ಬೆಂಗಳೂರು- ತುಮಕೂರು ನಡುವೆ ರೈಲು ಸಂಚಾರ ಸ್ಥಗಿತವಾಗಿ ಪ್ರಯಾಣಿಕರು ಹೈರಾಣಾದ ಘಟನೆ ನಡೆದಿದೆ. ಪ್ರಮುಖ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಾವಿರಾರು ಪ್ರಯಾಣಿಕರು ಪರದಾಟ ಪಟ್ಟಿದ್ದಾರೆ. (ಸಾಂದರ್ಭಿಕ ಚಿತ್ರ)
2/ 7
ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಕ್ಸ್ಪ್ರೆಸ್ ರೈಲು ಮುಂದಕ್ಕೆ ಪಯಣಿಸದೇ ತುಮಕೂರಿನಲ್ಲಿಯೇ ನಿಂತಿದೆ. ರೈಲು ಪ್ರಯಾಣ ಮುಂದುವರೆಸುತ್ತದೆ ಎಂದು ಗಂಟೆಗಟ್ಟಲೇ ಕಾದು ಕಾದು ಪ್ರಯಾಣಿಕರು ಹೈರಾಣಾಗಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಟಿಕೆಟ್ ಪಡೆದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಅತ್ತ ಟಿಕೆಟ್ ಹಣವೂ ಇಲ್ಲದೇ, ಇತ್ತ ಬೆಂಗಳೂರಿಗೆ ಹೋಗಲೂ ಆಗದೇ ಪರದಾಟ ಅನುಭವಿಸುವಂತಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಪ್ರಯಾಣಿಕರ ಪ್ರಶ್ನೆಗೆ ಉತ್ತರ ನೀಡಲಾಗದೆ ಕೌಂಟರ್ನಿಂದ ರೈಲ್ವೆ ಸಿಬ್ಬಂದಿ ಕಾಲ್ಕಿತ್ತಿದ್ದಾರೆ. ಇದು ಪ್ರಯಾಣಿಕರ ಸಿಟ್ಟನ್ನು ಇನ್ನಷ್ಟು ಹೆಚ್ಚಾಗಿಸಿದೆ. (ಸಾಂದರ್ಭಿಕ ಚಿತ್ರ)
5/ 7
ತುಮಕೂರಿನ ಸಿದ್ದಗಂಗಾ ಮಠದ ಬಳಿ ರೈಲ್ವೆ ಹಳಿ ದುರಸ್ಥಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು- ತುಮಕೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. (ಸಾಂದರ್ಭಿಕ ಚಿತ್ರ)
6/ 7
ಕ್ಯಾತಸಂದ್ರದಿಂದ ಸಿದ್ದಗಂಗಾ ಮಠಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ 19 ರೈಲುಗಳ ಸಂಚಾರ ಸ್ಥಗಿತಗೊಂಡಿದೆ. (ಸಾಂದರ್ಭಿಕ ಚಿತ್ರ)
7/ 7
ಮೇಲ್ಸೇತುವೆ ಜೋಡಣೆ ಕಾರ್ಯ ಇಂದು ಸಹ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ಎಲ್ಲಾ ರೈಲು ಸಂಚಾರಗಳನ್ನೂ ಸ್ಥಗಿತಗೊಳಿಸಲಾಗಿದೆ.. (ಸಾಂದರ್ಭಿಕ ಚಿತ್ರ)
First published:
17
Bengaluru News: ಅರ್ಧ ದಾರಿಯಲ್ಲಿ ಪ್ರಯಾಣಿಕರಿಗೆ ಕೈಕೊಟ್ಟ ರೈಲ್ವೆ ಇಲಾಖೆ!