ಅಹೋರಾತ್ರಿಯಲ್ಲಿ ಭಾಗಿಯಾಗುವ ಮುನ್ನ ಬಿ ಕೆ ಹರಿಪ್ರಸಾದ್ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಎಂಬ ಮತಾಂದ ರಾಷ್ಟ್ರ ಧ್ವಜದ ಬಗ್ಗೆ ಕೆಟ್ಟದಾಗಿ ಮಾತಾಡ್ತಾನೆ. ತ್ರಿವರ್ಣ ಧ್ವಜವನ್ನು ನೋಡಿದ್ರೆ ನಮಗೆ ಸ್ಪೂರ್ತಿ ಬರುತ್ತೆ. ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾಗಿಲ್ಲ. ಬಿಜೆಪಿಯವರು ಮಹಾತ್ಮರನ್ನು ಕೊಂದ ಗೂಡ್ಸೆ ಸಂತತಿಯಿಂದ ಬಂದವರು ಎಂದು ವಾಗ್ದಾಳಿ ನಡೆಸಿದರು.