Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ವ್ಯಕ್ತಿಯೊಬ್ಬರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ತನ್ನ ಕಣ್ಣಿಗೆ ಖಾರದಪುಡಿ ಎರಚಿ 4 ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಪೊಲೀಸರು ದೂರು ನೀಡಿದ ವ್ಯಕ್ತಿಯನ್ನೇ ಬಂಧಿಸಿದ್ದಾರೆ.

First published:

  • 15

    Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

    ಫೋಟೋದಲ್ಲಿ ಕಾಣುತ್ತಿರುವ ಈತನ ಹೆಸರು ಅರುಣ್. ಪೊಲೀಸ್ ಠಾಣೆಗೆ ದೂರು ನೀಡಿ, ಕೆಲವೇ ಹೊತ್ತಿನಲ್ಲಿ ಅದೇ ಪೊಲೀಸರಿಂದ ಬಂಧನಕ್ಕೊಳಗಾದ ಭೂಪ. ಅಂತದ್ದು ಏನು ಮಾಡಿದ ಅಂತಿರಾ..?

    MORE
    GALLERIES

  • 25

    Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

    ಇಲ್ಲಿ ಹೀಗೆ.. ಕಣ್ಣಿಗೆ ಖಾರದಪುಡಿ ಎರಚಿದ್ದಾರೆ.. ಅಯ್ಯೋ ಉರಿ.. ನಾನು ಎಲ್ಲಿದ್ದೇನೆ.. ನನ್ನ ಬಳಿ ಇದ್ದ 4 ಲಕ್ಷ ರೂಪಾಯಿಯನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ ಸಾರ್ ಎಂದು ಕಣ್ಣಿಗೆ ನೀರು ಹಾಕಿಕೊಂಡು ಕ್ಯಾಮಾರಾ ಮುಂದು ಫುಲ್ ಪರ್ಫಾಮೆನ್ಸ್ ಕೊಟ್ಟಿದ್ದಾನೆ..

    MORE
    GALLERIES

  • 35

    Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

    ಇದೇ ನಾಟಕವನ್ನು ಮುಂದುವರೆಸಿಕೊಂಡು ಬ್ಯಾಟರಾಯನಪುರ ಠಾಣೆಗೂ ಬಂದಿದ್ದಾನೆ. ಈತನ ಎಲ್ಲಾ ಸ್ಕ್ರಿಪ್ಟ್ , ಆ್ಯಕ್ಟಿಂಗ್ ನೋಡಿದ ಪೊಲೀಸರು ಸೀದಾ ಬಂದು ಕೈಗೆ ಕೋಳ ಹಾಕಿದ್ದಾರೆ. ಅಲ್ಲಿಗೆ ಅರುಣನ ಖೇಲ್ ಖತಮ್, ನಾಟಕ್ ಬಂದ್ ಆಗಿದೆ.

    MORE
    GALLERIES

  • 45

    Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

    ಮಾಲೀಕ ಅಟ್ಟಿಕಾ ಬಾಬು ಎಂಬುವನ ಬಳಿ ಕೆಲಸ ಮಾಡುತ್ತಿದ್ದ ಅರುಣ್, ಅವರ ಬಳಿ 1 ಲಕ್ಷ ಹಣ ಕೇಳಿದ್ದ. ಕೊಡದಿದ್ದಾಗ ಸಂಸ್ಥೆಯ ಹಣ 8 ಲಕ್ಷದಲ್ಲಿ 4 ಲಕ್ಷವನ್ನು ಮನೆಯಲ್ಲಿ ಇಟ್ಟುಕೊಂಡು, ಉಳಿದ 4 ಲಕ್ಷವನ್ನು ಬ್ರಾಂಚ್ಗೆ ಕೊಟ್ಟಿದ್ದಾನೆ. ತನ್ನ ಬಳಿಯೇ 4 ಲಕ್ಷ ಇಟ್ಟುಕೊಂಡು ದರೋಡೆಕೋರರು ದೋಚಿದ್ದಾರೆ ಎಂದು ಸುಳ್ಳು ಕಥೆ ಎಣೆದಿದ್ದಾನೆ.

    MORE
    GALLERIES

  • 55

    Bengaluru Crime: ಖಾರದಪುಡಿ ಎರಚಿ ₹4 ಲಕ್ಷ ದೋಚಿದ್ರು ಅಂತ ದೂರು ಕೊಟ್ಟವನೇ ಅರೆಸ್ಟ್..!

    ಅರುಣನ ಓವರ್ ಆ್ಯಕ್ಟಿಂಗ್ ಕಂಡು ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ತನ್ನದು ಕಟ್ಟುಕಥೆ, ಹಣ ಮನೆಯಲ್ಲೇ ಇದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

    MORE
    GALLERIES