ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

ಸಚಿವ ಕೆ.ಎಸ್.ಈಶ್ವರಪ್ಪ (Minister KS Eshwarappa) ಹೇಳಿಕೆ ಖಂಡಿಸಿರುವ ಕಾಂಗ್ರೆಸ್ (Congress) ರಾಜೀನಾಮೆಗೆ ಒತ್ತಾಯಿಸುತ್ತಿದೆ. ಸದನ ಮುಂದೂಡಿಕೆಯಾದ್ರೂ ಕಾಂಗ್ರೆಸ್ ನಾಯಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ. ಸುಮಾರು 30 ರಿಂದ 35 ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

First published:

  • 18

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ನಿನ್ನೆ ರಾತ್ರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಆಗಮಿಸಿ ಕಾಂಗ್ರೆಸ್ ನಾಯಕರ ಮನವೊಲಿಸಲು ಪ್ರಯತ್ನಿಸಿದ್ರು. ಆದ್ರೆ ಕಾಂಗ್ರೆಸ್ ನಾಯಕರು ಧರಣಿ ಹಿಂಪಡೆಯಲು ಒಪ್ಪದ ಹಿನ್ನೆಲೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಹಿಂದಿರುಗಿದರು.

    MORE
    GALLERIES

  • 28

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಧರಣಿ  ನಡೆಸಲಾಗುತ್ತಿದೆ. ಗುರುವಾರ ರಾತ್ರಿ ಸ್ಪೀಕರ್ ಕಾಗೇರಿ ಅವರು ಸಹ ಕಾಂಗ್ರೆಸ್ ನಾಯಕರ ಬಳಿ ಆಗಮಿಸಿ ಮಾತನಾಡಿದ್ದರು.

    MORE
    GALLERIES

  • 38

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ಇನ್ನು ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಧರಣಿ ನಡೆಸುತ್ತಿರುವ ಹಿನ್ನೆಲೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಶಾಸಕರಿಗೆ ದಿಂಬು, ಹಾಸಿಗೆಯ ವ್ಯವಸ್ಥೆ ಸಹ ಮಾಡಲಾಗಿತ್ತು.

    MORE
    GALLERIES

  • 48

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    MORE
    GALLERIES

  • 58

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ಇನ್ನು ಕೆಲ ಶಾಸಕರು ಮೊಬೈಲ್ ನಲ್ಲಿ ತಮ್ಮ ನೆಚ್ಚಿನ ಹಾಡುಗಳನ್ನು ಕೇಳುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ. ಶಾಸಕಿ ಸೌಮ್ಯಾ ರೆಡ್ಡಿ ಅವರು ವ್ಯಂಗ್ಯವಾಗಿ ಈಶ್ವರಪ್ಪ ಅವರಿಗೆ ಟಾಂಗ್ ನೀಡುತ್ತಾ ಹಾಡು ಹಾಡಿದ್ದಾರೆ.

    MORE
    GALLERIES

  • 68

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ಬೆಳಗ್ಗೆ 5.30ಕ್ಕೆ ಹೊರ ಬಂದಿರುವ ಕೆಲ ಬೆಂಗಳೂರಿನ ಶಾಸಕರು ವಿಧಾನ ಸೌಧದ ಮುಂಭಾಗದಲ್ಲಿ ವಾಕಿಂಗ್ ಮಾಡುತ್ತಿರುವ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ.

    MORE
    GALLERIES

  • 78

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ಈ ವೇಳೆ  ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ದೆಹಲಿಯ ಕೋಟೆ ಮೇಲೆ ಭಾಗವಾದ್ವಜ ಹಾರಿಸುವ ಹೇಳಿಕೆ ಕೊಟ್ರೂ ಸರ್ಕಾರ ಅವರ ಪರ ನಿಂತಿದೆ. ಇದು ವೈಯಕ್ತಿಕ ವಿಷವಾಗಿದ್ರೆ ಸುಮ್ಮನಾಗುತ್ತಿದ್ದೀವಿ.ಇದು ರಾಷ್ಟ್ರೀಯತೆಯ ವಿಷಯ. ಅವರು ರಾಜೀನಾಮೆ ಕೊಡಬೇಕು‌. ಸಿಎಂ ಕ್ಯಾಬಿನೆಟ್ ನಿಂದ ಡಿಸ್ಮಿಸ್  ಮಾಡಬೇಕು‌ ಎಂದು ಆಗ್ರಹಿಸಿದರು.

    MORE
    GALLERIES

  • 88

    ವಿಧಾನಸೌಧದಲ್ಲಿ Congress ನಾಯಕರ ಅಹೋರಾತ್ರಿ ಧರಣಿ: ಹೊರ ಭಾಗದಲ್ಲಿ ಶಾಸಕರ ವಾಕಿಂಗ್: Photoಗಳಲ್ಲಿ ನೋಡಿ

    ಅದೇ ಬೇರೆಯವರು ಈ ರೀತಿ ಹೇಳಿಕೆ ನೀಡಿದ್ರೆ ರಾಷ್ಟ್ರ ದ್ರೋಹ ಕೇಸ್ ಹಾಕುತ್ತಿದ್ದರು. ಸರ್ಕಾರ ಮತ್ತು ಅವರ ನಾಯಕರು ಈಶ್ವರಪ್ಪನವರ ಪರವಾಗಿಯೇ ಇದ್ದಾರೆ. ರಾಜೀನಾಮೆ ಕೊಡೋವರೆಗೂ ನಾವು ಧರಣಿ ಬಿಡಲ್ಲ ಎಂದು ತಿಳಿಸಿದರು.

    MORE
    GALLERIES