Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

Bengaluru Rains: ಬೆಂಗಳೂರಿನಲ್ಲಿ ಕೆಲವೇ ಕೆಲವು ದಿನಗಳ ಹಿಂದೆ ಮಳೆ ಬಿದ್ದಿದ್ದೇ ಸುಳ್ಳು ಎಂಬಷ್ಟರ ಮಟ್ಟಿಗೆ ಬಿಸಿಲಿನ ಝಳ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. 

First published:

  • 17

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಬೆಂಗಳೂರಿನಲ್ಲಿ ಕೆಲವೇ ಕೆಲವು ದಿನಗಳ ಹಿಂದೆ ಮಳೆ ಬಿದ್ದಿದ್ದೇ ಸುಳ್ಳು ಎಂಬಷ್ಟರ ಮಟ್ಟಿಗೆ ಬಿಸಿಲಿನ ಝಳ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಭಾರತೀಯ ಹವಾಮಾನ ಇಲಾಖೆಯು 1990 ರಿಂದ 2020 ರವರೆಗಿನ ಅಂಕಿ ಅಂಶಗಳ ಆಧಾರದ ಮೇಲೆ ಮೇ ತಿಂಗಳ ಸರಾಸರಿ ತಾಪಮಾನ 33.1 ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜಿಸಿದೆ. ಆದರೆ ಈ ವಾರದ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 33 ಮತ್ತು 35 ಡಿಗ್ರಿಗಳ ನಡುವೆ ಇರಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಎಂ.ಎನ್.ತಿಮ್ಮೇಗೌಡ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ, ಜೀವವೈವಿಧ್ಯ ಕಡಿಮೆಯಾಗುತ್ತಿದೆ. ಮರಗಳಿಗಿಂತ ಕಟ್ಟಡಗಳೇ ಮೇಲುಗೈ ಸಾಧಿಸುತ್ತಿವೆ ಎಂದು ವಿವರಿಸಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಸದ್ಯದ ಪರಿಸ್ಥಿತಿಯಲ್ಲಿ ಹವಾಮಾನದ ಕಾರಣದಿಂದ 500 ಮೀಟರ್​ಗಳಱ್ಟು ನಡೆಯುವುದು ಕಷ್ಟಕರವಾಗಿದೆ ಎಂದು ಹಲವು ಪರಿಸರ ಪರಿಣಿತರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಕಳೆದ ಕೆಲ ವರ್ಷಗಳ ಹಿಂದೆ ತಾಪಮಾನ 34 ಡಿಗ್ರಿ ದಾಟಿದ ನಂತರ ಬೆಂಗಳೂರಲ್ಲಿ ಭಾರೀ ಮಳೆಯಾಗುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ 35-36 ಡಿಗ್ರಿ ತಾಪಮಾನ ದಾಟಿದರೂ ಮಳೆಯಾಗುತ್ತಿಲ್ಲ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಭಾರತಕ್ಕೆ ಕೇರಳದ ಮುಖಾಂತರ ಜೂನ್ 4ರಂದು ಮುಂಗಾರು ಮಳೆ ಪ್ರವೇಶಿಸಲಿದೆ. ಇದೀಗ ಕರ್ನಾಟಕಕ್ಕೆ ಮುಂಗಾರು ಮಳೆ ಆಗಮನದ ಸಮಯದ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Heat Wave: ಬೆಂಗಳೂರಲ್ಲಿ ಯಾಕಿಷ್ಟು ಹೆಚ್ಚಾಗುತ್ತಿದೆ ಸೆಕೆ? ಮಹತ್ವದ ಮಾಹಿತಿ ಬಹಿರಂಗ

    ಕರ್ನಾಟಕಕ್ಕೆ ಜೂನ್ 2ನೇ ವಾರದಲ್ಲಿ ಮುಂಗಾರು ಮಳೆಯ ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಳೆ ಸ್ವಲ್ಪ ವಿಳಂಬವಾಗಿ ಆರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅಲ್ಲಿಯವರೆಗೂ ಈ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳಬೇಕಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES