ರಾಜಧಾನಿ ಬೆಂಗಳೂರು (Bengaluru) ಮತ್ತೊಮ್ಮೆ ಕೊರೊನಾ (Corona Virus) ಬಾಹುಗಳಲ್ಲಿ ಬಂಧಿಯಾಗೋ ಲಕ್ಷಣಗಳು ಕಾಣಿಸುತ್ತಿವೆ. ಒಂದೇ ದಿನಕ್ಕೆ ಹೆಚ್ಚಾಯ್ತು 39 ಕಂಟೈನ್ಮೆಂಟ್ ಝೋನ್ (Containment Zone) ಸಂಖ್ಯೆ ಹೆಚ್ಚಾಗಿದೆ. ರಾಜಧಾನಿಯಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಆತಂಕ ಹೆಚ್ಚಾಗುತ್ತಿದೆ.
ಗುರುವಾರ ರಾಜಧಾನಿಯಲ್ಲಿ 182 ಕಂಟೈನ್ಮೆಂಟ್ ಝೋನ್ ಮಾಡಲಾಗಿತ್ತು. ಇಂದು ಈ ಸಂಖ್ಯೆ 221ಕ್ಕೆ ಏರಿಕೆಯಾಗಿದೆ. ಓಮೈಕ್ರಾನ್ ಹಾಗೂ ಡೆಲ್ಟಾ ರೂಪಾಂತರಿಗಳಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಮಹದೇವಪುರ ವಲಯದಲ್ಲಿ ಒಂದೇ ದಿನ 25 ಕಂಟೈನ್ಮೆಂಟ್ ಝೋನ್ ಹೆಚ್ಚಳವಾಗಿದೆ. (ಸಾಂದರ್ಭಿಕ ಚಿತ್ರ)
2/ 5
ಬಿಬಿಎಂಪಿ ವಲಯವಾರು ಕಂಟೈನ್ಮೆಂಟ್ ಝೋನ್ ವಿವರ ಹೀಗಿದೆ: ಬೊಮ್ಮನಹಳ್ಳಿ : 63, ದಕ್ಷಿಣ ವಲಯ : 12, ಮಹಾದೇವಪುರ : 82, ಪೂರ್ವ ವಲಯ : 12, ಯಲಹಂಕ : 27, ಪಶ್ಚಿಮ ವಲಯ : 21, ಆರ್ ಆರ್ ನಗರ : 00 ಮತ್ತು ದಾಸರಹಳ್ಳಿ : 04 (ಸಾಂದರ್ಭಿಕ ಚಿತ್ರ)
3/ 5
ಇಂದಿನಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಆರಂಭವಾಗುತ್ತಿದೆ. ಕೊರೊನಾ ಸೋಂಕು ಪಸರಿಸುವಿಕೆ ಪ್ರಮಾಣ ಶೇ.5ಕ್ಕಿಂತ ಹೆಚ್ಚಾದ್ರೆ ಲಾಕ್ ಡೌನ್ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ಸದ್ಯ ನಗರದಲ್ಲಿ ಸೋಂಕು ಪಸರಿಸುಚವಿಕೆ ಪ್ರಮಾಣ ಶೇ.4.98ಕ್ಕೆ ತಲುಪಿದೆ. (ಸಾಂದರ್ಭಿಕ ಚಿತ್ರ)
4/ 5
ನಗರದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ನಾಗಾಲೋಟದಲ್ಲಿ ಏರಿಕೆಯಾಗಿದ್ದು , ನಿನ್ನೆ ಒಂದೇದಿನ ನಗರದಲ್ಲಿ 4324 ಕೇಸ್ ಪತ್ತೆಯಾಗಿವೆ. ಇದು ಕಳೆದ 214 ದಿನಗಳಲ್ಲೇ ಅತ್ಯಧಿಕ ಕೇಸ್ ಆಗಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆ 18,913ಕ್ಕೆ ಏರಿಕೆಯಾಗಿದೆ.(ಸಾಂದರ್ಭಿಕ ಚಿತ್ರ)
5/ 5
ನಗರದಲ್ಲಿ ಸೋಂಕು ಪಸರಿಸುವಿಕೆ ಪ್ರಮಾಣ ಶೇ.5 ದಾಟಿದ್ರೆ ನಿಯಂತ್ರಣ ಮಾಡೋದು ಕಷ್ಟ ಎಂದು ತಜ್ಞರು ಹೇಳುತ್ತಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬರದಿದ್ರೆ ಲಾಕ್ ಡೌನ್ ಅನಿವಾರ್ಯ ಆಗಬಹುದು.