Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನಿಂದ ಬೀದರ್ಗೆ ವಿಶೇಷ ರೈಲು ಕಲ್ಪಿಸಲಾಗಿದೆ. ಈ ಕುರಿತು ಇಲ್ಲಿದೆ ಸಂಪೂರ್ಣ ವಿವರ

First published:

  • 18

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯು ಪಾಲ್ಗೊಳ್ಳುವಂತಾಗಲು ಬೆಂಗಳೂರಿನಿಂದ ಬೀದರ್ ಗೆ ವಿಶೇಷ  ರೈಲು ಸೇವೆ ಕಲ್ಪಿಸಲಾಗಿದೆ.

    MORE
    GALLERIES

  • 28

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಜೊತೆಗೆ ಮತದಾನ ಮಾಡಿ ಅದೇ ದಿನ ವಾಪಸ್ ಹೋಗುವುದಿದ್ದರೆ ವಿಶೇಷ ರೈಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗಾಗಿ, ಚುನಾವಣೆಯಲ್ಲಿ ಭಾಗವಹಿಸುವವರು ತಮ್ಮ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಕೂಡಲೇ ಬೀದರ್ ವಿಶೇಷ ರೈಲು ಹತ್ತಬಹುದಾಗಿದೆ.

    MORE
    GALLERIES

  • 38

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಬೆಂಗಳೂರಿನ ಕೆಎಸ್ಆರ್ ಟರ್ಮಿನಲ್ ನಿಂದ ಹೊರಡುವ ವಿಶೇಷ ರೈಲು ಸಂಖ್ಯೆ 06597 ಮೇ 9 ರ ಸಂಜೆ 5 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 7.20ಕ್ಕೆ ಬೀದರ್ ತಲುಪಲಿದೆ.

    MORE
    GALLERIES

  • 48

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಮೇ 10ರ ಚುನಾವಣೆ ದಿನವೇ ವಾಪಸ್ ಬರಲು ವಿಶೇಷ ರೈಲಿನ ವ್ಯವಸ್ಥೆಯಿದ್ದು, ಬೀದರ್ ನಿಂದ ರಾತ್ರಿ 8 ಗಂಟೆಗೆ ಹೊರಡುವ ರೈಲು ಮರುದಿನ ಬೆಳಿಗ್ಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ಗೆ 11 ಗಂಟೆಗೆ ತಲುಪಲಿದೆ.

    MORE
    GALLERIES

  • 58

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಮತದಾನದ ಪ್ರಮಾಣ ಹೆಚ್ಚಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಚುನಾವಣಾ ಆಯೋಗದ ಈ ಪ್ರಯತ್ನಕ್ಕೆ ರೈಲ್ವೆ ಇಲಾಖೆ ಕೈಜೋಡಿಸಿದೆ.

    MORE
    GALLERIES

  • 68

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಇದೇ ಮೊದಲ ಬಾರಿಗೆ ಕರ್ನಾಟಕದಲ್ಲೇ ಆರಂಭಿಸಿದ ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಶೇಕಡಾ 94.77 ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

    MORE
    GALLERIES

  • 78

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಒದಗಿಸಿತ್ತು. ವಯಸ್ಸಾದವರು ಸೇರಿದಂತೆ ಹಲವರಿಗೆ ಈ ಅವಕಾಶ ತಮ್ಮ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಟ್ಟಿತ್ತು.

    MORE
    GALLERIES

  • 88

    Karnataka Election Train: ಚುನಾವಣಾ ರೈಲು, ಬೆಂಗಳೂರಿನಿಂದ ಬೀದರ್​ಗೆ ಪ್ರಯಾಣ ಸುಲಭ

    ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಆದರೆ ಮನೆಯಿಂದಲೇ ಮತದಾನ ಮಾಡಲು ಮೇ 6 ಕೊನೆಯ ದಿನವಾಗಿತ್ತು. ಹೀಗಾಗಿ ಇದೀಗ ಮನೆಯಿಂದ ಮತದಾನ ಮಾಡಿದ ಒಟ್ಟು ಮತದಾರರ ಅಂಕಿ ಅಂಶ ಬಹಿರಂಗವಾಗಿದೆ.

    MORE
    GALLERIES