Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

ನೀವು ಸಾಕಿದ ಪ್ರಾಣಿಗಳನ್ನು ರೈಲಲ್ಲಿ ಸಾಗಿಸಲು ಟಿಕೆಟ್ಗಾಗಿ ಇನ್ಮೇಲೆ ಪಾರ್ಸೆಲ್ ಬುಕಿಂಗ್ ಕೌಂಟರ್ಗಳಲ್ಲಿ ಉದ್ದದ ಸರತಿ ಸಾಲುಗಳನ್ನು ನಿಲ್ಲಬೇಕಂತಿಲ್ಲ.

First published:

  • 18

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ರೈಲ್ವೆ ಪ್ರಯಾಣಿಕರೇ ಗಮನಿಸಿ, ನಿಮಗೊಂದು ಸಂತಸದ ಸುದ್ದಿಯೊಂದನ್ನು IRCTC ಹಂಚಿಕೊಂಡಿದೆ. ಇನ್ಮುಂದೆ ನಿಮ್ಮ ಸಾಕುಪ್ರಾಣಿಯ ಜೊತೆಗೆ ರೈಲಲ್ಲಿ ಸುಲಭವಾಗಿ ಪ್ರಯಾಣಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ಸಾಕು ನಾಯಿಗಳು ಮತ್ತು ಬೆಕ್ಕುಗಳಿಗೆ ಆನ್​ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯವನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯ ಇತ್ತೀಚೆಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ಇದುವರೆಗೆ ಸಾಕುಪ್ರಾಣಿಗಳಿಗೆ ಮುಂಗಡವಾಗಿ ರೈಲು ಟಿಕೆಟ್ ಬುಕ್ ಮಾಡುವ ಅವಕಾಶ ಇರಲಿಲ್ಲ. ರೈಲು ಹೊರಡುವ ಒಂದು ಗಂಟೆ ಮುಂಚಿತವಾಗಿ ರೈಲು ನಿಲ್ದಾಣದ ಕೌಂಟರ್​ಗಳಲ್ಲಿ ಸಾಕುಪ್ರಾಣಿಗಳಿಗಾಗಿ ಬುಕ್ಕಿಂಗ್ ಮಾಡಲಾಗುತ್ತಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ನೀವು ಸಾಕಿದ ಪ್ರಾಣಿಗಳನ್ನು ರೈಲಲ್ಲಿ ಸಾಗಿಸಲು ಟಿಕೆಟ್​ಗಾಗಿ ಇನ್ಮೇಲೆ ಪಾರ್ಸೆಲ್ ಬುಕಿಂಗ್ ಕೌಂಟರ್ಗಳಲ್ಲಿ ಉದ್ದದ ಸರತಿ ಸಾಲುಗಳನ್ನು ನಿಲ್ಲಬೇಕಂತಿಲ್ಲ. ನಿಮ್ಮ ಮನೆಯಿಂದಲೇ ಸಾಕುಪ್ರಾಣಿಗಳಿಗೆ ಟಿಕೆಟ್​ಗಳನ್ನು ಬುಕ್ ಮಾಡಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ಈ ಮೊದಲು ಸಾಕುಪ್ರಾಣಿಗಳ ಮಾಲೀಕರು ಫಸ್ಟ್ ಕ್ಲಾಸ್ ಎಸಿ ಟಿಕೆಟ್​, ಕ್ಯಾಬಿನ್​ಗಳನ್ನು ಬುಕ್ ಮಾಡಬೇಕಾಗಿತ್ತು. ಮುಂಗಡವಾಗಿ ಟಿಕೆಟ್ ಬುಕ್ ಮಾಡುವ ಸೌಲಭ್ಯ ಇರಲಿಲ್ಲ. ಆದರೆ ಇನ್ಮೇಲೆ ಹೊಸ ಸೌಲಭ್ಯ ಪರಿಚಯಿಸಲು ರೈಲ್ವೆ ಇಲಾಖೆ ಮುಂದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ರೈಲು ಪ್ರಯಾಣಿಕರು ತಮ್ಮ ಪ್ರಯಾಣದ ದಿನದಂದು ಪ್ಲಾಟ್​ಫಾರ್ಮ್​ನಲ್ಲಿರುವ ಪಾರ್ಸೆಲ್ ಬುಕಿಂಗ್ ಕೌಂಟರ್​ಗಳಿಗೆ ಭೇಟಿ ನೀಡಿ ಟಿಕೆಟ್​ಗಳನ್ನು ಖರೀದಿ ಮಾಡಬೇಕಿತ್ತು. ಇದು ಪ್ರಯಾಣಿಕರಿಗೆ ರಗಳೆ ಉಂಟುಮಾಡುತ್ತಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ಆದರೆ ಸಾಕುಪ್ರಾಣಿಗಳನ್ನು ಸಾಗಿಸಲು ಸಮಸ್ಯೆ ಅನುಭವಿಸುತ್ತಿದ್ದ ಪ್ರಯಾಣಿಕರಿಗೆ ಎಂದೇ ರೈಲ್ವೆ ಸಚಿವಾಲಯವು ಆನ್​ಲೈನ್ ಟಿಕೆಟ್ ಬುಕಿಂಗ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Indian Railways: ರೈಲುಗಳಲ್ಲಿ ಇನ್ಮೇಲೆ ನಾಯಿ, ಬೆಕ್ಕುಗಳ ಜೊತೆ ಪ್ರಯಾಣ ಸುಲಭ!

    ಸಾಕುಪ್ರಾಣಿಗಳ ಮಾಲೀಕರ ಬಳಿ ಇತರ ಪ್ರಯಾಣಿಕರಿಗೆ ಅನಾನೂಕೂಲ ಉಂಟಾಗದಂತೆ ತಡೆಯುವ ಕುರಿತು ಸಹಿ ಹಾಕಿಸಿಕೊಂಡು ಈ ಹೊಸ ವ್ಯವಸ್ಥೆ ಕಲ್ಪಿಸಲು ರೈಲು ಇಲಾಖೆ ಮುಂದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES