Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಬೆಂಗಳೂರಿನ ನಾಗರಿಕರೇ, ಟ್ರಾಫಿಕ್ ಪೊಲೀಸರು ನಿಮಗೊಂದು ಪ್ರಮುಖ ಮಾಹಿತಿ ಬಿಡುಗಡೆಗೊಳಿಸಿದ್ದಾರೆ. ನೀವು ವಾಹನವನ್ನು ಮನೆಯಿಂದ ರಸ್ತೆಗಿಳಿಸುವ ಮುನ್ನ ಈ ಸುದ್ದಿ ತಿಳಿದಿರಲೇಬೇಕು.

First published:

  • 19

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಬೆಂಗಳೂರಿನ ನಾಗರಿಕರೇ, ಟ್ರಾಫಿಕ್ ಪೊಲೀಸರು ನಿಮಗೊಂದು ಪ್ರಮುಖ ಮಾಹಿತಿ ಬಿಡುಗಡೆಗೊಳಿಸಿದ್ದಾರೆ. ನೀವು ವಾಹನವನ್ನು ಮನೆಯಿಂದ ರಸ್ತೆಗಿಳಿಸುವ ಮುನ್ನ ಈ ಸುದ್ದಿ ತಿಳಿದಿರಲೇಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಮೈಸೂರು ರಸ್ತೆಯ ಗಾಲಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ರಾಮವೇಣುಗೋಪಾಲ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಏಪ್ರಿಲ್ 1ರವರೆಗೆ ಪ್ರಯಾಣಿಕರಿಗೆ ಸೂಚನೆ ಹೊರಡಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಮಾರ್ಚ್ 31 ರಂದು ಬೆಳಗ್ಗೆ 8 ರಿಂದ ಏಪ್ರಿಲ್ 1 ರವರೆಗೆ ಮೈಸೂರು ರಸ್ತೆ ಮೂಲಕ ಮೈಸೂರು ರಸ್ತೆಯ ಹೊಸ ಗುಡ್ಡದಹಳ್ಳಿ ಜಂಕ್ಷನ್​ನಲ್ಲಿ ಎಡಕ್ಕೆ ತೆಗೆದುಕೊಳ್ಳಬೇಕಿದೆ. ಟಿಂಬರ್ ಯಾರ್ಡ್ ಮೂಲಕ ಹೋಗಿ ಮುನೇಶ್ವರ ಬ್ಲಾಕ್​ನಲ್ಲಿರುವ  50 ಅಡಿ ರಸ್ತೆಯಲ್ಲಿ ಪ್ರಯಾಣಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಹೀಗೆ ಸಾಗಿ ಪ್ರಯಾಣಿಕರು ಹೊಸಕೆರೆಹಳ್ಳಿ ಮಾರ್ಗವಾಗಿ ಸರ್ಕಲ್ ಮೂಲಕ ಮತ್ತೆ ಮೈಸೂರು ರಸ್ತೆಗೆ ನಾಯಂಡಹಳ್ಳಿ ಜಂಕ್ಷನ್ ಬಳಿ ಸೇರಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ವಿಜಯನಗರದಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಮತ್ತು ಬಿಎಚ್ಇಎಲ್ ಜಂಕ್ಷನ್​ನಿಂದ ನಗರಕ್ಕೆ ಹೋಗುವ ವಾಹನಗಳು ಬಾಪೂಜಿ ನಗರ ಜಂಕ್ಷನ್ ಮತ್ತು ಕೆಎಸ್ಆರ್ಟಿಸಿ ಜಂಕ್ಷನ್​ನಲ್ಲಿ ಯು-ಟರ್ನ್ ತೆಗೆದುಕೊಳ್ಳುವಂತಿಲ್ಲ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಈ ಮಾರ್ಗದ ಬದಲಾಗಿ ಪ್ರಯಾಣಿಕರು ಮೈಸೂರು ರಸ್ತೆಗೆ ಸಂಪರ್ಕಿಸಲು ಬಾಪೂಜಿ ನಗರ ಮೇಲ್ಸೇತುವೆಯನ್ನು ಬಳಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಹೊಸಕೆರೆಹಳ್ಳಿ, ಬನಶಂಕರಿ, ಬ್ಯಾಟರಾಯನಪುರ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಹೊಸ ಗುಡ್ಡದಹಳ್ಳಿ ಜಂಕ್ಷನ್​ನಲ್ಲಿ ಬಲಕ್ಕೆ ತೆಗೆದುಕೊಂಡು 50 ಅಡಿ ರಸ್ತೆ ಮತ್ತು ದೇವೇಗೌಡ ವೃತ್ತದ ಮೂಲಕ ನಾಯಂಡಹಳ್ಳಿ ಜಂಕ್ಷನ್​ಗೆ ತಲುಪಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ಹೀಗಾಗಿ ಕೆಎಸ್ಆರ್​ಟಿಸಿ, ಬಿಎಂಟಿಸಿ ಬಸ್​ಗಳು ಸೇರಿದಂತೆ ಎಲ್ಲ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Bengaluru Traffic: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

    ನಾಯಂಡಹಳ್ಳಿ, ಪಿಇಎಸ್ ವಿಶ್ವವಿದ್ಯಾಲಯ ಮತ್ತು ಕೆರೆಕೋಡಿ ಕಡೆಯಿಂದ ಬರುವ ವಾಹನಗಳನ್ನು ನಿರ್ಬಂಧಿಸಲಾಗಿದೆ. ಈ ರಸ್ತೆಗಳನ್ನು ತಾತ್ಕಾಲಿಕವಾಗಿ ಏಕಮುಖ ಮಾರ್ಗವಾಗಿ ಬದಲಾಯಿಸಲಾಗಿದೆ. ನಾಯಂಡಹಳ್ಳಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ವೀರಭದ್ರನಗರ ಸಿಗ್ನಲ್ ದಾಟಿ ಪಿಇಎಸ್ ವಿಶ್ವವಿದ್ಯಾಲಯ ಜಂಕ್ಷನ್​ನಲ್ಲಿ ಬಲಕ್ಕೆ ಪ್ರಯಾಣಿಸಲು ಸೂಚಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES