ಹೊಸವರ್ಷ ಆಚರಿಸೋಕೆ ವಿದೇಶ ಪ್ರಯಾಣ ಮಾಡುವ ರೂಢಿ ನಿಮಗೂ ಇದೆಯೇ? ಈಗಾಗಲೇ ವಿದೇಶ ಪ್ರಯಾಣಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ್ದೀರಾ? ಅಥವಾ ಬುಕ್ ಮಾಡಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ನೀವು ತಪ್ಪದೇ ಓದಬೇಕಾದ ಸುದ್ದಿ. (ಸಾಂದರ್ಭಿಕ ಚಿತ್ರ)
2/ 8
ವಿಯೆಟ್ನಾಂ ಪ್ರವಾಸ ಮಾಡ್ಬೇಕು ಅಂದ್ಕೊಂಡಿದ್ದೀರಾ? ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ಬೆಂಗಳೂರಿನಿಂದ ನೂರಾರು ಜನರು ವಿಯೆಟ್ನಾಂ ಪ್ರವಾಸಕ್ಕೆ ವಿಯೆಟ್ಜೆಟ್ ಏರ್ ಎಂಬ ವಿಮಾನಯಾನ ಕಂಪನಿಯ ವಿಮಾನ ಟಿಕೆಟ್ ಬುಕ್ ಮಾಡಿದ್ದರು. (ಸಾಂದರ್ಭಿಕ ಚಿತ್ರ)
3/ 8
ಈ ವಿಮಾನಯಾನ ಕಂಪನಿಯು ವಿಯೆಟ್ನಾಂಗೆ ಅತಿ ಕಡಿಮೆ ದರದ ಟಿಕೆಟ್ ಹೊಂದಿತ್ತು. ಹೀಗಾಗಿ ವಿಯೆಟ್ಜೆಟ್ ಏರ್ ಎಂಬ ಕಂಪನಿಯ ವಿಮಾನದ ಟಿಕೆಟ್ಗಳನ್ನೇ ಹಲವರು ಬುಕ್ ಮಾಡಿದ್ದರು. ಆದರೂ ಅವರು ವಿಯೆಟ್ನಾಂಗೆ ತೆರಳಲು ಸಾಧ್ಯವಾಗುತ್ತಿಲ್ಲ! (ಸಾಂದರ್ಭಿಕ ಚಿತ್ರ)
4/ 8
ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದಾಗ, ವಿಯೆಟ್ಜೆಟ್ ಏರ್ ಸಂಸ್ಥೆಯು ಬೆಂಗಳೂರಿನಿಂದ ಯಾವುದೇ ಸೇವೆಯನ್ನೂ ನೀಡುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ! ಈ ಕುರಿತು ಟೈಮ್ಸ್ ನೌ ವರದಿ ಮಾಡಿದೆ. (ಸಾಂದರ್ಭಿಕ ಚಿತ್ರ)
5/ 8
ಕೆಲವೇ ಕೆಲವು ಪ್ರಯಾಣಿಕರಿಗೆ ಮಾತ್ರ ವಿಮಾನ ರದ್ದಾಗಿದೆ ಎಂಬ ವಿಷಯವನ್ನು ಇ-ಮೇಲ್ ಮೂಲಕ ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)
6/ 8
ಕೆಲವೇ ಕೆಲವು ಪ್ರಯಾಣಿಕರಿಗೆ ಮಾತ್ರ ವಿಮಾನ ರದ್ದಾಗಿದೆ ಎಂಬ ವಿಷಯವನ್ನು ಇ-ಮೇಲ್ ಮೂಲಕ ತಿಳಿಸಲಾಗಿದೆ. (ಸಾಂದರ್ಭಿಕ ಚಿತ್ರ)
7/ 8
ನಾಗರಿಕ ವಿಮಾನಯಾನ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಬೆಂಗಳೂರಿನಿಂದ ವಿದೇಶಿ ವಿಮಾನಯಾನ ಸಂಸ್ಥೆಗಳು ಭಾರತದಿಂದ ವಿಯೆಟ್ನಾಂಗೆ ಸೇವೆ ನೀಡುವುದಿಲ್ಲ. (ಸಾಂದರ್ಭಿಕ ಚಿತ್ರ)
8/ 8
ನವೆಂಬರ್ ಮೊದಲ ವಾರದಿಂದ ಬೆಂಗಳೂರು ಮತ್ತು ಹೈದರಾಬಾದ್ನಿಂದ ಹೊಸ ಸೇವೆಗಳನ್ನು ಪ್ರಾರಂಭಿಸುವುದಾಗಿ ವಿಯೆಟ್ಜೆಟ್ ಏರ್ ಈ ಹಿಂದೆ ಘೋಷಿಸಿತ್ತು. ಆದರೆ ಈ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬೆಂಗಳೂರಿನಿಂದ ವಿಯೆಟ್ನಾಂಗೆ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಮೋಸ ಹೋಗಿದ್ದಾರೆ. (ಸಾಂದರ್ಭಿಕ ಚಿತ್ರ)