ನಾಮಿನೇಷನ್ ಗೆ ಐಷಾರಾಮಿ ಕಾರ್ ನಲ್ಲಿ ಬಂದಿದ್ದ ಕೆಜಿಎಫ್ ಬಾಬು, ಸೋಲಿನ ನಂತ್ರ ಆಟೋ ಹತ್ತಿದ್ರು!
ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ (MLC Election Results) ಹೊರ ಬೀಳುತ್ತಿದೆ. ಬೆಂಗಳೂರು ನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಯ ಎಚ್.ಎಸ್.ಗೋಪಿನಾಥ್ (HS Gopinath) ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಯೂಸೂಫ್ ಷರೀಫ್ (ಕೆಜಿಎಫ್ ಬಾಬು KGF Babu ಕಣದಲ್ಲಿದ್ದರು.
ಈ ಕ್ಷೇತ್ರದ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಹಾಗಾಗಿ ಬೆಂಗಳೂರು ನಗರ ಕ್ಷೇತ್ರ ತೀವ್ರ ಕುತೂಹಲ‘ಕೆರಳಿಸಿತ್ತು.
2/ 5
ಸಾವಿರಾರು ಕೋಟಿಯ ಒಡೆಯರಾಗಿರುವ ಕೆಜಿಎಫ್ ಬಾಬು ನಾಮಪತ್ರ ಸಲ್ಲಿಸಲು ಬರುವಾಗ ಐಷಾರಾಮಿ ಕಾರಿನಲ್ಲಿ ಆಗಮಿಸಿದ್ದರು. ಇಂದು ಫಲಿತಾಂಶ ಹೊರ ಬೀಳುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಆಟೋ ಹತ್ತಿ ತೆರಳುವ ಮೂಲಕ ಅಚ್ಚರಿ ಮೂಡಿಸಿದರು.
3/ 5
ಗೋಪಿನಾಥ್ ರೆಡ್ಡಿ ಗೆಲುವಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಸಂತಸ ವ್ಯಕ್ತಪಡಿಸಿದ್ದಾರೆ. ದುಡ್ಡಿನ ದುರಹಂಕಾರಕ್ಕೆ ಸಿಕ್ಕಿರುವ ಉತ್ತರ ಇದಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
4/ 5
ಗೋಪಿನಾಥ್ ರೆಡ್ಡಿ ಅವರಿಗೆ 1,227 ಮತಗಳು ಬಂದಿದೆ. ಕೆಜಿಎಫ್ ಬಾಬು 830 ಮತ ಪಡೆದಕೊಂಡಿದ್ರೆ, 13 ಮತಗಳು ತಿರಸ್ಕತಗೊಂಡಿವೆ.
5/ 5
ಸದ್ಯ ಕೊಡಗು, ದಾವಣಗೆರೆಯಲ್ಲಿ ಸೇರಿದಂತೆ ಸುಮಾರು 10ಕ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಅಧಿಕೃತ ಘೋಷಣೆ ಹೊರ ಬೀಳಬೇಕಿದೆ. ಇನ್ನೂ ಹಾಸನದಲ್ಲಿ ಸೂರಜ್ ರೇವಣ್ಣ ಗೆದ್ದಿದ್ದಾರೆ.