ಬೆಂಗಳೂರಿನಲ್ಲಿ ಪ್ರಯಾಣವನ್ನು ಸುಲಭಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಡಿಸೆಂಬರ್ ತಿಂಗಳಿನಲ್ಲಿ ಹೊಸ ಅಪ್ಲಿಕೇಶನ್ 'Nimmabus' ಅನ್ನು ಬಿಡುಗಡೆ ಮಾಡಲಿದೆ. (ಸಾಂದರ್ಭಿಕ ಚಿತ್ರ)
2/ 8
BMTC ಡಿಸೆಂಬರ್ 15 ಮತ್ತು 31 ರ ನಡುವೆ ಈ ಅಪ್ಲಿಕೇಶನ್ Android ಮತ್ತು iOS ಎರಡೂ ಆವೃತ್ತಿಗಳಲ್ಲಿ ಬಳಕೆಗೆ ಲಭ್ಯವಾಗಲಿದೆ.ಮೊದಲ ಹಂತದಲ್ಲಿ ಪ್ರಯಾಣಿಕರು ಸುಮಾರು 4,000 ಬಸ್ಗಳಲ್ಲಿ ರಿಯಲ್ ಟೈಮ್ ಆಧಾರದ ಮೇಲೆ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 8
ಸದ್ಯ ಆ್ಯಪ್ ಅನ್ನು ಪರೀಕ್ಷಿಸಲಾಗುತ್ತಿದೆ. ಕೆಲವೇ ಕೆಲವು ಪ್ರಯಾಣಿಕರ ಜೊತೆ ಪರೀಕ್ಷಾರ್ಥವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 8
ಬಿಎಂಟಿಸಿ ಬಿಡುಗಡೆ ಮಾಡುತ್ತಿರುವ ಮೂರನೇ ಆ್ಯಪ್ ಇದಾಗಿದೆ. 2016 ರಲ್ಲಿ ಇದು ಬಿಎಂಟಿಸಿ ರೀತಿಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತ್ತು. ಆದರೆ ಹಲವಾರು ತಾಂತ್ರಿಕ ದೋಷಗಳಿಂದಾಗಿ ಅದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. (ಸಾಂದರ್ಭಿಕ ಚಿತ್ರ)
5/ 8
2019 ರಲ್ಲಿ 'MyBMTC' ಎಂಬ ಹೆಸರಿನ ಮತ್ತೊಂದು ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿತ್ತು. ಆದರೆ ಕೆಲವು ದೋಷಗಳಿಂದಾಗಿ ಅದು ಸಹ ಸ್ಥಗಿತಗೊಂಡಿತ್ತು. (ಸಾಂದರ್ಭಿಕ ಚಿತ್ರ)
6/ 8
ಈ ಹೊಸ ಅಪ್ಲಿಕೇಶನ್ ಮೂಲಕ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್ಗಳನ್ನು ಸುಲಭಗೊಳಿಸಲು ಖಾಸಗಿ ಸಂಸ್ಥೆಯೊಂದಿಗೆ ಬಿಎಂಟಿಸಿ ಕೆಲಸ ಮಾಡುತ್ತಿದೆ. (ಸಾಂದರ್ಭಿಕ ಚಿತ್ರ)
7/ 8
ಆದರೆ ಈ ಆ್ಯಪ್ ಮೂಲಕ ಪ್ರತಿದಿನದ ಟಿಕೆಟ್ಗಳನ್ನು ಖರೀದಿಸಲು ಇನ್ನಷ್ಟು ಸಮಯ ಕಾಯಬೇಕಿದೆ. (ಸಾಂದರ್ಭಿಕ ಚಿತ್ರ)
8/ 8
ಇದಲ್ಲದೆ ಮುಂದಿನ ವರ್ಷದಿಂದ ಯುಪಿಐ ಆಧಾರಿತ ಟಿಕೆಟಿಂಗ್ ಅನ್ನು ಪರಿಚಯಿಸಲು ಬಿಎಂಟಿಸಿ ಯೋಜನೆ ರೂಪಿಸಿದೆ. (ಸಾಂದರ್ಭಿಕ ಚಿತ್ರ)