Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

ಕರ್ನಾಟಕದ ನಾಗರಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ ಇನ್ನೊಂದು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸದ್ಯದಲ್ಲೇ ಸೇವೆ ಆರಂಭಿಸಲಿದೆ.

First published:

 • 17

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  ಕರ್ನಾಟಕದ ನಾಗರಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ ಇನ್ನೊಂದು ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸದ್ಯದಲ್ಲೇ ಸೇವೆ ಆರಂಭಿಸಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  ಕರ್ನಾಟಕದಲ್ಲಿ ಶೀಘ್ರದಲ್ಲೇ ಎರಡನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿದೆ. ರೈಲಿನ ಪ್ರಾಯೋಗಿಕ ಸಂಚಾರ ಏಪ್ರಿಲ್ 12 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  ಅಷ್ಟೇ ಅಲ್ಲ, ಮೇ 10 ರಂದು ವಿಧಾನಸಭಾ ಚುನಾವಣೆಯ ನಂತರ ಮೇ ತಿಂಗಳ ಕೊನೆಯಲ್ಲಿಅಥವಾ ಜೂನ್ ಮೊದಲ ವಾರದಲ್ಲಿ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  ಈಗಾಗಲೇ ಬೆಂಗಳೂರು-ಹುಬ್ಬಳ್ಳಿ ಮುಖ್ಯ ಮಾರ್ಗವನ್ನು ವಿದ್ಯುದ್ದೀಕರಿಸಲಾಗಿದೆ. ಇದು ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸೇವೆ ಆಗಿರಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  "ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಏಪ್ರಿಲ್ 30 ರೊಳಗೆ ಪೂರ್ಣಗೊಳಿಸಲಾಗುವುದು. ವಂದೇ ಭಾರತ್ ರೈಲು ಸೇವೆಗಳು ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು" ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 67

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  ಹೈದರಾಬಾದ್​ನ ಬೆಂಗಳೂರು-ಕಾಚೆಗುಡಾ ಮತ್ತು ಬೆಂಗಳೂರು-ಕೊಯಮತ್ತೂರು ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಪರಿಚಯಿಸುವ ಬಗ್ಗೆಯೂ ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Vande Bharat Express Train: ಕರ್ನಾಟಕದ ಈ ಮೂರು ನಗರಗಳ ನಡುವೆ 2ನೇ ವಂದೇ ಭಾರತ್

  ಮೂಲಗಳ ಪ್ರಕಾರ ರೈಲ್ವೆ ಇಲಾಖೆಯು ಆರಂಭದಲ್ಲಿ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ರೈಲನ್ನು ಓಡಿಸಲು ಯೋಜಿಸಿತ್ತು. ಆದರೆ ಧಾರವಾಡ ಸಂಸದ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಡದಿಂದಾಗಿ ಅದನ್ನು ಧಾರವಾಡದವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES