ಭಾರತೀಯ ರೈಲ್ವೆ ಬೆಂಗಳೂರು ಮತ್ತು ಕರಾವಳಿಯ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ. ಮುರುಡೇಶ್ವರ- ಬೆಂಗಳೂರು ನಡುವೆ ಸಂಚರಿಸುತ್ತಿದ್ದ ರೈಲು ಸೇವೆಯನ್ನು ವಿಸ್ತರಿಸಿದೆ ಆದೇಶಿಸಿದೆ. (ಸಾಂದರ್ಭಿಕ ಚಿತ್ರ)
2/ 7
ಬಹು ಬೇಡಿಕೆ ಹೊಂದಿದ್ದ ಮುರುಡೇಶ್ವರ- ಬೆಂಗಳೂರು ರೈಲಿನ ಸಂಚಾರ ಸೇವೆಯನ್ನು 2023ರ ಮೇ ತಿಂಗಳ ಕೊನೆಯವರೆಗೂ ಮುಂದುವರೆಸುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)
3/ 7
ಈ ಹಿಂದೆ ಮುರುಡೇಶ್ವರ-ಪಡೀಲ್ ಬೈಪಾಸ್-ಯಶವಂತಪುರ ನಡುವೆ ವಾರಕ್ಕೊಮ್ಮೆ ಈ ರೈಲು ಸೇವೆಯನ್ನು ಘೋಷಿಸಲಾಗಿತ್ತು. ಕೇವಲ ಚಳಿಗಾಲದ ಅವಧಿಗೆ ಮಾತ್ರ ಈ ರೈಲು ಸೇವೆಯನ್ನು ಒದಗಿಸಲು ತೀರ್ಮಾನಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
4/ 7
ಆದರೆ ಈ ರೈಲು ಸೇವೆಯನ್ನು ಇನ್ನಷ್ಟು ಕಾಲ ಮುಂದುವರೆಸುವಂತೆ ಬೇಡಿಕೆ ಕೇಳಿಬಂದಿತ್ತು, ರಾಜ್ಯ ರಾಜಧಾನಿ ಮತ್ತು ಕರಾವಳಿಯ ನಡುವೆ ಸಂಪರ್ಕ ಸೇತುವಾಗಿ ಈ ರೈಲು ಕೆಲಸ ಮಾಡುತ್ತಿತ್ತು. (ಸಾಂದರ್ಭಿಕ ಚಿತ್ರ)
5/ 7
ಬೆಂಗಳೂರಿನ ಯಶವಂತಪುರದಿಂದ ಶನಿವಾರ ರಾತ್ರಿ 11.55ಕ್ಕೆ ಪ್ರಯಾಣ ಆರಂಭಿಸುವ ಈ ರೈಲು ಮಾರನೇ ದಿನ ಮಧ್ಯಾಹ್ನ 1 ಗಂಟೆಗೆ ಮುರುಡೇಶ್ವರ ತಲುಪುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಮುರುಡೇಶ್ವರದಿಂದ ರವಿವಾರ ಮಧ್ಯಾಹ್ನ 1.30ಕ್ಕೆ ಸಂಚಾರ ಆರಂಭಿಸಿ ಮರುದಿನ ಬೆಳಗ್ಗೆ 4 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣ ತಲುಪುತ್ತದೆ. (ಸಾಂದರ್ಭಿಕ ಚಿತ್ರ)
7/ 7
ಬೆಂಗಳೂರಿನಲ್ಲಿ ವಾಸವಿರುವ ಕರಾವಳಿ ಭಾಗದ ಜನರಿಗೆ ಈ ರೈಲು ಅತಿ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಹೀಗಾಗಿ ಈ ರೈಲು ಸೇವೆಯ ಬೇಡಿಕೆ ಮನಗಂಡು ಮೇ ತಿಂಗಳವರೆಗೂ ಮುಂದುವರೆಸಲಾಗಿದೆ. (ಸಾಂದರ್ಭಿಕ ಚಿತ್ರ)