ಬೆಂಗಳೂರಿನ ನಾಗರೀಕರೇ, ನಿಮಗೊಂದು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನಿಂದ ರಾಜ್ಯದ ಎರಡು ಪ್ರಮುಖ ನಗರಗಳಿಗೆ ಪ್ರಯಾಣಿಸುವುದು ಇನ್ಮೇಲೆ ಇನ್ನಷ್ಟು ಸಲೀಸಾಗಲಿದೆ. (ಸಾಂದರ್ಭಿಕ ಚಿತ್ರ)
2/ 8
ಬೆಂಗಳೂರಿನಿಂದ ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಫ್ಲೈ ಓವರ್ ಮೇಲೆ ಇನ್ಮೇಲೆ ಸಂಚರಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಈ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕರ್ಪಣೆಗೊಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
4/ 8
ಒಟ್ಟು 760 ಮೀಟರ್ ಉದ್ದದ ಈ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆಯನ್ನು 76.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)
5/ 8
ಬೆಂಗಳೂರು ಉತ್ತರ ಭಾಗದ ನಾಗರಿಕರು ಸೇರಿದಂತೆ ಬಸವೇಶ್ವರ ನಗರ, ರಾಜಾಜಿನಗರ ಭಾಗದ ಪ್ರಯಾಣಿಕರಿಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಈ ಫ್ಲೈ ಓವರ್ ಅತಿ ಹೆಚ್ಚು ಪ್ರಯೋಜನ ಒದಗಿಸಲಿದೆ.(ಸಾಂದರ್ಭಿಕ ಚಿತ್ರ)
6/ 8
ಅಲ್ಲದೇ, ಮೈಸೂರು- ತುಮಕೂರು ರಸ್ತೆಗೆ ಸಿಗ್ನಲ್ ಫ್ರೀ ಸಂಚಾರ ಮಾಡಲು ಈ ಮೇಲ್ಸೇತುವೆಯು ಸೌಕರ್ಯವನ್ನು ಕಲ್ಪಿಸಲಿದೆ. (ಸಾಂದರ್ಭಿಕ ಚಿತ್ರ)
7/ 8
ಈ ಮೇಲ್ಸೇತುವೆಯ ಕಾಮಗಾರಿ ಹಲವು ಕಾರಣಗಳಿಂದ ವಿಳಂಬವಾಗಿತ್ತು. ಆದರೆ ಕೊನೆಗೂ ಇದೀಗ ಲೋಕಾರ್ಪಣೆಗೊಂಡು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ. (ಸಾಂದರ್ಭಿಕ ಚಿತ್ರ)
8/ 8
ಒಟ್ಟಾರೆ ಬೆಂಗಳೂರಿನ ಪ್ರಯಾಣಿಕರು ಈ ಹೊಸ ಮೇಲ್ಸೇತುವೆಯ ಮೂಲಕ ತಮ್ಮ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)
First published:
18
Good News: ಬೆಂಗಳೂರಿನ ಪ್ರಯಾಣಿಕರಿಗೆ ಇನ್ನೊಂದು ಫ್ಲೈ ಓವರ್! ಈ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ