ವರ್ಷಾಂತ್ಯ, ಜೊತೆಗೆ ಕ್ರಿಸ್ಮಸ್. ಒಟ್ಟೊಟ್ಟಿಗೆ ಬಂದಿರೋ ಈ ಎರಡೂ ವಿಶೇಷಗಳಿಗೆ ಸಾಲುಸಾಲು ರಜೆ ಹಾಕಿ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಬೆಂಗಳೂರಿನಿಂದ ಸ್ವಂತ ಊರಿಗೆ ಒಮ್ಮೆ ವಿಸಿಟ್ ಹಾಕುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಸಂಸ್ಥೆಗಳು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಟಿಕೆಟ್ ದರವನ್ನು ಊಹಿಸಲೂ ಸಾಧ್ಯವಿಲ್ಲದ ಮಟ್ಟಿಗೆ ಏರಿಸಿವೆ. (ಸಾಂದರ್ಭಿಕ ಚಿತ್ರ)
3/ 7
ಹೌದು, ನೀವು ಬೆಂಗಳೂರಿನಿಂದ ಈ ಊರುಗಳಿಗೆ ಪ್ರಯಾಣ ಬೆಳೆಸಲು ಯೋಚನೆ ಮಾಡುತ್ತಿದ್ದರೆ ನಿಮ್ಮ ಜೇಬನ್ನು ಒಮ್ಮೆ ಮುಟ್ಟಿ ನೋಡಿಕೊಳ್ಳಿ! ಖಾಸಗಿ ಬಸ್ ಸಂಸ್ಥೆಗಳ ಟಿಕೆಟ್ ದರ ಅಷ್ಟರಮಟ್ಟಿಗೆ ಮುಗಿಲುಮುಟ್ಟಿದೆ. (ಸಾಂದರ್ಭಿಕ ಚಿತ್ರ)
4/ 7
ಸಾಮಾನ್ಯ ದಿನಗಳಲ್ಲಿ ಖಾಸಗಿ ಬಸ್ ದರಕ್ಕೆ ಹೋಲಿಸಿದರೆ ಕ್ರಿಸ್ಮಸ್ ಮತ್ತು ವರ್ಷಾಂತ್ಯದ ಸಂದರ್ಭದಲ್ಲಿ ಬಸ್ ಪ್ರಯಾಣ ದರ ಮೂರರಿಂದ ನಾಲ್ಕು ಪಟ್ಟು ಏರಿಕೆಯಾಗಿದೆ. (ಸಾಂದರ್ಭಿಕ ಚಿತ್ರ)
5/ 7
ಬೆಂಗಳೂರಿನಿಂದ ಹುಬ್ಬಳ್ಳಿಗೆ ಡಿಸೆಂಬರ್ 23ರಂದು ಖಾಸಗಿ ಬಸ್ ಪ್ರಯಾಣ ದರ 3 ಸಾವಿರದಿಂದ 5 ಸಾವಿರದವರೆಗೂ ಏರಿಕೆಯಾಗಿದೆ. ಅಲ್ಲದೇ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. (ಸಾಂದರ್ಭಿಕ ಚಿತ್ರ)
6/ 7
ಹೊಸ ವರ್ಷ ಮತ್ತು ಕ್ರಿಸ್ಮಸ್ ಸಂದರ್ಭದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ 1,100 ರೂಪಾಯಿ, ಮೈಸೂರಿಗೆ 1,999 ರೂಪಾಯಿ, ಮಡಿಕೇರಿಗೆ 1,130 ರೂಪಾಯಿ ಟಿಕೆಟ್ ದರವಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಖಾಸಗಿ ಬಸ್ಗಳಿಗೆ ಲಗಾಮು ಹಾಕಬೇಕಿದ್ದ ಸರ್ಕಾರದ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)