Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ, ಇನ್ನೆರಡು ದಿನಗಳಲ್ಲಿ ಸಂಜೆ ಅಥವಾ ರಾತ್ರಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.

First published:

  • 17

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    ಬೆಂಗಳೂರು ನಗರ ಸೇರಿದಂತೆ ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಮಳೆಯ ಕುರಿತು ಹವಾಮಾನ ಇಲಾಖೆ ಮಹತ್ವದ ಸೂಚನೆ ನೀಡಿದೆ. ಈ ಭಾಗಗಳಲ್ಲಿ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    ಅಷ್ಟೇ ಅಲ್ಲದೇ, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಹ ಎರಡು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ, ಇನ್ನೆರಡು ದಿನಗಳಲ್ಲಿ ಸಂಜೆ ಅಥವಾ ರಾತ್ರಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನಿಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    ಚಾಮರಾಜನಗರ, ಕೊಡಗು ಜಿಲ್ಲೆಯ ಒಂದೆರಡು ಕಡೆ ಗುಡುಗು ಸಹಿತ ಮಳೆಯಾಗಲಿದೆ. ಆದರೆ ರಾಜ್ಯದ ಕರಾವಳಿ, ಒಳನಾಡಿನ ಹಲವೆಡೆ ಮಳೆ ಸುರಿಯುವ ಸಾಧ್ಯತೆಯಿಲ್ಲ. ಒಣಹವೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    ಯುಗಾದಿಗೂ ಮುನ್ನ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಗದಗ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆ ರೈತರಿಗೆ ಭಾರೀ ನಷ್ಟವನ್ನು ಉಂಟು ಮಾಡಿತ್ತು. ಅದರಲ್ಲೂ ಮಳೆಯೊಂದಿಗೆ ಆಲಿಕಲ್ಲು ಸುರಿದ ಪರಿಣಾಮ ಬೆಳೆದು ನಿಂತಿದ್ದ ಬೆಳೆ ಕೈ ಸೇರುವ ಮುನ್ನ ನಾಶವಾಗಿ ರೈತರು ಕಣ್ಣೀರಿಡುವ ಸ್ಥಿತಿ ಎದುರಾಗಿತ್ತು. (ಸಾಂದರ್ಭಿಕ ಸಾವು)

    MORE
    GALLERIES

  • 67

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    [caption id="attachment_909189" align="alignnone" width="1280"] 1901ರ ನಂತರ ಹಾಗೂ ಕಳೆದ ಮೂವತ್ತು ವರ್ಷಗಳ ಅವಧಿಯನ್ನು ಗಮನಿಸುವುದಾದರೆ ಈ ವರ್ಷ ಫೆಬ್ರವರಿಯಲ್ಲಿ ಅತ್ಯಂತ ಹೆಚ್ಚಿನ ಬಿಸಿಲು ದಾಖಲಾಗಿದೆ. ಇದರ ಪರಿಣಾಮದಿಂದ ದೇಶದಲ್ಲಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 77

    Bengaluru Rains: ಇನ್ನೆರಡು ದಿನ ಗುಡುಗು-ಮಳೆ, ಈ ಭಾಗದಲ್ಲಿ ಮಾತ್ರ ಒಣಹವೆ

    ಹವಾಮಾನದಲ್ಲಿ ಉಂಟಾಗುತ್ತಿರುವ ತೀವ್ರ ಬದಲಾವಣೆಯಿಂದ ಈ ವರ್ಷದ ಆರಂಭದ ಪೂರ್ವ ಮುಂಗಾರು ಚಟುವಟಿಕೆಗಳು ಬೇಗ ಪ್ರಾರಂಭವಾಗುತ್ತದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES