Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

ಬೆಂಗಳೂರು: ಪೊಲೀಸರು ಅಂತೇಳಿ ಮನೆಯನ್ನು ದೋಚಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ನ ಭೋವಿಪಾಳ್ಯದಲ್ಲಿ ನಡೆದಿದ್ದು, ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

First published:

  • 16

    Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

    ಡಿಸೆಂಬರ್ 31 ರಂದು ಮಹಾಲಕ್ಷ್ಮಿ ಲೇಔಟ್ ನ ಭೋವಿಪಾಳ್ಯದಲ್ಲಿರುವ ಸಮಯನಾಯ್ಕ್ ಎಂಬುವವರ ಮನೆಗೆ ಪೊಲೀಸರ ಸೋಗಿನಲ್ಲಿ ನುಗ್ಗಿದ್ದ ಗ್ಯಾಂಗ್, ನಾವು ತಿಪಟೂರು ಪೊಲೀಸರು ಅಂತ ಹೇಳಿಕೊಂಡಿದ್ದರು. ಮನೆ ಸರ್ಚ್ ಮಾಡಬೇಕು ಎಂದಿದ್ದಾರೆ. ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ಮನೆಯವರಿಗೆ ವಾರ್ನ್ ಮಾಡಿದ್ದಾರೆ.

    MORE
    GALLERIES

  • 26

    Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

    ಕಳ್ಳ ಎಂದು ಓರ್ವನನ್ನು ಕರೆದುಕೊಂಡು ಬಂದಿದ್ದ ಆರೋಪಿಗಳು, ಈ ವೇಳೆ ಕಳ್ಳತನ ಮಾಡಿದ್ದ ಹಣ ಮತ್ತು ಬಂಗಾರವನ್ನು ಇದೇ ಮನೆಗೆ ಕೊಟ್ಟಿದ್ದಾಗಿ ಕಳ್ಳ ಹೇಳಿದ್ದ. ನಕಲಿ ಕಳ್ಳ, ನಕಲಿ ಪೊಲೀಸರೆಲ್ಲಾ ಸೇರಿಕೊಂಡು ಮನೆಯವರ ಎದುರು ಭರ್ಜರಿ ನಾಟಕ ಆಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 36

    Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

    ಮನೆಯವರ ಬಳಿಯಿದ್ದ ಫೋನ್ ಗಳನ್ನ ಕಿತ್ತುಕೊಂಡು 2 ಗಂಟೆಗಳ ಕಾಲ ಮನೆಯಲ್ಲಿ ಹುಡುಕಾಟ ನಡೆದಿದ್ದಾರೆ. ಮನೆಯಲ್ಲಿದ್ದ 19 ಲಕ್ಷ ನಗದು ಹಣ, 500 ಗ್ರಾಂ ಚಿನ್ನಾಭರಣವನ್ನು ಪೊಲೀಸರಂತೆ ಜಪ್ತಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 46

    Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

    ನಂತರ ಸಮಯನಾಯ್ಕ್ ರ ಪುತ್ರ ಮಂಜುನಾಥ್ ನನ್ನ ಠಾಣೆಗೆ ಕರೆದೊಯ್ಯೋದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡಿದ್ರು. ಮಹಾಲಕ್ಷ್ಮಿ ಲೇಔಟ್, BEL ಸರ್ಕಲ್, ಎಂ.ಎಸ್.ಪಾಳ್ಯ ಸುತ್ತಾಡಿಸಿದ್ರು. ಈ ವೇಳೆ 20 ಲಕ್ಷ ಹಣ ಕೊಟ್ರೆ ಜಫ್ತಿ ಮಾಡಿದ ಕ್ಯಾಶ್ ಒಡವೆ ಕೊಟ್ಟು ಬಿಟ್ಟು ಬಿಡುತ್ತೇವೆ ಕೇಸ್ ಹಾಕಲ್ಲ ಅಂತ ಬೇರೆ ಆಫರ್ ಕೊಟ್ಟಿದ್ದಾರೆ.

    MORE
    GALLERIES

  • 56

    Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

    ಹಣ ಕೊಡಲು ನಿರಾಕರಿಸಿದ್ದಕ್ಕೆ ಜಪ್ತಿ ನೆಪದಲ್ಲಿ ರಾಬರಿ ಮಾಡಿದ್ದ 500 ಗ್ರಾಂ ಚಿನ್ನಾಭರಣ, 19 ಲಕ್ಷ ನಗದು ಕೊಂಡೊಯ್ದಿದ್ರು. ಕರೆದಾಗ ಠಾಣೆಗೆ ಬರಬೇಕು, ಜಫ್ತಿ ಮಾಡಿದ ಹಣ-ಒಡವೆ ಸ್ಟೇಷನ್ ಗೆ ಬಂದು ಬಿಡಿಸಿಕೊಳ್ಳಿ ಎಂದಿದ್ರು.

    MORE
    GALLERIES

  • 66

    Crime News: ಬೆಂಗಳೂರಿಗರೇ ಎಚ್ಚರ.. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದೋಚುತ್ತಿದ್ದಾರೆ ಖದೀಮರು!

    ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರೋದು ಬೆಳಕಿಗೆ ಬಂದಿದೆ. ಕೃತ್ಯದಲ್ಲಿ ಭಾಗಿ ಅಗಿದ್ದ ಇಬ್ಬರು ರೌಡಿ ಶೀಟರ್ ಸೇರಿ ಒಟ್ಟು ಐವರು ಅರೋಪಿಗಳನ್ನು ಈಗ ಅರೆಸ್ಟ್ ಮಾಡಲಾಗಿದೆ.

    MORE
    GALLERIES