ಕೋಲಾರದಿಂದ ಬೆಂಗಳೂರು ಅಥವಾ ಬೆಂಗಳೂರಿನಿಂದ ಕೋಲಾರಕ್ಕೆ ಪ್ರಯಾಣಿಸಲು ನೀವು ರೈಲನ್ನು ಅವಲಂಬಿಸಿದ್ದೀರಾ? ಹಾಗಿದ್ರೆ ನಿಮಗೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ನೈಋತ್ಯ ರೈಲ್ವೆ ಕೋಲಾರ ಮತ್ತು ಬೆಂಗಳೂರು ನಡುವೆ ಸೇವೆ ಒದಗಿಸುತ್ತಿದ್ದ ಡೆಮು ರೈಲುಗಳ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸಿದೆ. (ಸಾಂದರ್ಭಿಕ ಚಿತ್ರ)
3/ 7
ಫೆಬ್ರವರಿ 4ರವರೆಗೆ ಕೋಲಾರ- ಬೆಂಗಳೂರು ಕಂಟೋನ್ಮೆಂಟ್ ನಡುವೆ ಸಂಚರಿಸುತ್ತಿದ್ದ ಡೆಮು ರೈಲು ಸೇವೆಯನ್ನು ಬೈಯಪ್ಪನಹಳ್ಳಿ- ಬೆಂಗಳೂರು ಕಂಟೋನ್ಮೆಂಟ್ ಮಧ್ಯೆ ರದ್ದು ಮಾಡಲಾಗಿದೆ. ಆದರೆ ಈ ಅವಧಿಯಲ್ಲಿ ಬೈಯಪ್ಪನಹಳ್ಳಿನಿಂದ ರೈಲು ಸಂಚರಿಸಲಿದೆ. ಈ ರೈಲುಗಳ ಸಂಖ್ಯೆ 06382 ಮತ್ತು 06388 ಆಗಿದೆ. (ಸಾಂದರ್ಭಿಕ ಚಿತ್ರ)
4/ 7
ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕಾಮಗಾರಿಯ ಕಾರಣದಿಂದ ಕೋಲಾರ-ಬೆಂಗಳೂರು ನಡುವೆ ಸೇವೆ ಒದಗಿಸುತ್ತಿದ್ದ ಡೆಮು ರೈಲನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
5/ 7
ಜೊತೆಗೆ ಕುಪ್ಪಂ ಮತ್ತು ಕೆಆಆರ್ಎಸ್ ಬೆಂಗಳೂರು ನಡುವಿನ ಮೆಮು ರೈಲನ್ನು ಸಹ ನೈಋತ್ಯ ರೈಲ್ವೆ ರದ್ದುಗೊಳಿಸಿದೆ. (ಸಾಂದರ್ಭಿಕ ಚಿತ್ರ)
6/ 7
ಅಷ್ಟೇ ಅಲ್ಲ, ಬೆಂಗಳೂರಿಗೆ ಸೇವೆ ನೀಡುತ್ತಿದ್ದ ಇನ್ನೊಂದು ರೈಲು ಸೇವೆಯನ್ನು ಸಹ ಭಾಗಶಃ ರದ್ದುಗೊಳಿಸಲಾಗಿದೆ. ಕುಪ್ಪಂ-ಕೆಎಸ್ಆರ್ ಬೆಂಗಳೂರು ನಡುವಿನ ರೈಲು ಸೇವೆಯನ್ನು ಜನವರಿ 25ರವರೆಗೆ ರದ್ದುಗೊಳಿಸಲಾಗಿದೆ. ಈ ಸಮಯದಲ್ಲಿ ಬಂಗಾರಪೇಟೆಯಿಂದ ರೈಲುಗಳು ಸಂಚರಿಸಲಿವೆ. (ಸಾಂದರ್ಭಿಕ ಚಿತ್ರ)
7/ 7
ಹೀಗಾಗಿ ಈ ರೈಲುಗಳ ಪ್ರಯಾಣಿಕರು ತಮ್ಮ ಓಡಾಟಕ್ಕಾಗಿ ಇತರ ಸೌಲಭ್ಯಗಳನ್ನು ಮಾಡಿಕೊಳ್ಳುವಂತೆ ಭಾರತೀಯ ರೈಲ್ವೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)