ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

ಬಿಎಂಟಿಸಿ ಹುಟ್ಟಿದ್ದು ಹೇಗೆ? ಈ ಸಾರಿಗೆ ಸಂಸ್ತೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು? ಹೀಗೊಂದು ಕುತೂಹಲ ನಿಮ್ಮಲ್ಲೂ ಇದ್ದೇ ಇರಬಹುದು.

First published:

  • 17

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    ಬಿಎಂಟಿಸಿ, ಈ ಹೆಸರನ್ನು ಕೇಳದವರಿಲ್ಲ. ರಾಜ್ಯ ರಾಜಧಾನಿ ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರ ನಿತ್ಯದ ಪ್ರಯಾಣದ ಸಂಗಾತಿ ಬಿಎಂಟಿಸಿ. ಮನೆಯಿಂದ ಆಫೀಸಿಗೆ, ಆಫೀಸಿನಿಂದ ಮನೆಗೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ.. ಹೀಗೆ ಬೆಂಗಳೂರಿನಲ್ಲಿ ಪ್ರತಿದಿನದ ತಿರುಗಾಟದ ಸಾರಥಿ ನಮ್ಮ BMTC

    MORE
    GALLERIES

  • 27

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    ಹಾಗಾದರೆ ಬಿಎಂಟಿಸಿ ಹುಟ್ಟಿದ್ದು ಹೇಗೆ? ಈ ಸಾರಿಗೆ ಸಂಸ್ತೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು? ಹೀಗೊಂದು ಕುತೂಹಲ ನಿಮ್ಮಲ್ಲೂ ಇದ್ದೇ ಇರಬಹುದು. ಈ ಕುತೂಹಲ ತಣಿಸುವ ಮಾಹಿತಿ ನಿಮಗೆಂದೇ ಇಲ್ಲಿದೆ.

    MORE
    GALLERIES

  • 37

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    BMTC ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಂಗಸಂಸ್ಥೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. 1997 ರಲ್ಲಿ ಬೆಂಗಳೂರು ಸಾರಿಗೆ ಸೇವೆ (BTS) ಇತರ ಸಾರಿಗೆ ಸಂಸ್ಥೆಯಿಂದ ಬೇರ್ಪಟ್ಟು ಸ್ವತಂತ್ರ ಸಂಸ್ಥೆಯಾಗಿ ರಚನೆಯಾಯಿತು. ಮುಂದೆ ಇದೇ ಬೆಂಗಳೂರು ಸಾರಿಗೆ ಸೇವೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಾಗಿ ಮಾರ್ಪಟ್ಟಿತು.

    MORE
    GALLERIES

  • 47

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    BMTC ಭಾರತದಲ್ಲಿ ವೋಲ್ವೋ ಸಿಟಿ ಬಸ್​ಗಳನ್ನು ಪರಿಚಯಿಸಿದ ಮೊದಲ ರಾಜ್ಯ ಸಾರಿಗೆ ಒಕ್ಕೂಟವಾಗಿದೆ. ಇತ್ತೀಚಿಗಷ್ಟೇ 75 ನಾನ್-ಎಸಿ ಇ-ಬಸ್​ಗಳನ್ನು ಸಹ ಬಿಎಂಟಿಸಿ ಆರಂಭಿಸಿದೆ.

    MORE
    GALLERIES

  • 57

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    ಈ ಮೊದಲು ಬೆಂಗಳೂರು ಸಾರಿಗೆ ಸಂಸ್ಥೆ ಎಂಬ ಹೆಸರಲ್ಲಿ ಬಸ್ ಸೇವೆ ನೀಡಲಾಗುತ್ತಿತ್ತು. ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಮಾತ್ರ ಈ ಬಸ್ ಸೇವೆ ಸಿಗುತ್ತಿತ್ತು. ಆದರೆ ಬೆಂಗಳೂರು ಸಾರಿಗೆ ಸಂಸ್ಥೆ 1956 ರಲ್ಲಿ ರಾಷ್ಟ್ರೀಕರಣಗೊಂಡಿತು. ಇದೇ ಸಂಸ್ಥೆಯನ್ನು 1962 ರಲ್ಲಿ ಬೆಂಗಳೂರು ಸಾರಿಗೆ ಸೇವೆ (BTS) ಎಂದು ಮರುನಾಮಕರಣ ಮಾಡಲಾಯಿತು.

    MORE
    GALLERIES

  • 67

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    ಡಬಲ್ ಡೆಕರ್ ಬಸ್​ಗಳಿಂದ ಶುರುವಾದ ಬಿಎಂಟಿಸಿ ಬಸ್ ಸೇವೆ ಇದೀಗ ವೊಲ್ವೋ, ಎಲೆಕ್ಟ್ರಿಕ್ ಬಸ್​ ಸೇವೆ ಆರಂಭಿಸುವವರೆಗೆ ಬಂದು ತಲುಪಿದೆ. ಇಡೀ ದೇಶದಲ್ಲೇ ಹಲವು ದಾಖಲೆಗಳನ್ನು ನಿರ್ಮಿಸಿದ ಖ್ಯಾತಿ ಹೊಂದಿದೆ.

    MORE
    GALLERIES

  • 77

    ಲಕ್ಷಾಂತರ ಪ್ರಯಾಣಿಕರ ನಿತ್ಯದ ಸಂಗಾತಿ BMTC ಹುಟ್ಟಿ ಬೆಳೆದ ಕಥೆ!

    ಒಟ್ಟಾರೆ ನಮ್ಮ ಬೆಂಗಳೂರಿನ ಬಿಎಂಟಿಸಿ ಲಕ್ಷಾಂತರ ಜನರ ಪಾಲಿಗೆ ಒಂಥರಾ ಭಾವನಾತ್ಮಕ ಬೆಸುಗೆ. ಬಾಲ್ಯದಲ್ಲಿ ವಿದ್ಯಾರ್ಥಿ ಬಸ್ ಪಾಸ್ ಬಳಸಿ ಪ್ರಯಾಣಿಸುವುದರಿಂದ, ಮುಂದೆ ಉದ್ಯೋಗಿಯಾದಾಗ, ನಂತರ ವೃದ್ಧಾಪ್ಯದಲ್ಲಿ ಹಿರಿಯರ ಬಸ್ ಪಾಸ್​ವರೆಗೆ ಬಿಎಂಟಿಸಿ ಜೀವನದಲ್ಲಿ ಹಾಸು ಹೊಕ್ಕಾಗಿದೆ.

    MORE
    GALLERIES