Indian Railways: ಬೆಂಗಳೂರಿನಿಂದ ದೇಶದ ಪ್ರಮುಖ ನಗರಕ್ಕೆ ವಿಶೇಷ ರೈಲು ಘೋಷಣೆ
ವಿಶೇಷ ರೈಲು ಬಕ್ಸರ್, ಮೊಘಲ್ ಸರಾಯ್, ವಾರಣಾಸಿ, ಅಲಹಾಬಾದ್, ಕಾನ್ಪುರ್, ಝಾನ್ಸಿ, ಭೋಪಾಲ್ ಮುಂತಾದ ದೇಶದ ಪ್ರಮುಖ ನಗರಗಳನ್ನು ಹಾದುಬರಲಿದ್ದು ಹಲವು ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಲಿದೆ.
ಬೆಂಗಳೂರಿನಿಂದ ಉತ್ತರ ಭಾರತದೆಡೆಗೆ ಪ್ರವಾಸ ಹೊರಡುವವರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ಭಾರತೀಯ ರೈಲ್ವೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಬಿಹಾರದ ರಾಜಧಾನಿ ಪಾಟ್ನಾಕ್ಕೆ ಹೊಸದಾಗಿ ವಿಶೇಷ ರೈಲನ್ನು ಘೋಷಣೆ ಮಾಡಿದೆ. (ಸಾಂದರ್ಭಿಕ ಚಿತ್ರ)
3/ 7
ಇದೇ ಡಿಸೆಂಬರ್ 15 ರಿಂದ ಈ ಹೊಸ ರೈಲುಗಳು ಪ್ರಯಾಣಿಕರಿಗೆ ಸೇವೆ ಒದಗಿಸಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
4/ 7
ಈ ವಿಶೇಷ ರೈಲುಗಳು ಒಟ್ಟು 1600 ಕಿಲೋ ಮೀಟರ್ ದೂರವನ್ನು ಸಂಚರಿಸಲಿವೆ. ವಿಶೇಷ ರೈಲು ಬಕ್ಸರ್, ಮೊಘಲ್ ಸರಾಯ್, ವಾರಣಾಸಿ, ಅಲಹಾಬಾದ್, ಕಾನ್ಪುರ್, ಝಾನ್ಸಿ, ಭೋಪಾಲ್ ಮುಂತಾದ ದೇಶದ ಪ್ರಮುಖ ನಗರಗಳನ್ನು ಹಾದುಬರಲಿದ್ದು ಹಲವು ರಾಜ್ಯಗಳ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸಲಿದೆ. (ಸಾಂದರ್ಭಿಕ ಚಿತ್ರ)
5/ 7
ಪಾಟ್ನಾ ಮತ್ತು ಬೆಂಗಳೂರು ರೈಲು ನಿಲ್ದಾಣಗಳಿಂದ ಇಡೀ ದಿನದ ವಿವಿಧ ವೇಳೆಗಳಲ್ಲಿ ಈ ರೈಲುಗಳು ಸಂಚಾರ ಆರಂಭಿಸಲಿವೆ. (ಸಾಂದರ್ಭಿಕ ಚಿತ್ರ)
6/ 7
ಸದ್ಯ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಆರಂಭಿಸಿರುವ ಭಾರತೀಯ ರೈಲ್ವೆ ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲನ್ನು ಆರಂಭಿಸುವ ಸನ್ನಾಹದಲ್ಲಿದೆ. (ಸಾಂದರ್ಭಿಕ ಚಿತ್ರ)
7/ 7
ಈ ವಿಶೇಷ ರೈಲುಗಳು ವರ್ಷಾಂತ್ಯಕ್ಕೆ ವಿವಿಧ ಊರುಗಳಿಗೆ ಪ್ರಯಾಣ ಮಾಡುವವರಿಗೂ ಸಹಕಾರಿಯಾಗಲಿವೆ. ಅಲ್ಲದೇ ಕರ್ನಾಟಕ ಮತ್ತು ಉತ್ತರ ಭಾರತದ ನಡುವೆ ಪ್ರಯಾಣ ಬೆಳೆಸುವವರಿಗೆ ಅತಿ ಹೆಚ್ಚು ಅನುಕೂಲ ಕಲ್ಪಿಸಿವೆ. (ಸಾಂದರ್ಭಿಕ ಚಿತ್ರ)