ನಾಯಿ ಮೂತ್ರ ಮಾಡಿದ್ದಕ್ಕೆ ಜಗಳ ನಡೆದಿತ್ತು. ಈ ಹಿಂದೆಯೂ ಹಲವು ಬಾರಿ ನಮ್ಮ ಜೊತೆ ಚಾರ್ಲ್ಸ್ ಜಗಳ ಮಾಡಿದ್ದಾರೆ. ಗಲಾಟೆ ನಡೆದ ದಿನ ಮನೆಯಲ್ಲಿ ಅತ್ತೆ ಮತ್ತು ಮಾವ ಇಬ್ಬರೇ ಇದ್ರು. ಆದ್ರೆ ಭಾನುವಾರ ಕಲ್ಲಿನಿಂದ ಹಲ್ಲೆ ಮಾಡಿದ್ದಕ್ಕೆ ದೂರು ದಾಖಲಿಸಿದ್ದೇವೆ. ನಮ್ಮ ಮನೆ ಮೇಲೆ ಬಾಡಿಗೆಗೆ ಇರುವ ಅರುಣ್ ಎಂಬವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಗೇರಿ ಅವರ ಸೊಸೆ ಮಾರಿಯಾ ಹೇಳಿದ್ದಾರೆ.