Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

Karnataka Elections 2023: ಇದೇ ಮೊದಲ ಬಾರಿಗೆ ಕರ್ನಾಟಕದಲ್ಲೇ ಆರಂಭಿಸಿದ ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಶೇಕಡಾ 94.77 ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

First published:

  • 17

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಒದಗಿಸಿತ್ತು. ವಯಸ್ಸಾದವರು ಸೇರಿದಂತೆ ಹಲವರಿಗೆ ಈ ಅವಕಾಶ ತಮ್ಮ ಹಕ್ಕನ್ನು ಚಲಾಯಿಸಲು ಅನುವು ಮಾಡಿಕೊಟ್ಟಿತ್ತು.

    MORE
    GALLERIES

  • 27

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದೆ. ಆದರೆ ಮನೆಯಿಂದಲೇ ಮತದಾನ ಮಾಡಲು ಮೇ 6 ಕೊನೆಯ ದಿನವಾಗಿತ್ತು. ಹೀಗಾಗಿ ಇದೀಗ ಮನೆಯಿಂದ ಮತದಾನ ಮಾಡಿದ ಒಟ್ಟು ಮತದಾರರ ಅಂಕಿ ಅಂಶಧ ಬಹಿರಂಗವಾಗಿದೆ.

    MORE
    GALLERIES

  • 37

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ಹೌದು, ಇಡೀ ರಾಜ್ಯದಲ್ಲಿ ಮನೆಯಿಂದಲೇ ಮತದಾನ ಮಾಡಲು ಒಟ್ಟು 99,529 ಮತದಾರರು ನೋಂದಣಿ ಮಾಡಿಕೊಂಡಿದ್ದರು. ಆದರೆ ಈ ಪೈಕಿ 94,326 ಮತದಾರರು ಮಾತ್ರ ಮತದಾನ ಮಾಡಿದ್ದಾರೆ.

    MORE
    GALLERIES

  • 47

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ಹೀಗಾಗಿ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲೇ ಆರಂಭಿಸಿದ ಮನೆಯಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಶೇಕಡಾ 94.77 ಮತದಾನವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 9198 ಮತದಾರರು ಮನೆಯಿಂದಲೇ ಮತದಾನ ಮಾಡಿದ್ದಾರೆ.

    MORE
    GALLERIES

  • 57

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದ 80 ವರ್ಷಕ್ಕಿಂತ ಹಿರಿಯ ನಾಗರಿಕರ ಸಂಖ್ಯೆ ಒಟ್ಟು 80,250. ಈ ಪೈಕಿ ಮತದಾನ ಮಾಡಿದವರ ಸಂಖ್ಯೆ 75,690.

    MORE
    GALLERIES

  • 67

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ಅದೇ ರೀತಿ ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದ ವಿಶೇಷ ಚೇತನರ ಸಂಖ್ಯೆ 19,279. ಇವರ ಪೈಕಿ ಮತದಾನ ಮಾಡಿದ ಮತದಾರರ ಸಂಖ್ಯೆ 18,636 ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.

    MORE
    GALLERIES

  • 77

    Vote From Home: ಮನೆಯಿಂದ ಮತದಾನ ಮಾಡಿದವರೆಷ್ಟು ಜನ? ಇಲ್ಲಿದೆ ಅಂಕಿ ಅಂಶ

    ಒಟ್ಟಾರೆ 80ಕ್ಕಿಂತ ಹೆಚ್ಚು ವಯಸ್ಸಿನ ಹಿರಿಯರು ಮತ್ತು ವಿಶೇಷ ಚೇತನರು ಮನೆಯಲ್ಲೇ ಮತ ಹಾಕಿ ತಮ್ಮ ಹಕ್ಕು ಚಲಾಯಿಸಲು ಅನುವು ಮಾಡಿಕೊಟ್ಟ ಚುನಾವಣಾ ಆಯೋಗ ಪ್ರಶಂಸೆಗೆ ಪಾತ್ರವಾಗಿದೆ.

    MORE
    GALLERIES