Beautiful Bengaluru: ಯಾವ ಜಪಾನಿಗೂ ಕಮ್ಮಿ ಇಲ್ಲ ನಮ್ಮ ಬೆಂಗಳೂರು, ರಾಜಧಾನಿ ತುಂಬೆಲ್ಲಾ ಪಿಂಕ್ ಹೂಗಳ ಸಡಗರ!
ನಾವು ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಪ್ರಕೃತಿ ಸೊಬಗನ್ನು ಸವಿಯಬಹುದು. ಆದರೆ ನಮ್ಮದೇ ಮನೆಯ ಪಕ್ಕದ, ಊರಿನ ಪ್ರಕೃತಿಯ ವೈಭವವೂ ಯಾವುದಕ್ಕೂ ಕಡಿಮೆ ಇರುವುದಿಲ್ಲ ಎಂಬುದನ್ನು ಮರೆಯಬಾರದು. ಇದಕ್ಕೆ ತಾಜಾ ತಾಜಾ ಉದಾಹರಣೆ ನಮ್ಮ ಬೆಂಗಳೂರಿನ ಸೌಂದರ್ಯ!
ನಾವು ಪ್ರಪಂಚದಾದ್ಯಂತದ ವಿವಿಧ ಸ್ಥಳಗಳಿಗೆ ಪ್ರಯಾಣಿಸಿ ಪ್ರಕೃತಿ ಸೊಬಗನ್ನು ಸವಿಯಬಹುದು. ಆದರೆ ನಮ್ಮದೇ ಮನೆಯ ಪಕ್ಕದ, ಊರಿನ ಪ್ರಕೃತಿಯ ವೈಭವವೂ ಯಾವುದಕ್ಕೂ ಕಡಿಮೆ ಇರುವುದಿಲ್ಲ ಎಂಬುದನ್ನು ಮರೆಯಬಾರದು. ಇದಕ್ಕೆ ತಾಜಾ ತಾಜಾ ಉದಾಹರಣೆ ನಮ್ಮ ಬೆಂಗಳೂರಿನ ಸೌಂದರ್ಯ!
2/ 10
ಭಾರತದ ಐಟಿ ಹಬ್ ಕರ್ನಾಟಕದ ರಾಜಧಾನಿ ಬೆಂಗಳೂರಿನ ವಿವಿಧ ಬೀದಿಗಳಲ್ಲಿ ಈಗ ಪುಷ್ಪ ಪ್ರದರ್ಶನ. ಅದೂ ಪ್ರಕೃತಿಯೇ ಆಯೋಜಿಸಿರುವ ಹೂವಿನ ಸಂತೆ!
3/ 10
ಟಬೆಬುಯಾ ರೋಸಿಯಾ ಎಂದು ಕರೆಯಲ್ಪಡುವ ಈ ಹೂವು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅರಳಿ ನಿಂತಿದೆ. ಹಿಂದಿಯಲ್ಲಿ ಇದನ್ನು 'ಬಸಂತ್ ರಾಣಿ' ಎಂದು ಕರೆಯಲಾಗುತ್ತದೆ. ಟಬೆಬುಯಾ ರೋಸಿಯಾ ಸಸ್ಯಗಳು ಶೀಘ್ರವಾಗಿ ಬೆಳೆಯುತ್ತವೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಸಾಮಾನ್ಯವಾಗಿ ಹೂಬಿಡುವ ಅವಧಿಯಾಗಿದೆ.
4/ 10
ಈ ಮರಗಳು ಬೆಚ್ಚಗಿನ ಮತ್ತು ಶುಷ್ಕ ವಾತಾವರಣದಲ್ಲಿ ಚೆನ್ನಾಗಿ ಬೆಳೆದು ಹೂ ಅರಳಿಸುತ್ತವೆ. 2 ರಿಂದ 3 ವರ್ಷಗಳಲ್ಲಿ ಹೂಬಿಡಲು ಆರಂಭಿಸುತ್ತವೆ. ಆದರೆ ಚಳಿಗಾಲದಲ್ಲಿ ಎಲೆಗಳು ಉದುರುತ್ತವೆ.
5/ 10
ಬೆಂಗಳೂರು ಸೇರಿದಂತೆ ಭಾರತಕ್ಕೆ ನೂರಾರು ಹೊಸ ಪ್ರಭೇದ ಮತ್ತು ತಳಿಯ ಸಸ್ಯಗಳನ್ನು ಪರಿಚಯಿಸಿದವರು ಜಿ.ಎಚ್.ಕೃಂಬಿಗಲ್. ಟಬೆಬುಯಾ ರೋಸಿಯಾ ಹೂವನ್ನೂ ಅವರೇ ಬೆಂಗಳೂರಿನ ಅಂದ ಹೆಚ್ಚಿಸಲು ನೆಟ್ಟಿದ್ದರು ಎಂದು ಹೇಳಲಾಗುತ್ತದೆ.
6/ 10
ಅವರು ಬೆಂಗಳೂರಿನಲ್ಲಿರುವ ಲಾಲ್ ಬಾಗ್ ಸಸ್ಯೋದ್ಯಾನದ ಕ್ಯುರೇಟರ್ ಆಗಿ ಸೇವೆ ಸಲ್ಲಿಸಿದ್ದರು.
7/ 10
ವಿಶ್ವದ ಎಲ್ಲಾ ಪ್ರಮುಖ ಸಸ್ಯೋದ್ಯಾನಗಳ ಜೊತೆ ವ್ಯವಹರಿಸಿ, ನೂರಾರು ವಿದೇಶದ ಸಸ್ಯಗಳನ್ನು ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ತರಿಸಿ ನೆಟ್ಟಿದ್ದರಿಂದ ಲಾಲ್ಬಾಗ್ ಸಸ್ಯಸಂಪತ್ತು ಇನ್ನಷ್ಟು ಸುಂದರವಾಯಿತು.
8/ 10
ಬೆಂಗಳೂರನ್ನು ಸುಂದರಗೊಳಿಸಿದ ಅವರ ಸ್ಮರಣಾರ್ಥ ಲಾಲ್ ಬಾಗ್ ಉದ್ಯಾನವನದ ಪಕ್ಕದಲ್ಲಿ ರಾಷ್ಟ್ರೀಯ ವಿದ್ಯಾಶಾಲೆಯ ಮುಂದೆ ಸಾಗುವ ರಸ್ತೆಗೆ ಕೃಂಬಿಗಲ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
9/ 10
ಮೈಸೂರು, ಬರೋಡಾ ನಗರಗಳಲ್ಲೂ ಉದ್ಯಾನವನಗಳನ್ನು ಸ್ಥಾಪಿಸಿದ ಕೀರ್ತಿ ಜಿ.ಎಚ್.ಕೃಂಬಿಗಲ್ ಅವರದ್ದು.
10/ 10
ರಸ್ತೆಬದಿಯಲ್ಲಿ ಅರಳಿ ನಿಂತ ಈ ಮರಗಳು..ಅವುಗಳ ಚಂದದ ಹೂವು. ಹಿನ್ನೆಲೆಯಲ್ಲಿ ನೀಲಿ ಆಕಾಶ. ಒಂಥರಾ ಕ್ಯಾನ್ವಾಸ್ ಫೋಟೊ ನೋಡಿದಂತೆ.. ನೋಡಲು ಎರಡು ಕಣ್ಣು ಏನಕ್ಕೂ ಸಾಲದು..