Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

Bengaluru News: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಕಾಮಗಾರಿ ಭರದಿಂದ ಸಾಗುತ್ತಿದೆ. ರಾಜ್ಯ ರಾಜಧಾನಿಯ ಹಲವು ಪ್ರಮುಖ ಪ್ರದೇಶಗಳಲ್ಲಿ ಇನ್ನೂ ಮೆಟ್ರೋ ಸೇವೆ ದೊರೆತಿಲ್ಲ.

First published:

  • 17

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವಿಸ್ತರಣೆ ಕಾಮಗಾರಿ ಭರದಿಂದ ಸಾಗುತ್ತಿದೆ. ರಾಜ್ಯ ರಾಜಧಾನಿಯ ಹಲವು ಪ್ರಮುಖ ಪ್ರದೇಶಗಳಲ್ಲಿ ಇನ್ನೂ ಮೆಟ್ರೋ ಸೇವೆ ದೊರೆತಿಲ್ಲ. ಹೀಗಾಗಿ ಶೀಘ್ರ ಟ್ರಾಫಿಕ್ ಹೆಚ್ಚಿರುವ ರಸ್ತೆಗಳಲ್ಲಿ ಅನುಕೂಲ ಮಾಡಿಕೊಡಲು ಮೆಟ್ರೋ ಕಾಮಗಾರಿ ನಡೆಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಇದೇ ವೇಳೆ ನಮ್ಮ ಮೆಟ್ರೋ ಕಾಮಗಾರಿಗಾಗಿ 1,754 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಎರಡನೇ ಹಂತದ ನಮ್ಮ ಮೆಟ್ರೋ ಕಾಮಗಾರಿಗೆ ಗಣನೀಯವಾಗಿ ವೆಚ್ಚವಾಗಿದೆ. ಕೇವಲ ರಸ್ತೆ ವಿಸ್ತರಣೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಡೇರಿ ವೃತ್ತದಿಂದ ಗೊಟ್ಟಿಗೆರೆವರೆಗೆ, ವೈಟ್ಫೀಲ್ಡ್ ಮುಖ್ಯ ರಸ್ತೆ (ಮಹದೇವಪುರ ಮೆಟ್ರೊ ನಿಲ್ದಾಣದವರೆಗೆ), ಟಿನ್ ಫ್ಯಾಕ್ಟರಿ ಜಂಕ್ಷನ್ ಮತ್ತು ಹೊಸೂರು ರಸ್ತೆ (ಸಿಲ್ಕ್ ಬೋರ್ಡ್ ಜೆಎನ್ನಿಂದ ಬೊಮ್ಮಸಂದ್ರ) ವಿಸ್ತರಣೆಗೆ 1,483 ಕೋಟಿ ರೂ. ವೆಚ್ಚವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಒಟ್ಟಾರೆಯಾಗಿ ನಮ್ಮ ಮೆಟ್ರೋ 1.76 ಲಕ್ಷ ಚದರ ಮೀಟರ್ನ ಹೊಸ ರಸ್ತೆಗಳನ್ನು ನಿರ್ಮಿಸಲು 1,691 ಆಸ್ತಿಗಳನ್ನು ಸಂಗ್ರಹಿಸಿದೆ. ಸ್ವಾಧೀನಪಡಿಸಿಕೊಂಡ ಪ್ರತಿ ಚದರ ಅಡಿ ಭೂಮಿಗೆ ಸರಾಸರಿ 9,000 ರೂ. ಪಾವತಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಜೊತೆಗೆ ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವಿನ 2.5-ಕಿಲೋ ಮೀಟರ್ ದೂರದ ಮೆಟ್ರೋ ಮಾರ್ಗವು ಜೂನ್ ತಿಂಗಳ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಈ ಮಾರ್ಗದಲ್ಲಿ ಎರಡು ತಿಂಗಳೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿ ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Bengaluru Metro: ನಮ್ಮ ಮೆಟ್ರೋ ಕಾಮಗಾರಿಗೆ ಸಾವಿರಾರು ಕೋಟಿ ಖರ್ಚು, ಇಲ್ಲಿದೆ ಲೆಕ್ಕ

    ಈ ಮಾರ್ಗದಲ್ಲಿ ಟ್ರ್ಯಾಕ್ ಹಾಕುವುದು ಮತ್ತು ಸಿಗ್ನಲ್ ಸಿಸ್ಟಮ್ ಅಳವಡಿಕೆ ಸೇರಿದಂತೆ ಎಲ್ಲಾ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಪರೀಕ್ಷೆ ಮತ್ತು ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES