Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

ನೀವು ರೈಲು ಪ್ರಯಾಣಿಕರೇ, ಹಾಗಿದ್ದರೆ ಈ ಸುದ್ದಿಯನ್ನು ಖಂಡಿತ ಓದಲೇಬೇಕು. ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲಿನಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದೆ.

First published:

  • 19

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ನೀವು ರೈಲು ಪ್ರಯಾಣಿಕರೇ, ಹಾಗಿದ್ದರೆ ಈ ಸುದ್ದಿಯನ್ನು ಖಂಡಿತ ಓದಲೇಬೇಕು. ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲಿನಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಭಾರತೀಯ ರೈಲ್ವೆ ಇಲಾಖೆ ಈ ಕುರಿತು ಅಧಿಕೃಯ ಮಾಹಿತಿ ನೀಡಿದೆ. ಬೆಂಗಳೂರಿನಿಂದ ಮಧ್ಯಪ್ರದೇಶ ರಾಜ್ಯದ ಜಬಲ್ಪುರಕ್ಕೆ ಸೂಪರ್ ಫಾಸ್ಟ್ ರೈಲಿನ ಸೇವೆ ಒದಗಿಸಲಾಗಿದೆ.

    MORE
    GALLERIES

  • 39

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಕರ್ನಾಟಕದಿಂದ ಮಧ್ಯಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರೈಲಿನಲ್ಲಿ ಇನ್ಮುಂದೆ ಸ್ಲೀಪರ್ ಕೋಚ್ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಏಪ್ರಿಲ್ 8ರಿಂದಲೇ ಈ ಮಹತ್ವದ ಬದಲಾವಣೆ ಮಾಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಈ ರೈಲಿನಲ್ಲಿ ಸ್ಲೀಪರ್ ಕೋಚ್ ಬದಲಾಗಿ ಸ್ಲೀಪರ್ ಕೋಚ್ ಎಕಾನಮಿ ಬೋಗಿಯನ್ನು ಅಳವಡಿಸಲಾಗುತ್ತಿದೆ. ಈ ಸೇವೆಯು ಶಾಶ್ವತವಾಗಿ ಬೆಂಗಳೂರು ಜಬಲ್ಪುರ ರೈಲಿನಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ರಾಜ್ಯ ರಾಜಧಾನಿಯಿಂದ ವಿವಿಧ ಪ್ರದೇಶಗಳಿಗೆ ಪ್ರಯಾಣ ಬೆಳೆಸುವ ಮುನ್ನ ಗಮನಿಸಲೇಬೇಕಾದ ಮಹತ್ವದ ಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನ ದೇಶದ ಪ್ರಮುಖ ನಗರಕ್ಕೆ ಸೇವೆ ನೀಡುವ ರೈಲೊಂದರ ಸಂಚಾರ ರದ್ದುಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಬೆಂಗಳೂರು ಮತ್ತು ಜೋಲಾರ್​ಪೆಟ್ಟೈ ನಡುವಿನ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಈ ಮಾರ್ಗದ ಇನ್ನು ಹಲವು ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಭಾರತೀಯ ರೈಲ್ವೆ ಈ ಮಾರ್ಗದಲ್ಲಿ ಮಹತ್ವದ ಕಾಮಗಾರಿ ಕೈಗೊಂಡಿದೆ. ಈ ಮಾರ್ಗದಲ್ಲಿ ಸಮಚರಿಸುವ ರೈಲುಗಳ ವೇಗವನ್ನು ಗಂಟೆಗೆ 130 ಕಿಲೋ ಮೀಟರ್​ಗೆ ಹೆಚ್ಚಿಸಲು ಭರದ ಕಾಮಗಾರಿ ನಡೆಯುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಬೆಂಗಳೂರು- ಚೆನ್ನೈ ಮಾರ್ಗದ ಹಲವರು ಮೆಮು ರೈಲುಗಳು ರದ್ದು ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Bengaluru News: ಬೆಂಗಳೂರು ರೈಲಿನಲ್ಲಿ ಮಹತ್ವದ ಬದಲಾವಣೆ

    ಜೊತೆಗೆ ಬಂಗಾರಪೇಟೆ ಮತ್ತು ಕೆ.ಎಸ್.ಆರ್ ಬೆಂಗಳೂರು ನಡುವೆ ಸೇವೆ ಒದಗಿಸುತ್ತಿದ್ದ ಮೆಮು ವಿಶೇಷ ರೈಲನ್ನು ಪೂರ್ಣ ಪ್ರಮಾಣದಲ್ಲಿ ರದ್ದುಗೊಳಿಸಲಾಗಿದೆ ಎಂದು ಸಹ ರೈಲು ಇಲಾಖೆ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES