Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

Bangalore Rains Latest News: ಬೆಂಗಳೂರಿನ 226 ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಪೂರ್ವ ವಲಯದಲ್ಲಿ ಹೆಚ್ಚು ಸಮಸ್ಯೆ ಉಂಟಾಗುವ ಪ್ರದೇಶಗಳಿವೆ.

First published:

  • 17

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    ಬೆಂಗಳೂರಿನ ನಾಗರಿಕರೇ, ಮಳೆಗಾಲ ಸಮೀಪಿಸುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಸ್ವಲ್ಪವೇ ಸ್ವಲ್ಪ ಮಳೆ ಬಂದರೂ ಸಾಕು, ಪ್ರವಾಹ ಉಂಟಾಗುವ ಹಲವು ಪ್ರದೇಶಗಳಿವೆ. ಈ ಕುರಿತು ಮಹತ್ವದ ವರದಿಯೊಂದು ಬಿಡುಗಡೆಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಇತ್ತೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗೆ ಪ್ರವಾಹ ಪೀಡೀತ ಸ್ಥಳಗಳ ವರದಿಯನ್ನು ಕಳುಹಿಸಿದೆ. ಈ ವರದಿಯಲ್ಲಿ ಬೆಂಗಳೂರು ನಗರದಲ್ಲಿ ಮಳೆಯ ಸಮಯದಲ್ಲಿ ಪ್ರವಾಹಕ್ಕೆ ಒಳಗಾಗುವ 226 ಸ್ಥಳಗಳನ್ನು ಗುರುತಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    ಈ ವರದಿಯು ಮಳೆಯ ಪ್ರಭಾವದ ಆಧಾರದ ಮೇಲೆ ಪ್ರದೇಶಗಳನ್ನು ವಿವಿಧ ವಲಯಗಳಾಗಿ ವರ್ಗೀಕರಿಸಿದೆ. ಇದರ ಪ್ರಕಾರ ಬೆಂಗಳೂರು ನಗರದಲ್ಲಿ ಕೇವಲ ಒಂದು ಸೆಂಟಿಮೀಟರ್ ಮಳೆಯಾದರೂ ಕೆಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತದೆ! (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    ಉದಾಹರಣೆಗೆ, ಪಾಣತ್ತೂರು ಮುಖ್ಯರಸ್ತೆ, ತೂಬರಹಳ್ಳಿಯಲ್ಲಿ ಒಂದು ಸೆಂಟಿಮೀಟರ್ ಮಳೆಯಾದರೆ ಈ ಪ್ರದೇಶದ ನಿರ್ದಿಷ್ಟ ಭಾಗಗಳಲ್ಲಿ ಪ್ರವಾಹ ಉಂಟಾಗುತ್ತದೆ. 3 ಸೆಂ.ಮೀ ಮಳೆಯಾದರೆ ಕಲ್ಯಾಣ್ ನಗರ ರಿಂಗ್ ರಸ್ತೆಯು ಜಲಾವೃತವಾಗುವ ಸಾಧ್ಯತೆಯಿದೆ ಎಂದು ವರದಿ ಸೂಚಿಸುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    ಒಂದುವೇಳೆ4 ಸೆಂ.ಮೀಗಿಂತ ಹೆಚ್ಚು ಮಳೆಯಾದರೆ ಕೆಆರ್ ಪುರ, ಮಹದೇವಪುರ, ವಿಜ್ಞಾನ ನಗರ, ಐಟಿಪಿಬಿ ಮುಖ್ಯರಸ್ತೆ, ಟಿನ್ ಫ್ಯಾಕ್ಟರಿ ಮುಂತಾದ ಪ್ರದೇಶಗಳು ಜಲಾವೃತಗೊಳ್ಳುತ್ತವೆ. 5 ಸೆಂ.ಮೀ ಗಿಂತ ಹೆಚ್ಚು ಮಳೆಯಾದರೆ ಬೆಳ್ಳಂದೂರು, ಎಚ್ಎಎಲ್ ಎರಡನೇ ಹಂತಗಳಲ್ಲಿ ಪರಿಸ್ಥಿತಿ ಕಷ್ಟವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    10 ಸೆಂಟಿಮೀಟರ್​ಗಿಂತ ಹೆಚ್ಚು ಮಳೆಯಾದರೆ ರಾಮನಗೌಡನಹಳ್ಳಿ, ಗಂಗೋತ್ರಿ ರಸ್ತೆ, ಹೆಣ್ಣೂರು ರಸ್ತೆ, ಯೆಮಲೂರು, ಹೊರಮಾವು, ವಿದ್ಯಾಪೀಠ ವೃತ್ತದಂತಹ ಪ್ರದೇಶಗಳಲ್ಲಿ ಸಮಸ್ಯೆ ಎದುರಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Rains: ಬೆಂಗಳೂರಿನ 226 ಪ್ರದೇಶಗಳಲ್ಲಿ ಪ್ರವಾಹ!

    ಬೆಂಗಳೂರಿನ 226 ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಪೂರ್ವ ವಲಯದಲ್ಲಿ ಹೆಚ್ಚು ಸಮಸ್ಯೆ ಉಂಟಾಗುವ ಪ್ರದೇಶಗಳಿವೆ. ಪಶ್ಚಿಮ ಮತ್ತು ದಕ್ಷಿಣ (ತಲಾ 40), ಮಹದೇವಪುರ ಮತ್ತು ಬೊಮ್ಮನಹಳ್ಳಿ (ತಲಾ 24), ಆರ್​ಆರ್ ನಗರ (23), ಯಲಹಂಕ (11), ಮತ್ತು ದಾಸರಹಳ್ಳಿ (ಮೂರು) ಪ್ರವಾಹ ಪೀಡಿತ ಪ್ರದೇಶಗಳಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES