ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಅಂಡರ್ಪಾಸ್ನಲ್ಲಿ ಓರ್ವ ಯುವತಿ ಮೃತಪಟ್ಟ ಬೆನ್ನಲ್ಲೇ ಬಿಬಿಎಂಪಿ ಪ್ರಮುಖ ನಿರ್ಧಾರ ಕೈಗೊಂಡಿದೆ. ಮುಂದಿನ ದಿನಗಳಲ್ಲಿ ಅಂಡರ್ಪಾಸ್ನಿಂದ ಯಾವುದೇ ಹಾನಿ ಉಂಟಾಗಬಾರದು ಎಂದು ಬಿಬಿಎಂಪಿ ತೀರ್ಮಾನಿಸಿದೆ.
2/ 7
ಬೆಂಗಳೂರಿನ ಪ್ರಮುಖ ಅಂಡರ್ಪಾಸ್ಗಳನ್ನು ಮಳೆಗಾಲ ಮುಗಿಯುವವರೆಗೂ ಬಂದ್ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
3/ 7
ಇಂಜಿನಿಯರ್ ಇನ್ ಚೀಫ್ ವರದಿ ಆಧರಿಸಿ ಯಾವ್ಯಾವ ಅಂಡರ್ಪಾಸ್ ಬಂದ್ ಮಾಡಬೇಕು ಎಂದು ಬಿಬಿಎಂಪಿ ನಿರ್ಧರಿಸಲಿದೆ.
4/ 7
ಅಲ್ಲದೇ ದೆಹಲಿ ಮಾದರಿಯಲ್ಲಿ ಅಂಡರ್ಪಾಸ್ಗಳ ನಿರ್ವಹಣೆಗೆ ಸಹ ಸರ್ಕಾರ ಚಿಂತನೆ ನಡೆಸಿದೆ ಎಂದು ಸಂಯುಕ್ತ ಕರ್ನಾಟಕ ವರದಿ ಮಾಡಿದೆ. ಅಂಡರ್ಪಾಸ್ ಅವಘಡ ಸಾರ್ವಜನಿಕವಾಗಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
5/ 7
ಬೆಂಗಳೂರು ನಗರದಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದ (Bengaluru Rains) ಕೆ.ಆರ್.ವೃತ್ತದ ಅಂಡರ್ ಪಾಸ್ನಲ್ಲಿ ಮಳೆನೀರಿಗೆ ಸಿಲುಕಿ 22 ವರ್ಷದ ಯುವತಿ ಸಾವನ್ನಪ್ಪಿದ್ದಾರೆ.
6/ 7
ರಭಸ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೇ ಇರುವುದು ನಿರ್ಲಕ್ಷ್ಯದ ಪರಮಾವಧಿ ಎಂದು ಸಾಮಾಜಿಕ ಜಾಲತಾಣ ಸೇರಿದಂತೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಇಂದು ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ. ಸಂಜೆ ವೇಳೆ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿವೆ. (ಸಾಂದರ್ಭಿಕ ಚಿತ್ರ)
First published:
17
Bengaluru Rains: ಪ್ರಮುಖ ಅಂಡರ್ಪಾಸ್ಗಳು ಬಂದ್!