Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

ಮಾರ್ಚ್ 11 ರಂದು ಬೆಂಗಳೂರು- ಮೈಸೂರು ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಅದೇ ದಿನ ಹೊಸ ಮೆಟ್ರೋ ಮಾರ್ಗವನ್ನು ಪ್ರಧಾನಿಯವರ ಬಳಿ ಲೋಕಾರ್ಪಣೆಗೊಳಿಸುವ ಯೋಜನೆ ಹಾಕಲಾಗಿದೆ.

 • News18 Kannada
 • |
 •   | Bangalore [Bangalore], India
First published:

 • 18

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ಬೆಂಗಳೂರು ನಾಗರಿಕರೇ, ನಿಮಗೊಂದು ಸಂತಸದ ಸುದ್ದಿ ಇಲ್ಲಿದೆ. ಬೆಂಗಳೂರು ನಗರದಲ್ಲಿ ಎರಡು ಪ್ರಮುಖ ಪ್ರದೇಶಗಳ ನಡುವಿನ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 28

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ಬೆಂಗಳೂರಿನ ವೈಟ್​ಫೀಲ್ಡ್ ಮತ್ತು ಕೆಆರ್ ಪುರಂ ನಡುವೆ 12 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲು ಸೇವೆ ಒದಗಿಸಲು ಬಿಎಂಆರ್ಸಿಎಲ್ ಮಹತ್ವದ ಯೋಜನೆ ರೂಪಿಸಿದೆ. ಈ ರೈಲು ಸೇವೆ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಲಿದೆ ಎನ್ನಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 38

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ವೈಟ್​ಫೀಲ್ಡ್ ಮತ್ತು ಕೆಆರ್ ಪುರಂ ನಡುವೆ ಸೇವೆ ನೀಡಲಿರುವ ಈ ರೈಲು ಕೇವಲ 22 ನಿಮಿಷಗಳಲ್ಲಿ ಈ ಎರಡೂ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ.  ಮಾರ್ಚ್ 11 ರಂದು ಬೆಂಗಳೂರು- ಮೈಸೂರು ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಅದೇ ದಿನ ಹೊಸ ಮೆಟ್ರೋ ಮಾರ್ಗವನ್ನು ಪ್ರಧಾನಿಯವರ ಬಳಿ ಲೋಕಾರ್ಪಣೆಗೊಳಿಸುವ ಯೋಜನೆ ಹಾಕಲಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 48

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ಕೆಆರ್ ಪುರಂ-ವೈಟ್​ಫೀಲ್ಡ್ ಮಾರ್ಗವು ಬೈಯಪ್ಪನಹಳ್ಳಿ-ವೈಟ್​ಫೀಲ್ಡ್ ಮಾರ್ಗದ 1 ನೇ ಹಂತದ ಮೆಟ್ರೋ ಕಾಮಗಾರಿಯ ಭಾಗವಾಗಿದೆ. ಈ ಮಾರ್ಗದ ನಡುವೆ ಸೇವೆಯು ಮಾರ್ಚ್ 10ರ ನಂತರ ಆರಂಭವಾಗುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 58

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ಇದೇ ರೀತಿ ಕೆಆರ್ ಪುರಂ ಮತ್ತು ಬೈಯಪ್ಪನಹಳ್ಳಿ ನಡುವೆ 2 ನೇ ಹಂತದ ಮೆಟ್ರೋ ಕಾಮಗಾರಿಯು ಜೂನ್ ತಿಂಗಳಿನಲ್ಲಿ ಪ್ರಾರಂಭವಾಗಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 68

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ಆರ್. ಪುರ ಮತ್ತು ವೈಟ್​ಫೀಲ್ಡ್ ಮಾರ್ಗ 13 ಕಿಲೋ ಮೀಟರ್ ಉದ್ದವಿದೆ. ಈ ಮಾರ್ಗದ ಸಂಪೂರ್ಣ ಆರಂಭದ ನಂತರ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆಯಾಗುವ ನಿರೀಕ್ಷೆಯಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 78

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ಬೆಂಗಳೂರು ನಮ್ಮ ಮೆಟ್ರೋ 2023ರಲ್ಲಿ 30.09 ಕಿಲೋ ಮೀಟರ್ ವಿಸ್ತರಣೆ ಆಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡುವಲ್ಲಿ ಈ ವಿಸ್ತರಣೆ ಪ್ರಮುಖ ಪಾತ್ರ ವಹಿಸಲಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 88

  Bengaluru Namma Metro: 22 ನಿಮಿಷಗಳಲ್ಲಿ ವೈಟ್‌ಫೀಲ್ಡ್ ಟು ಕೆಆರ್ ಪುರ ನಡುವೆ ಓಡಾಡಿ!

  ನಮ್ಮ ಮೆಟ್ರೋದಲ್ಲಿ ಈ ವರ್ಷ 3 ಮಾರ್ಗಗಳು ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳಲಿವೆ.ಅಲ್ಲದೇ ವೈಟ್​ಫೀಲ್ಡ್ ಮಾರ್ಗ ಮಾರ್ಚ್ ತಿಂಗಳಿನಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES