ಬೆಂಗಳೂರು ನಗರದ ನಿವಾಸಿಗಳೇ, ಇಲ್ಲಿ ಗಮನಿಸಿ. ನಾಳೆ, ಅಂದರೆ ಜನವರಿ 13ರಂದು ಬೆಂಗಳೂರು ನಗರ ಪ್ರದೇಶದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)
2/ 7
ಹೌದು, ಬೆಂಗಳೂರಿನ ಈ ಕೆಳಗಿನ ಭಾಗಗಳಲ್ಲಿ ನಾಳೆ ಕರೆಂಟ್ ಇರುವುದಿಲ್ಲ. ನಾಳೆ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಈ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)
3/ 7
ಉತ್ತರಹಳ್ಳಿ, ಸಚ್ಚಿದಾನಂದ ನಗರ, ವಡ್ಡರಪಾಳ್ಯ, ಗಾಣಕಲ್ಲು, ಮೈಲಸಂದ್ರ, ಐಡಿಯಲ್ ಹೋಮ್ಸ್, ಬಿಇಎಂಎಲ್ ಲೇಔಟ್, ರಾಜರಾಜೇಶ್ವರಿ ದೇವಸ್ಥಾನ, ಪಟ್ಟಣಗೆರೆ, ಗ್ಲೋಬಲ್ ವಿಲೇಜ್, ಬಿಜಿಎಸ್ ಆಸ್ಪತ್ರೆ, ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರುವುದಿಲ್ಲ. (ಸಾಂದರ್ಭಿಕ ಚಿತ್ರ)
4/ 7
ಜೊತೆಗೆ ನಾಳೆ ಕೆಂಗೇರಿ ಭಾಗಗಳು, ಚನ್ನಸಂದ್ರ, ಪೂರ್ಣ ಪ್ರಜ್ಞಾ ಲೇಔಟ್, ಬಿಎಚ್ಸಿಎಸ್ ಲೇಔಟ್ ಮತ್ತು ಉಪನಗರ ಸೇಂಟ್ ಉರಗಹಳ್ಳಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)
5/ 7
ವಿದ್ಯುತ್ ತಂತಿ ಪರಿಶೀಲನೆ, ಸ್ಟ್ರಿಂಗ್ ಮಾಡುವುದು, ಕೂಲಂಕುಷ ಪರೀಕ್ಷೆ, ತುರ್ತು ಕ್ಲಿಯರಿಂಗ್, ತ್ರೈಮಾಸಿಕ ಮತ್ತು ಲೈನ್ ನಿರ್ವಹಣೆ ಇರುವ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. (ಸಾಂದರ್ಭಿಕ ಚಿತ್ರ)
6/ 7
ಒಟ್ಟಾರೆ ನಾಳೆ ವರ್ಕ್ ಫ್ರಂ ಹೋಮ್ ಮಾಡುವವರು ಮುನ್ನೆಚ್ಚರಿಕಾ ಕ್ರಮವಾಗಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. (ಸಾಂದರ್ಭಿಕ ಚಿತ್ರ)
7/ 7
ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ ಸೇರಿದಂತೆ ಇನ್ನಿತರ ಸ್ಥಳೀಯ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಡಿಜಿಟಲ್ಗೆ ಆಗಾಗ ಭೇಟಿ ನೀಡುತ್ತಿರಿ. (ಸಾಂದರ್ಭಿಕ ಚಿತ್ರ)