ಬೆಂಗಳೂರಿನ ಅತ್ಯಂತ ಪ್ರಸಿದ್ಧ ಗಣರಾಜ್ಯೋತ್ಸವ ವಿಶೇಷದ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ.
2/ 10
ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿ ದಿನವೂ ತೋಟಗಾರಿಕೆ ಇಲಾಖೆಗೆ ಲಕ್ಷ ಲಕ್ಷ ಆದಾಯ ಹರಿದುಬರುತ್ತಿದೆ.
3/ 10
ಸದ್ಯ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಸಾಮಾನ್ಯ ದಿನದಲ್ಲಿ 70 ರೂ. ವಾರಾಂತ್ಯದಲ್ಲಿ 75 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಒದಗಿಸಲಾಗಿದೆ.
4/ 10
ಅಂಕಿ ಅಂಶಗಳನ್ನು ನೋಡುವುದಾದರೆ ಲಾಲ್ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕಾ ಇಲಾಖೆಗೆ ದಿನಕ್ಕೆ 24 ಲಕ್ಷದ 93 ಸಾವಿರದ 725 ರೂ. ಗಳಿಕೆಯಾಗಿದೆ.
5/ 10
ಬೆಂಗಳೂರಿನ ಲಾಲ್ಬಾಗ್ನಲ್ಲಿ ಮತ್ತೆ ಪುಷ್ಪಲೋಕವೇ ಅರಳಿದೆ. ವಿಶ್ವಪ್ರಸಿದ್ಧ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ ಮತ್ತೆ ಸೌಂದರ್ಯವನ್ನೇ ಹೊದ್ದು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
6/ 10
ಗಣರಾಜ್ಯೋತ್ಸವದ ನಿಮಿತ್ತ ಜನವರಿ 19ರಿಂದ ಶುರುವಾಗಿರುವ ಈ ಫಲಪುಷ್ಪ ಪ್ರದರ್ಶನ ಜನವರಿ 29ರವರೆಗೂ ನಡೆಯಲಿದೆ.
7/ 10
ಈ ಫಲಪುಷ್ಪ ಪ್ರದರ್ಶನದಲ್ಲಿ ಲಾಲ್ಬಾಗ್ ಗಾಜಿನ ಉದ್ಯಾನವನ ಹೂವುಗಳಿಂದ ಅಲಂಕಾರವಾಗಿರೋದನ್ನು ನೋಡೋದೇ ಕಣ್ಣಿಗೆ ಹಬ್ಬದಂತಿದೆ.
8/ 10
ಡಾರ್ಜಿಲಿಂಗ್, ಕೇರಳ, ತಮಿಳುನಾಡು ಮುಂತಾದ ರಾಜ್ಯಗಳಿಂದಲೂ ಲಾಲ್ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಹೂಗಳನ್ನು ತರಿಸಲಾಗಿದೆ.
9/ 10
ಬೆಂಗಳೂರಿನ ಇತಿಹಾಸವನ್ನೇ ಥೀಮ್ ಆಗಿಟ್ಟುಕೊಂಡು ಹೂಗಳಿಂದ ಸುಂದರ ಆಕೃತಿಗಳನ್ನು ರಚಿಸಿರುವುದು ಕಣ್ಣಿಗೆ ಮುದ ನೀಡುತ್ತಿದೆ.
10/ 10
ಫಲಪುಷ್ಪ ಪ್ರದರ್ಶನಕ್ಕೆ ಸಂಬಂಧಿಸಿದ ವಿಷಯಗಳನ್ನೇ ಆಧರಿಸಿ ವಿವಿಧ ಪ್ರತಿಕೃತಿಗಳನ್ನು ತಯಾರಿಸೋದು ಇಲ್ಲಿ ಇನ್ನೊಂದು ಹೆಗ್ಗಳಿಕೆ.