ಬೆಂಗಳೂರಿನ ನಾಗರಿಕರೇ ಗಮನಿಸಿ, ನಿಮ್ಮ ಮನೆಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲವೇ? ನೀರಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಈ ಸುದ್ದಿಯನ್ನ ನೀವು ತಪ್ಪದೇ ಓದಬೇಕು. (ಸಾಂದರ್ಭಿಕ ಚಿತ್ರ)
2/ 7
ಹೌದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿವಿಧ ಉಪವಿಭಾಗಗಳಲ್ಲಿ ಆಗಾಗ ನೀರಿನ ಅದಾಲತ್ ನಡೆಸುತ್ತಲೇ ಇರುತ್ತದೆ. ಈ ಅದಾಲತ್ಗಳಲ್ಲಿ ನೀವು ಭಾಗವಹಿಸುವ ಮೂಲಕ ನೀರಿನ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
3/ 7
ಅಲ್ಲದೇ ಬೆಂಗಳೂರಿನ ನಾಗರಿಕರು ನೀರಿನ ಸಮಸ್ಯೆಗಳನ್ನು ಅತ್ಯಂತ ಸುಲಭವಾಗಿ ಇನ್ನೊಂದು ವಿಧಾನದ ಮೂಲಕವೂ ಪರಿಹರಿಸಿಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
4/ 7
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಾಟ್ಸಪ್ ಸಂಖ್ಯೆಗೆ ನಿಮ್ಮ ಮನೆಯಲ್ಲಿನ ನೀರಿನ ಸಮಸ್ಯೆಗಳನ್ನು ದಾಖಲಿಸಬಹುದು. (ಸಾಂದರ್ಭಿಕ ಚಿತ್ರ)
5/ 7
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಾಟ್ಸಪ್ ಸಂಖ್ಯೆ ಹೀಗಿದೆ ನೋಡಿ: 8762228888. ಈ ವಾಟ್ಸಪ್ ಸಂಖ್ಯೆಗೆ ನೀವು ದಿನದ ಯಾವುದೇ ಸಮಯದಲ್ಲಿ ದೂರುಗಳನ್ನು ದಾಖಲಿಸಬಹುದು. (ಸಾಂದರ್ಭಿಕ ಚಿತ್ರ)
6/ 7
ಅಲ್ಲದೇ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿಯನ್ನು ಸಹ ನೀವು ಸಂಪರ್ಕಿಸಬಹುದು. ಈ ಮೂಲಕವೂ ನೀವು ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. (ಸಾಂದರ್ಭಿಕ ಚಿತ್ರ)
7/ 7
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯವಾಣಿ ಸಂಖ್ಯೆ 1916. ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು. (ಸಾಂದರ್ಭಿಕ ಚಿತ್ರ)