ಬೆಂಗಳೂರಲ್ಲಿ ನೀವು ಅತ್ತಿಂದಿತ್ತ ಸಂಚರಿಸಿದರೆ ಅಲ್ಲಲ್ಲಿ ಬೆಂಗಳೂರು ಒನ್ ಕಾಣಸಿಗುತ್ತೆ. ಈ ಬೆಂಗಳೂರು ಒನ್ನಲ್ಲಿ ಏನೆಲ್ಲ ಸೇವೆ ಸಿಗುತ್ತೆ ಅಂತ ಯಾವತ್ತಾದ್ರೂ ಯೋಚಿಸಿದ್ದೀರಾ? ಈ ಕೇಂದ್ರಗಳಿಗೆ ಎಂದಾದ್ರೂ ಭೇಟಿ ನೀಡಿದ್ದೀರಾ? (ಸಾಂದರ್ಭಿಕ ಚಿತ್ರ)
2/ 7
ಇತ್ತೀಚಿಗಷ್ಟೇ ನಿಮ್ಮ ಮದುವೆಯಾಗಿದೆ, ಅಥವಾ ಮದುವೆಯಾಗಿ ಹಲವು ವರ್ಷಗಳೇ ಕಳೆದುಹೋಗಿದೆ. ಆದ್ರೂ ನಿಮ್ಮ ಮದುವೆ ಸರ್ಟಿಫಿಕೇಟ್ ಇಲ್ಲ. ಈ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಬಹುದಾ? (ಸಾಂದರ್ಭಿಕ ಚಿತ್ರ)
3/ 7
ಇಲ್ಲ, ನೀವು ಬೆಂಗಳೂರು ಒನ್ ಕೇಂದ್ರಗಳಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸೋಕೆ ಆಗಲ್ಲ. ಆದ್ರೆ ಈ ಹಲವು ಸೇವೆಗಳನ್ನು ಬೆಂಗಳೂರು ಒನ್ ಕೇಂದ್ರಗಳು ಒದಗಿಸುತ್ತವೆ. (ಸಾಂದರ್ಭಿಕ ಚಿತ್ರ)
4/ 7
ಹಾಗಾದ್ರೆ ಬೆಂಗಳೂರು ಒನ್ ಕೇಂದ್ರಗಳು ಯಾವೆಲ್ಲ ಸೇವೆ ಒದಗಿಸುತ್ತವೆ? ನಾವೇ ಹೇಳ್ತೀವಿ ಕೇಳಿ. (ಸಾಂದರ್ಭಿಕ ಚಿತ್ರ)
5/ 7
ಬೆಂಗಳೂರು ಒನ್ ಸಮಗ್ರ ನಾಗರಿಕ ಸೇವೆಗಳನ್ನು ಒದಗಿಸುವ ಯೋಜನೆ. ವಿವಿಧ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶ ಈ ಕೇಂದ್ರದ್ದು. (ಸಾಂದರ್ಭಿಕ ಚಿತ್ರ)
6/ 7
ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ನೀರಿನ ಬಿಲ್ ಮುಂತಾದವುಗಳನ್ನು ನೀವಿಲ್ಲಿ ಪಾವತಿಸಬಹುದು. ಅಲ್ಲದೇ ಆಧಾರ್ ಕಾರ್ಡ್ಗೆ ಸಂಬಂಧಿಸಿದ ವಿವಿಧ ಸೇವೆಗಳು ಸಹ ಇಲ್ಲಿ ಲಭ್ಯವಿವೆ. (ಸಾಂದರ್ಭಿಕ ಚಿತ್ರ)
7/ 7
ಬೆಂಗಳೂರು ನಾಗರಿಕರೇ, ಇನ್ನೇಕೆ ತಡ? ನಿಮ್ಮ ದೈನಂದಿನ ಜೀವನಕ್ಕೆ ಅಗತ್ಯವಿರುವ ಹತ್ತು ಹಲವು ಸೇವೆಗಳನ್ನು ಸರ್ಕಾರ ಆರಂಭಿಸಿರುವ ಈ ಕೇಂದ್ರಗಳಲ್ಲಿ ಸುಲಭವಾಗಿ ಪಡೆಯಿರಿ (ಸಾಂದರ್ಭಿಕ ಚಿತ್ರ)