Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

Rain Update: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸಂಜೆ ಭಾರೀ ಮಳೆ ಸುರಿಯುತ್ತಿದ್ದು, ಇಂದು ಸಹ ವಿವಿಧ ಜಿಲ್ಲೆಗಳಲ್ಲಿ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಯಾವ್ಯಾವ ಜಿಲ್ಲೆಗಳಲ್ಲಿ, ಯಾವ ಸಮಯದಲ್ಲಿ ಮಳೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಸಂಜೆಯಾದರೆ ಸಾಕು ಮೋಡ ಕವಿದು ಧೋ ಎಂದು ಸುರಿಯುವ ಈ ಮಳೆಗೆ ಜನ ಹೈರಾಣಾಗಿದ್ದಾರೆ. ಅದರಲ್ಲೂ ಬೆಂಗಳೂರಿನ ಜನತೆಗೆ ಮಂಗಾರು ಆರಂಭಕ್ಕೂ ಮುನ್ನವೇ ಸಾಕು ಬೇಕಾಗಿದೆ.

    MORE
    GALLERIES

  • 27

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಲ್ಲಿ ಅನಾಹುತಗಳಾಗಿದ್ದು, ಕೆಲವರು ಈ ಮಳೆಯಿಂದಾಗಿ ಜೀವ ಸಹ ಕಳೆದುಕೊಂಡಿದ್ದಾರೆ.

    MORE
    GALLERIES

  • 37

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಇನ್ನು ಇಂದು ಸಹ ರಾಜ್ಯದಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಲಿದೆ ಎಂದು ತಿಳಿಸಿದೆ.

    MORE
    GALLERIES

  • 47

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಬೆಂಗಳೂರಿನ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದ್ದು, ಜನರಿಗೆ ಮುನ್ನೆಚ್ಚರಿಕೆ ವಹಿಸಲು ಸಹ ಇಲಾಖೆ ಸಲಹೆ ನೀಡಿದೆ. ಬೆಂಗಳೂರು ನಗರದಲ್ಲಿ ಸಹ ಈಗಾಗಲೇ ಕೆಲ ಪ್ರದೇಶಗಳಲ್ಲಿ ಮಳೆ ಶುರುವಾಗಿದ್ದು, ಮತ್ತೆ ಟ್ರಾಫಿಕ್ ಸಮಸ್ಯೆ ಆರಂಭವಾಗುತ್ತದೆ.

    MORE
    GALLERIES

  • 57

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಇನ್ನು ರಾಜ್ಯದ ಗದಗ, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    MORE
    GALLERIES

  • 67

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಈ ಮಳೆಯ ಕಾರಣದಿಂದ ವಿದ್ಯುತ್ ವ್ಯತ್ಯಯ ಸಹ ಕೆಲಕಾಲ ಆಗಲಿದ್ದು, ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಸಹ ಆಗಲಿದೆ ಎಂದು ಮುನ್ಸೂಚನೆ ನೀಡಿದೆ. ಅಲ್ಲದೇ, ಈ ಸಮಯದಲ್ಲಿ ಮನೆಯ ಒಳಗೆ ಇರಲಿ ಸೂಚನೆ ನೀಡಿರುವ ಇಲಾಖೆ ಬಾಗಿಲು ಹಾಗೂ ಕಿಟಕಿಗಳನ್ನು ಭದ್ರವಾಗಿ ಹಾಕಿಕೊಳ್ಳುವಂತೆ ತಿಳಿಸಿದೆ.

    MORE
    GALLERIES

  • 77

    Rain Update: ರಾಜ್ಯದಲ್ಲಿ ಮುಂದಿನ 3 ಗಂಟೆ ಮಳೆಯ ಆರ್ಭಟ

    ಇಷ್ಟೇ ಅಲ್ಲದೇ, ಸಾಧ್ಯವಾದಷ್ಟಯ ಯಾವುದೇ ರೀತಿಯ ಪ್ರಯಾಣ ಮಾಡದಂತೆ ತಿಳಿಸಿದ್ದು, ವಿದ್ಯುತ್ ಉಪಕರಣಗಳಿಂದ ದೂರ ಇರಲು ಸಲಹೆ ನೀಡಿದೆ.

    MORE
    GALLERIES