Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

ಸಿಲಿಕಾನ್ ಸಿಟಿ ಜನರೇ ಇನ್ಮುಂದೆ ಸುಖಾಸುಮ್ಮನೇ ಕಾವೇರಿ ನೀರು ಪೋಲು ಮಾಡಿದ್ರೆ ದಂಡ ಬೀಳಲಿದೆ. ಪೋಲಾಗುತ್ತಿರುವ ನೀರು ಉಳಿಸುವ ದೃಷ್ಟಿಯಿಂದ ಬೆಂಗಳೂರು ಜಲಮಂಡಳಿ ಹಳೆ ನಿಯಮವೊಂದನ್ನು ಮತ್ತೆ ಜಾರಿಗೆ ತರಲು ನಿರ್ಧರಿಸಿದೆ. ಆದ್ರೆ ಈ ನಿಯಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

First published:

  • 18

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    2020ರಲ್ಲಿ ನೀರು ಪೋಲಾಗದಂತೆ BWSSB ಈ ನಿಯಮವನ್ನು ತಂದಿತ್ತು. ಆದ್ರೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಈ ನಿಯಮವನ್ನು ಹಿಂಪಡೆದುಕೊಂಡಿತ್ತು.

    MORE
    GALLERIES

  • 28

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ಸದ್ಯ ಬೇಸಿಗೆ ಆರಂಭವಾದ ಹಿನ್ನೆಲೆ BWSSB ಹಳೆ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಬೇಸಿಗೆಯಲ್ಲಿ ನೀರು ಪೋಲು ತಡೆಯುವ ಹಿನ್ನೆಲೆ ದಂಡಾಸ್ತ್ರ ನಿಯಮ ತರಲಾಗುತ್ತಿದೆ ಎಂದು ಜಲ ಮಂಡಳಿ ಮುಖ್ಯ ಅಧೀಕ್ಷಕ ದೇವರಾಜ್ ಹೇಳಿದ್ದಾರೆ.

    MORE
    GALLERIES

  • 38

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ಇನ್ಮುಂದೆ ಮನೆ ಮೇಲಿನ ಟ್ಯಾಂಕ್ ನೀರು ತುಂಬಿ ಕೆಳಗೆ ಬೀಳುವಂತಿಲ್ಲ. ಸಂಪುಗಳಲ್ಲಿಯ ನೀರು ಸಹ ರಸ್ತೆಗೆ ಹರಿಯುವಂತಿಲ್ಲ. ಈ ರೀತಿ ನೀರು ಪೋಲು ಮಾಡುವ ಮನೆಗೆ 100 ರೂ ದಂಡ ವಿಧಿಸಲು ಜಲಮಂಡಳಿ ನಿರ್ಧರಿಸಿದೆ.

    MORE
    GALLERIES

  • 48

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ಹೀಗೆ ನೀರು ಪೋಲು ಮಾಡಿದ್ರೆ ಪ್ರತಿದಿನ ದಂಡ ಬೀಳಲಿದೆ. ಒಂದು ವೇಳೆ ಮನೆ ಮಾಲೀಕರು ಎಚ್ಚೆತ್ತುಕೊಳ್ಳದಿದ್ರೆ  ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.

    MORE
    GALLERIES

  • 58

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ನೀರು ಪೋಲು ತಡೆಯಲು ಸ್ವಯಂಚಾಲಿತವಾಗಿ ಪಂಪ್‌ ಆಫ್‌ ಆಗುವ ಆಟೊಮೆಟಿಕ್‌ ವಾಟರ್‌ ಕಂಟ್ರೋಲ್‌ ಸಿಸ್ಟಮ್‌ ತಂತ್ರಜ್ಞಾನ ಅಳವಡಿಕೆ ಅತ್ಯಗತ್ಯವಾಗಿದೆ.

    MORE
    GALLERIES

  • 68

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ಈ ತಂತ್ರಜ್ಞಾನ ಅಳವಡಿಕೆಗೆ ಜನರು 2 ರಿಂದ 3 ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಸಾರ್ವಜನಿಕರಿಂದ ಈ ನಿಯಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸಿಂಟೆಕ್ಸ್‌ ನಲ್ಲಿ ಸಾಮಾನ್ಯವಾಗಿ ಬಾಲ್‌ ಕಾಕ್‌ ಬಳಸಲಾಗುತ್ತದೆ. ಆದರೆ ಇದನ್ನು ಹೆಚ್ಚಿನವರು ಬಳಸಿಕೊಳ್ಳುತ್ತಿಲ್ಲ ಅಂತ ದಂಡಾಸ್ತ್ರದ ಪ್ರಯೋಗ ಮಾಡಲು ಜಲಮಂಡಳಿ ನಿರ್ಧರಿಸಿದೆ.

    MORE
    GALLERIES

  • 78

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ಟ್ಯಾಂಕ್ ಅಥವಾ ಸಂಪ್ ತುಂಬಿ ನೀರು ಹರಿಯೋದು ತುಂಬಾನೇ ಕಡಿಮೆ. ಹೀಗೆ ಎಲ್ಲದಕ್ಕೂ ದಂಡ ಹಾಕೋದು ಎಷ್ಟು ಸರಿ ಎಂದು ಸಾರ್ವಜನಿಕರಿ ಪ್ರಶ್ನೆ ಮಾಡಿದ್ದಾರೆ.

    MORE
    GALLERIES

  • 88

    Bengaluru: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ: BWSSB ಕೊಡ್ತಿದೆ ಮತ್ತೊಂದು ಶಾಕ್..!

    ಜಲಮಂಡಳಿ ನಿರ್ಲಕ್ಷ್ಯಕ್ಕೆ ರಸ್ತೆಯಲ್ಲಿ ನೀರು ಹರಿದುಹೋಗುತ್ತದೆ. ಗಂಟೆಗಟ್ಟಲೆ, ಹಲವೆಡೆ ದಿನಗಟ್ಟಲೇ ಮೋರಿಗಳಲ್ಲಿ ಕುಡಿಯುವ ನೀರು ಹರಿಯುತ್ತದೆ. ಇಂಥದಕ್ಕೆ‌ ಮೊದಲು ಕಡಿವಾಣ ಹಾಕಿ. ಕಾವೇರಿ ನೀರೇ ಸಮರ್ಪಕವಾಗಿ ಬರಲ್ಲ/ ಓವರ್ ಫ್ಲೋ ಆಗಿ ನೀರು ವ್ಯರ್ಥ ಮಾಡೋದು ತುಂಬ ವಿರಳ. ಇದು ಅವೈಜ್ಞಾನಿಕ ಯೋಜನೆ, ದಂಡ ಹಾಕೋದು ಸರಿಯಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದಾರೆ.

    MORE
    GALLERIES