ಬೆಂಗಳೂರಿನ ನಾಗರಿಕರೇ, ನಿಮಗೊಂದು ಸುವರ್ಣಾವಕಾಶವೊಂದು ಇಲ್ಲಿದೆ ನೋಡಿ. ನೀವು ಬೆಂಗಳೂರಿನಿಂದಲೇ ಅತ್ಯಂತ ಅದ್ಭುತವಾದ ಉಲ್ಕಾಪಾತವನ್ನು ವೀಕ್ಷಿಸಬಹುದು! (ಸಾಂದರ್ಭಿಕ ಚಿತ್ರ) ಹೌದು, ಭೂಮಿಯ ಮೇಲೆ ಗೋಚರಿಸುವ ಪ್ರಕಾಶಮಾನವಾದ ಉಲ್ಕಾಪಾತಕ್ಕೆ ಸಾಕ್ಷಿಯಾಗಬಹುದಾದ ಅವಕಾಶವೊಂದರ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ) ಡಿಸೆಂಬರ್ 13 ರ ರಾತ್ರಿಯಿಂದ ಡಿಸೆಂಬರ್ 14 ರ ಮುಂಜಾನೆಯವರೆಗೆ ಉಲ್ಕಾಪಾತ ಸಂಭವಿಸಲಿದೆ. (ಸಾಂದರ್ಭಿಕ ಚಿತ್ರ) ಡಿಸೆಂಬರ್ 13ರ ಮಧ್ಯರಾತ್ರಿ 2 ಗಂಟೆಯಿಂದ 3 ಗಂಟೆಯವರೆಗೆ ಉಲ್ಕಾಪಾತವು ಅತ್ಯಂತ ಹೆಚ್ಚಾಗಿ ಆಗುವ ಸಾಧ್ಯತೆಯಿದೆ. (ಸಾಂದರ್ಭಿಕ ಚಿತ್ರ) ಈ ಅವಧಿಯಲ್ಲಿ ನೂರಕ್ಕೂ ಹೆಚ್ಚು ಉಲ್ಕೆಗಳು ಭೂಮಿಯತ್ತ ಅಪ್ಪಳಿಸುವ ಸಾದ್ಯತೆಯಿದೆ. (ಸಾಂದರ್ಭಿಕ ಚಿತ್ರ) ಕೇವಲ ಬರಿಗಣ್ಣಿನಿಂದಲೇ ನೀವು ಈ ಉಲ್ಕಾಪಾತವನ್ನು ವೀಕ್ಷಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ) ಭೂಮಿಯು ಧೂಳು ಅಥವಾ ಉಲ್ಕಾಶಿಲೆಗಳ ಮೂಲಕ ಹಾದುಹೋದಾದ ಆಕಾಶದಲ್ಲಿ ಈ ಉಲ್ಕಾಪಾತವು ಸಂಭವಿಸುತ್ತದೆ. (ಸಾಂದರ್ಭಿಕ ಚಿತ್ರ) ಜವಾಹರಲಾಲ್ ನೆಹರು ತಾರಾಲಯವು ಡಿಸೆಂಬರ್ 13 ರಂದು ಉಲ್ಕಾಪಾತ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿದೆ. (ಸಾಂದರ್ಭಿಕ ಚಿತ್ರ)