ಹಲಸೂರು ಗೇಟ್ ಕಡೆಯಿಂದ ಸಿದ್ದಲಿಂಗಯ್ಯ ಸರ್ಕಲ್ ಕಡೆಗೆ ಹೋಗುವ ವಾಹನಗಳನ್ನು ದೇವಾಂಗ ಜಂಕ್ಷನ್ ಹಾಗೂ ಮಿಷನ್ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳ ವಾಹನಗಳನ್ನು ಸೆಂಟ್ ಜೋಸೆಫ್ ಕಾಲೇಜ್ ಮೈದಾನದಲ್ಲಿ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇತರೆ ವಾಹನಗಳನ್ನು ಬಿಬಿಎಂಪಿ ಮುಖ್ಯ ಕಛೇರಿ ಆವರಣ, ಬದಾಮಿ ಹೌಸ್, ಕೆ.ಜಿ. ರಸ್ತೆಯ ಎಡ ಬದಿಯಲ್ಲಿ ಹಾಗು ಯುನೈಟೆಡ್ ಮಿಷನ್ ಕಾಲೇಜ್ ಮೈದಾನದಲ್ಲಿ ನಿಲ್ಲಿಸಬಹುದಾಗಿದೆ. ಆರ್.ಆರ್.ಎಂ.ಆರ್ ರಸ್ತೆ ಹಾಗು ಕಸ್ತೂರ್ಬಾ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
ಸಮಾರಂಭ ಸ್ಥಳದಲ್ಲಿ ಯಾವುದೇ ರೀತಿಯ ಸ್ಫೋಟಕ, ಚೂಪಾದ ವಸ್ತುಗಳನ್ನು ಬೆಂಕಿಪಟ್ಟಣ, ಲೈಟರ್, ಇತ್ಯಾದಿಗಳನ್ನು ಕೊಂಡೊಯ್ಯಬಾರದು. ರಸ್ತೆ ಬಳಕೆದಾರರು ಸಂಚಾರ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸಬೇಕಿದೆ. ನಗರದ ಯಾವುದಾದರೂ ರಸ್ತೆಯಲ್ಲಿ ವಾಹನ ಕೆಟ್ಟು ನಿಂತಲ್ಲಿ ಅಥವಾ ಅಪಘಾತ ಸಂಭವಿಸಿದಲ್ಲಿ ಗಮನಿಸಿದ ಕೂಡಲೇ ಸಂಚಾರ ನಿಯಂತ್ರಣ ಕೋಣೆ ದೂರವಾಣಿ ಸಂಖ್ಯೆ-080-22943131 ಅಥವಾ 080-22943030 ಗೆ ಕರೆ ಮಾಡಿ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
ಯಾವುದೇ ವಿದ್ಯಾರ್ಥಿಗೆ ಸಂಚಾರ ಸಂಬಂಧಿತ ಸಹಾಯ ಬೇಕಿದ್ದಲ್ಲಿ, ರಸ್ತೆಯಲ್ಲಿ ಕರ್ತವ್ಯನಿರತ ಸಂಚಾರ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ ಮಧ್ಯಾಹ್ನದ ಸಿಇಟಿ ಪರೀಕ್ಷೆಗೆ ಸೆಂಟ್ ಜೋಸೆಫ್ ಪಿಯು ಇಂಡಿಯನ್ ಕಾಲೇಜು, ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಸೆಂಟ್ ಮಾರ್ಕ್ಸ್ ರಸ್ತೆ, ವಿಠಲ್ ಮಲ್ಯ ರಸ್ತೆ ಮೂಲಕ ಬಂದು ಯೂಬಿ ಸಿಟಿಯ ಮುಂಭಾಗದ ಗೇಟ್ನಿಂದ ಕಾಲೇಜಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಸೆಂಟ್ ಜೋಸೆಫ್ ಪಿಯು ಕಾಲೇಜಿನ ಅಧಿಕಾರಿಗಳು ಸೆಂಟ್ ಜೋಸೆಫ್ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಉಟೋಪಚಾರವನ್ನು ಏರ್ಪಡಿಸಲಾಗಿದೆ. (ಸಾಂದರ್ಭಿಕ ಚಿತ್ರ)