ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಮೂಡಲಪಾಳ್ಯ ಸಮೀಪದ ಸಂಜೀವಿನಿ ನಗರದಲ್ಲಿ ತಾಯಿ-ಮಗಳ ಜೋಡಿ ಕೊಲೆ ನಡೆದಿದೆ.
ಬೆಳಗ್ಗೆ 10.15ರ ಸುಮಾರಿಗೆ ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಬಿಟ್ಟ ಬಂದ ಪತಿ ರವಿಕುಮಾರ್ (42) ಪತ್ನಿ ಸುನೀತಾ (38) ಜತೆ ಜಗಳ ಮಾಡಿದ್ದಾನೆ. ಪತ್ನಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸುತ್ತಿದ್ದ ರವಿಕುಮಾರ್ ಅದೇ ವಿಚಾರವಾಗಿ ಮತ್ತೆ ಜಗಳ ತೆಗೆದಿದ್ದ. (ಸಾಂದರ್ಭಿಕ ಚಿತ್ರ)
2/ 8
ಜಗಳ ಮಧ್ಯೆಯೇ ಹೆಂಡತಿಯ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾನೆ. ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ಸುನೀತಾ ಅವರ ತಾಯಿ ಸರೋಜಮ್ಮ (60) ಮೇಲೂ ಅಳಿಯ ರವಿಕುಮಾರ್ ಹಲ್ಲೆ ಮಾಡಿದ್ದಾನೆ.
3/ 8
ಮಗಳ ರಕ್ಷಣೆ ಬಂದು ಮಚ್ಚಿನೇಟು ತಿಂದು ಸರೋಜಮ್ಮ ಕುಸಿದು ಬಿದ್ದಿದ್ದಾರೆ. ತನ್ನ ತಾಯಿಯ ಮೇಲೆ ನಡೆದ ಹಲ್ಲೆ ಕಂಡು ಸುನೀತಾ ಕಿರುಚಿಕೊಂಡಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರವಿ ಕುಮಾರ್ ಪತ್ನಿಯ ಮೇಲೆ ಮಚ್ಚು ಬೀಸಿದ್ದಾನೆ. ಆಕೆ ಸಾಯುವವರೆಗೆ ಹಲ್ಲೆ ನಡೆಸಿದ್ದಾನೆ. (ಸಾಂದರ್ಭಿಕ ಚಿತ್ರ)
4/ 8
ಜೋಡಿ ಕೊಲೆಯ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಆರೋಪಿ ರವಿ ಕುಮಾರ್ ಧರಿಸಿದ್ದ ಶರ್ಟ್ ಪೂರ್ತಿಯಾಗಿ ರಕ್ತದಿಂದ ತೊಯ್ದಿತ್ತು. ಅದೇ ಭಯಾನಕ ಸ್ಥಿತಿಯಲ್ಲಿ ರವಿಕುಮಾರ್ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ನಡೆದು ಬಂದು ಶರಣಾಗಿದ್ದಾನೆ.
5/ 8
ಹೆಂಡತಿ, ಅತ್ತೆಯನ್ನು ಕೊಲೆ ಮಾಡಿದ್ದು, ಮನೆಯ ಕೀಯನ್ನು ಮೇಜಿನ ಮೇಲೆ ಇಟ್ಟಿರುವುದಾಗಿ ಪೊಲೀಸರಿಗೆ ಹೇಳಿದ್ದಾನೆ. ದಿಗ್ಭ್ರಮೆಗೊಂಡ ಸಬ್ ಇನ್ಸ್ ಪೆಕ್ಟರ್ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿದರು. ಕೂಡಲೇ ಪೊಲೀಸರು ರವಿ ಕುಮಾರ್ ಮನೆಗೆ ತರಳಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. (ಪ್ರಾತಿನಿಧಿಕ ಚಿತ್ರ)
6/ 8
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ರವಿ ಕುಮಾರ್ 18 ವರ್ಷಗಳ ಹಿಂದೆ ಬೆಂಗಳೂರಿನ ಗಿರಿನಗರ ನಿವಾಸಿ ಸುನೀತಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ 17 ವರ್ಷದ ಮಗ ಮತ್ತು ಎಂಟು ವರ್ಷದ ಮಗಳಿದ್ದಾರೆ. (ಪ್ರಾತಿನಿಧಿಕ ಚಿತ್ರ)
7/ 8
ಒಂದು ಕಾಲದಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ರವಿ ಕುಮಾರ್, ಈಗ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದನು. ತನ್ನ ಹೆಂಡತಿ ಪರಪುರಷರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ರವಿ ಕುಮಾರ್ ಶಂಕಿಸಿದ್ದಾನೆ. ಕಳೆದ ಆರು ತಿಂಗಳಿನಿಂದ ದಂಪತಿ ಈ ವಿಚಾರವಾಗಿ ಜಗಳವಾಡುತ್ತಿದ್ದರು. (ಸಾಂದರ್ಭಿಕ ಚಿತ್ರ)
8/ 8
ಎರಡೂ ಕುಟುಂಬದ ಹಿರಿಯರು ಮಧ್ಯಸ್ಥಿಕೆ ವಹಿಸಿದ್ದರು, ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ ಅದೇ ವಿಷಯವಾಗಿ ಶುರುವಾದ ಜಗಳ ಜೋಡಿ ಕೊಲೆಯಲ್ಲಿ ಅಂತ್ಯವಾಗಿದೆ. (ಸಾಂದರ್ಭಿಕ ಚಿತ್ರ)