರಿ - 31, ಅಮರಪಲ್ಲಿ - 126, ಬೈಗಂಪಲ್ಲಿ-52, ಕೇಸರ್ -104 ರೂಪಾಯಿ ಎಂದು ನಿಗದಿ ಮಾಡಲಾಗಿದೆ.