ಬೆಂಗಳೂರಿನ ನಿವಾಸಿಗಳೇ ಗಮನಿಸಿ, ಬೆಂಗಳೂರಿನ ಪ್ರಮುಖ ಫ್ಲೈ ಓವರ್ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
2/ 8
ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪೀಣ್ಯ ಫ್ಲೈಓವರ್ ಮೇಲೆ ಘನ ವಾಹನಗಳ ಓಡಾಟವನ್ನು ಮತ್ತೊಮ್ಮೆ ನಿರ್ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಹಿಂದಿನ ವರ್ಷ ಪೀಣ್ಯ ಫ್ಲೈಓವರ್ನ ಎರಡು ಪಿಲ್ಲರ್ನ ಕೇಬಲ್ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡಬಂದಿತ್ತು. ಹೀಗಾಗಿ ಆಗಲೂ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. (ಸಾಂದರ್ಭಿಕ ಚಿತ್ರ)
4/ 8
ಆದರೆ ಈಗ ಫ್ಲೈಓವರ್ನ ಎಲ್ಲಾ ಪಿಲ್ಲರ್ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕ ಎದುರಾಗಿದೆ. ಈ ಕಾರಣದಿಂದ ಮತ್ತೆ ಪೀಣ್ಯ ಫ್ಲೈಓವರ್ನ ಮೇಲೆ ಭಾರೀ ವಾಹನಗಳ ಓಡಾಟ ಬಂದ್ ಮಾಡಲಾಗಿದೆ.
5/ 8
ಪೀಣ್ಯ ಫ್ಲೈಓವರ್ನ ಕೇಬಲ್ ಕಿತ್ತು ಬರುವ ಮುನ್ನವೇ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಹೊಸ ಕೇಬಲ್ಗಳನ್ನು ಅಳವಡಿಸಲು ಯೋಚನೆ ರೂಪಿಸಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಮುಂದಿನ 125 ದಿನಗಳ ಕಾಲ ಪೀಣ್ಯ ಫ್ಲೈಓವರ್ ಮೇಲೆ ಭಾರೀ ವಾಹನಗಳು ಹೋಗುವಂತಿಲ್ಲ ಎಂದು ಖಡಕ್ ಆದೇಶ ಹೊರಡಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 8
ನೀವೇನಾದ್ರೂ ಭಾರೀ ವಾಹನವನ್ನು ಪೀಣ್ಯ ಫ್ಲೈಓವರ್ ಮೇಲೆ ಒಯ್ಯುವ ಪ್ರಯತ್ನ ಮಾಡಿದ್ರೆ ಫ್ಲೈಓವರ್ ಏರುವ ಮುನ್ನವೇ ಟ್ರಾಫಿಕ್ ಪೊಲೀಸರು ನಿಮ್ಮನ್ನು ತಡೆಯಲಿದ್ದಾರೆ. (ಸಾಂದರ್ಭಿಕ ಚಿತ್ರ)
8/ 8
ಬೆಂಗಳೂರಿನಲ್ಲಿ ಪ್ರತಿದಿನ ಏನಾಗ್ತಿದೆ ಎಂದು ತಿಳಿಯೋಕೆ, ಬೆಂಗಳೂರಿನ ಸ್ಥಳೀಯ ಸುದ್ದಿಗಳನ್ನು ತಿಳಿದುಕೊಳ್ಳಲು ನ್ಯೂಸ್ 18 ಕನ್ನಡ ವೆಬ್ಸೈಟ್ಗೆ ಪ್ರತಿದಿನ ಭೇಟಿ ನೀಡಿ (ಸಾಂದರ್ಭಿಕ ಚಿತ್ರ)