Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

ಆಫೀಸಿಗೆ ಹೋಗುವವರಿಂದ ಹಿಡಿದು ಕಾಲೇಜಿಗೆ ಹೋಗುವವರು.. ಮಕ್ಕಳು,ದೊಡ್ಡವರು ಎಂಬ ಬೇಧವಿಲ್ಲದೇ ಬಹುತೇಕರು ಸುಲಭವಾದ ಸಂಚಾರಕ್ಕೆ ಬಳಸುವ ಸಾರಿಗೆ ಅಂದರೆ ಅದು ನಮ್ಮ ಮೆಟ್ರೋ. ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೇ ಸಿಗ್ನಲ್ ತೊಂದರೆ ಇಲ್ಲದೆ. ಆದಷ್ಟು ಶೀಘ್ರವಾಗಿ ಟ್ರಾವೆಲ್ ಮಾಡಬಹುದಾದ ಏಕೈಕ ಆಯ್ಕೆ ಎಂದರೆ ಅದು ನಮ್ಮ ಮೆಟ್ರೋ. ಈ ಕಾರಣಕ್ಕೆ ಬಹುತೇಕರು ಮೆಟ್ರೋವನ್ನು ಸಂಚಾರಕ್ಕೆ ಆಯ್ಕೆ ಮಾಡಿಕೊಳ್ತಾರೆ. (ವರದಿ: ಸವಿತಾ)

First published:

  • 16

    Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

    ಈಗ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಆಗಿರೋದ್ರಿಂದ BMRCL ಪ್ರಯಾಣಿಕರನ್ನು ಸೆಳೆಯಲು ಹೊಸ ಪ್ಲಾನ್ ಒಂದನ್ನು ಪರಿಚಯಿಸಲು ಹೊರಟಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಹಲವು ವಿನೂತನ ಯೋಜನೆಗಳನ್ನು BMRCL ಜಾರಿ ಮಾಡುತ್ತ ಬರುತ್ತಿದೆ.

    MORE
    GALLERIES

  • 26

    Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

    ವಿಶೇಷ ಪ್ಲಾನ್ ಒಂದನ್ನು ಪರಿಚಯಿಸಲು BMRCL ರೆಡಿಯಾಗ್ತಾಯಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಇದರ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಮಾರ್ಚ್ ನಿಂದ 'ಟ್ರಿಪ್ ಟಿಕೆಟ್' ಯೋಜನೆ ಜಾರಿಗೆ ತರಲು ನೀಲನಕ್ಷೆ ರೂಪಿಸಿದೆ, ಅದಕ್ಕಾಗಿ ತಯಾರಿಯೂ ಜೋರಾಗಿದೆ.

    MORE
    GALLERIES

  • 36

    Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

    ಈ ಮೂಲಕ ಸಾರ್ವಜನಿಕರು ಟಿಕೆಟ್ ಕೌಂಟರ್ನಲ್ಲಿ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವುದು ಹಾಗೂ ಶೀಘ್ರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿದೆ. ಮೆಟ್ರೋ ಕಾರ್ಡ್ ಮಾದರಿಯಲ್ಲೇ ಇರಲಿರುವ ಟ್ರಿಪ್ ಟಿಕೆಟ್ ಗಳು 25, 50, 100 ಹೀಗೆ ನಿರ್ದಿಷ್ಟ ಟ್ರಿಪ್ಗಳನ್ನು ಹೊಂದಿರುತ್ತವೆ.

    MORE
    GALLERIES

  • 46

    Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

    ಮುಂಗಡ ಹಣ ನೀಡಿ ಟ್ರಿಪ್ ಟಿಕೆಟ್ ಪಡೆಯಬಹುದು. ಇದಕ್ಕೆ ದೂರದ ಮಿತಿ ಇಲ್ಲ. ಕಾರ್ಡ್ನಿಂದ ಪ್ರತಿ ಟ್ರಿಪ್ಗೂ ಸ್ವಯಂ ಚಾಲಿತವಾಗಿ ಹಣ ಕಡಿತಗೊಳ್ಳುತ್ತದೆ. ಟ್ರಿಪ್ ಟಿಕೆಟ್ ಪಡೆದು ಪ್ರಯಾಣ ಮಾಡುವವರ ಕಾರ್ಡ್ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಬೆಂಗಳೂರು ಪ್ರವಾಸ ಕೈಗೊಳ್ಳುವವರಿಗೆ ಈ ಟ್ರಿಪ್ ಟಿಕೆಟ್ ಬಹಳ ಅನುಕೂಲವಾಗಲಿದೆ.

    MORE
    GALLERIES

  • 56

    Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

    ಒಂದು ಬಾರಿ ಟಿಕೆಟ್ ತೆಗೆದುಕೊಂಡರೆ ಎಲ್ಲಿ ಬೇಕಾದರೂ ಪ್ರಯಾಣಿಸಬಹುದಾಗಿದೆ. ಇದು ಸಮಯ, ಹಣ ಎರಡನ್ನೂ ಉಳಿತಾಯ ಮಾಡುತ್ತದೆ. ಸ್ಮಾರ್ಟ್ ಕಾರ್ಡ್ ತೆಗೆದುಕೊಂಡರೆ ಕನಿಷ್ಠ 50 ರೂ. ಬ್ಯಾಲೆನ್ಸ್ ಇಟ್ಟುಕೊಳ್ಳಲೇ ಬೇಕು. ಇದರಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೆಂಟೈನ್ ಮಾಡುವ ಅವಶ್ಯಕತೆ ಇಲ್ಲದಿರುವುದರಿಂದ ಹೆಚ್ಚಿನವರು ಈ ಟಿಕೆಟ್ ಪಡೆಯುವುದಕ್ಕೆ ಆಸಕ್ತಿ ತೋರಿಸುವ ಸಾಧ್ಯತೆ ಇದೆ.

    MORE
    GALLERIES

  • 66

    Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

    ಒಟ್ಟಿನಲ್ಲಿ ಕೊರೊನಾ ಹಿನ್ನಲೆ ಕಡಿಮೆಯಾಗಿರುವ ಹಿನ್ನಲೆ ಮತ್ತೆ ಪ್ರಯಾಣಿಕರನ್ನು ಸೆಳೆಯಲು ನಮ್ಮ ಮೆಟ್ರೋ ವಿಶೇಷ ಪ್ಲಾನ್ ಗಳನ ಪರಿಚಯಿಸಲು ಮುಂದಾಗಿದ್ದು, BMRCLನ ಈ ಪ್ಲಾನ್ ಆದಷ್ಟು ಬೇಗ ಜಾರಿಯಾಗಲಿ. ಜನ ಸಾಮಾನ್ಯರಿಗೆ ಈ ವಿನೂತನ ಸೇವೆ ಸದ್ಭಳಕೆ ಪಡೆಯಲಿ. (ಸಾಂದರ್ಭಿಕ ಚಿತ್ರ)

    MORE
    GALLERIES