ತನ್ನ ಹೊಸ ಮಳಿಗೆಯಿಂದಲೇ ಭಾರೀ ಪ್ರಚಾರ ಗಿಟ್ಟಿಸಿದ್ದ IKEA ಬೆಂಗಳೂರು ಗಣರಾಜ್ಯೋತ್ಸವದ ನಿಮಿತ್ತ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಿ ಗೆದ್ದರೆ ಸಾವಿರಾರು ರೂಪಾಯಿಯ ಬಹುಮಾನ ಪಡೆಯೋ ಅವಕಾಶವನ್ನು IKEA ಬೆಂಗಳೂರು ಘಟಕ ಕಲ್ಪಿಸಿದೆ. (ಸಾಂದರ್ಭಿಕ ಚಿತ್ರ)
2/ 8
ಗಣರಾಜ್ಯೋತ್ಸವದ ನಿಮಿತ್ತ IKEA ಬೆಂಗಳೂರು ಈ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. (ಸಾಂದರ್ಭಿಕ ಚಿತ್ರ)
3/ 8
ನೀವು ಬೆಂಗಳೂರಿನ IKEA ಮಳಿಗೆಗೆ ಭೇಟಿ ನೀಡಿ ಅಲ್ಲಿ ನಿರ್ಮಿಸಲಾದ ಫೊಟೋ ಬೂತ್ನಲ್ಲಿ ಫೊಟೋವೊಂದನ್ನು ಕ್ಲಿಕ್ಕಿಸಬೇಕು. ಸೆಲ್ಫಿ ಆದರೂ ಓಕೆ. ಆ ಫೊಟೋವನ್ನು ಇನ್ಸ್ಟಾಗ್ರಾಮ್ನಲ್ಲಿ #ikeanagasandra ಹ್ಯಾಷ್ ಟ್ಯಾಗ್ನಡಿ ಪೋಸ್ಟ್ ಮಾಡಬೇಕು. (ಸಾಂದರ್ಭಿಕ ಚಿತ್ರ)
4/ 8
ನೆನಪಿಡಿ, Instagram ಸ್ಟೋರಿ ಹಾಕಿದರೆ ಈ ಸ್ಪರ್ಧೆಯಲ್ಲಿ ಭಾಗವಹಿಸೋಕಾಗಲ್ಲ. Instagram ನಲ್ಲಿ IKEA ಬೆಂಗಳೂರಿನಲ್ಲಿ ತೆಗೆದ ಫೊಟೋವನ್ನು ಹ್ಯಾಷ್ ಟ್ಯಾಗ್ನಡಿ ಸಾಮಾನ್ಯ ಪೋಸ್ಟ್ ಮಾಡಬೇಕು. @ikea.india ನ್ನು ಟ್ಯಾಗ್ ಮಾಡಿಯೇ ಫೊಟೋ ಪೋಸ್ಟ್ ಮಾಡಬೇಕು. (ಸಾಂದರ್ಭಿಕ ಚಿತ್ರ)
5/ 8
ಅತಿ ಹೆಚ್ಚು ಲೈಕ್ಸ್ ಪಡೆದ 20 ಪೋಸ್ಟ್ಗಳಿಗೆ IKEA ಬಹುಮಾನ ಘೋಷಿಸಿದೆ. IKEA ಗಣರಾಜ್ಯೋತ್ಸವ ವಿಶೇಷದ ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬರೋಬ್ಬರಿ 25 ಸಾವಿರ! 2ನೇ ಬಹುಮಾನ 10 ಸಾವಿರ ದೊರೆಯಲಿದೆ. (ಸಾಂದರ್ಭಿಕ ಚಿತ್ರ)
6/ 8
ಅಲ್ಲದೇ, 18 ಲಕ್ಕಿ ವಿನ್ನರ್ಗಳಿಗೆ 25 ಸಾವಿರದವರೆಗೆ ಗಿಫ್ಟ್ ವೋಚರ್ ಸಹ ದೊರೆಯಲಿದೆ. (ಸಾಂದರ್ಭಿಕ ಚಿತ್ರ)
7/ 8
ಈ ಸ್ಪರ್ಧೆ ಈಗಾಗಲೇ ಶುರುವಾಗಿದೆ. ಜನವರಿ 19 ರಿಂದಲೇ ಶುರುವಾಗಿರುವ ಈ ಸ್ಪರ್ಧೆ ಜನವರಿ 26 ರವರೆಗೂ ಇರಲಿದೆ. ಗಣರಾಜ್ಯೋತ್ಸವದ ದಿನದ ಒಳಗೆ ನೀವೂ IKEA ಮಳಿಗೆಗೆ ಭೇಟಿ ನೀಡಿ ಫೊಟೋ ಕ್ಲಿಕ್ಕಿಸಿ ಭರ್ಜರಿ ಬಹುಮಾನ ಗೆಲ್ಲಬಹುದಾಗಿದೆ. (ಸಾಂದರ್ಭಿಕ ಚಿತ್ರ)