ನಮಗೆ ಬಂದಿರೋ ಮಾಹಿತಿ ಪ್ರಕಾರ ಕೆಂಗೇರಿ, ಹೆಮ್ಮಿಗೆಪುರದಲ್ಲಿ 12.15 ರಲ್ಲಿ ಕಂಪನ ಆಗಿದೆ ಅಂತ ಕೇಳಿದ್ದೀವಿ. ಇದನ್ನ ಕರ್ನಾಟಕ ರಾಜ್ಯ ಡಿಸಸ್ಟರ್ ಮ್ಯಾನೇಜ್‌ಮೆಂಟ್ ಸ್ಟಡಿ ಮಾಡಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಯಾವುದೆ ಟ್ರಿಮ್ಮರ್ಸ್ ಇಲ್ಲ ಅಂತ ಗೊತ್ತಾಗಿದೆ. ನಮಗೂ ಈಗಲೇ ಮಾಹಿತಿ ಬಂದಿರೋದು. ನಾನಾ ಕಾರಣಗಳಿಂದ ಹೀಗೇ ಆಗಿರಬಹುದು. ನಮ್ಮ ಇಲಾಖೆಯವರು ತನಿಖೆ ಮಾಡುತ್ತಾರೆ ಎಂದು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕ ಸಿ ವಿ ರಾಮನ್ ಮಾಹಿತಿ ನೀಡಿದ್ದಾರೆ.